For Quick Alerts
  ALLOW NOTIFICATIONS  
  For Daily Alerts

  ನಟಿ ತಾಪ್ಸಿ ಪನ್ನು ಗೆ ಪ್ರತಾಪ್ ಸಿಂಹ ಟ್ವೀಟ್ ಟಾಂಗ್

  |

  ನಟಿ ತಾಪ್ಸಿ ಪನ್ನು ಟ್ವೀಟ್ ಸಖತ್ ವೈರಲ್ ಆಗಿದೆ. ತಾಪ್ಸಿ ಪನ್ನು ಟ್ವೀಟ್‌ಗೆ ಅದೇ ಟ್ವಿಟ್ಟರ್‌ನಲ್ಲಿ ಉತ್ತರ ಕೊಟ್ಟಿದ್ದಾರೆ ಬಿಜೆಪಿಯ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ.

  ಎಲ್ಲವೂ ಪ್ರಾರಂಭವಾಗಿದ್ದು ರಿಹಾನ್ನ ಟ್ವೀಟ್ ನಿಂದಾಗಿ. ಪಾಪ್ ಗಾಯಕಿ ರಿಹಾನ್ನ ಭಾರತದ ರೈತ ಪ್ರತಿಭಟನೆಗೆ ಬೆಂಬಲಿಸಿ ಟ್ವೀಟ್ ಮಾಡಿದ್ದರು. ಇದನ್ನು ವಿರೋಧಿಸಿ, 'ಇದು ನಮ್ಮ ಆಂತರಿಕ ವಿಷಯ ಹೊರಗಿನವರು ಮಾತನಾಡಬಾರದು' ಎಂಬರ್ಥದಲ್ಲಿ ಹಲವು ಬಾಲಿವುಡ್ ನಟರು, ಕ್ರೀಡಾ ಸ್ಟಾರ್‌ಗಳು ಟ್ವೀಟ್ ಮಾಡಿದರು.

  ಒಂದು ಟ್ವೀಟ್ ನಿಮ್ಮ ಐಕ್ಯತೆಯನ್ನು ಕೆರಳಿಸಿತೆ? ಟ್ರೆಂಡ್ ಆಯ್ತು #AntiNationalBollywood.!

  ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿದ ತಾಪ್ಸಿ ಪನ್ನು, 'ಒಂದು ಟ್ವೀಟ್ ನಿಮ್ಮ ಐಕ್ಯತೆಯನ್ನು ಒಡೆಯುವುದಾದರೆ, ಒಂದು ಜೋಕ್ ನಿಮ್ಮ ನಂಬಿಕೆಯನ್ನು ಅಲುಗಾಡಿಸುವುದಾದರೆ, ಒಂದು ಘಟನೆ ನಿಮ್ಮ ಧಾರ್ಮಿಕ ನಂಬಿಕೆಗೆ ಧಕ್ಕೆ ತರುವುದಾದರೆ, ನೀವು ನಿಮ್ಮ ನಂಬಿಕೆಗಳನ್ನು ಗಟ್ಟಿಮಾಡಿಕೊಳ್ಳಬೇಕಿದೆಯೇ ಹೊರತು ಬೇರೆಯವರಿಗೆ ಆದರ್ಶದ ಪಾಠ ಮಾಡುವ ಶಿಕ್ಷಕರಾಗಬಾರದು' ಎಂದರು. ಈ ಟ್ವೀಟ್ ಭಾರಿ ವೈರಲ್ ಆಯಿತು.

  ಇದಕ್ಕೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ, 'ಒಬ್ಬ ರಶೀದ್‌ನಿಂದಾಗಿ ಇಡೀಯ ಮುಸ್ಲಿಂ ಸಮುದಾಯವನ್ನು ಕೆರಳುವಂತೆ ಮಾಡಿದ. ಒಂದು ಕಾರ್ಟೂನು ವಿಶ್ವದ ಮುಸ್ಲೀಮರು ಕೆರಳುವಂತೆ ಮಾಡಿತು. 'ಡಾ ವಿಂಚಿ ಕೋಡ್' ಎಂಬ ಒಂದು ಪುಸ್ತಕ ಕ್ರಿಸ್ತರನ್ನು ಕೆರಳಿಸಿತು. ನೀವು ಕೂಡ ಒಂದು ಏಟಿನಿಂದಾಗಿ ಮದುವೆ ಮುರಿದುಕೊಂಡಿರಿ (ತಪ್ಪಡ್ ಸಿನಿಮಾದಲ್ಲಿ). ಸಿನಿಮಾ ಸಂಭಾಷಣೆ ಹೇಳುವುದಕ್ಕೆ ನೀವು ನಿಮ್ಮನ್ನು ನಿಯಂತ್ರಿಸಿಕೊಳ್ಳಿ, ಉಳಿದ ಸಂಗತಿಗಳು ನಿಮ್ಮ ಜ್ಞಾನದಿಂದ ಹೊರಗಿವೆ' ಎಂದಿದ್ದಾರೆ ಪ್ರತಾಪ್ ಸಿಂಹ.

  ನಿಮ್ಮ ಜೊತೆಗೆ ನಾನಿದ್ದೀನಿ ಅಂತ ಸಾಥ್ ಕೊಟ್ರು ಅಪ್ಪು ಸರ್ | Filmibeat Kannada

  ತಾಪ್ಸಿ ಪನ್ನು ಟ್ವೀಟ್‌ಗೆ ಹಲವಾರು ಮಂದಿ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ. ನಟ ಅಭಯ್ ಡಿಯೋಲ್ ಇನ್ನೂ ಹಲವಾರು ಮಂದಿ ತಾಪ್ಸಿ ಪನ್ನುಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

  English summary
  Mysuru-Kodagu BJP MP Prathap Simha reacted to Taapsee Pannu's viral tweet about rattle.
  -->

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X