twitter
    For Quick Alerts
    ALLOW NOTIFICATIONS  
    For Daily Alerts

    'ಕೆಜಿಎಫ್ 2', 'RRR' ಎರಡರ ಕಲೆಕ್ಷನ್ ಅನ್ನೂ ಒಂದೇ ವಾರಕ್ಕೆ ಹಿಂದಿಕ್ಕಿತು ಈ ಸಿನಿಮಾ!

    |

    ಅತಿ ಹೆಚ್ಚು ಕಲೆಕ್ಷನ್ ಮಾಡಿದ ಈ ವರ್ಷದ ಸಿನಿಮಾ 'ಕೆಜಿಎಫ್ 2'. ವಿಶ್ವದಾದ್ಯಂತ ಕಲೆಕ್ಷನ್ ಲೆಕ್ಕ ಹಾಕಿದರೆ 'ಕೆಜಿಎಫ್ 2' ಸಿನಿಮಾ ಸುಮಾರು 1500 ಕೋಟಿಗೂ ಹೆಚ್ಚು ಹಣ ಗಳಿಸಿದೆ ಎನ್ನಲಾಗುತ್ತಿದೆ.

    ಗಳಿಕೆಯಲ್ಲಿ 'ಕೆಜಿಎಫ್ 2' ಸಿನಿಮಾದ ಬಳಿಕದ ಸ್ಥಾನ ಗಳಿಸಿರುವುದು ತೆಲುಗಿನ ಸೂಪರ್ ಹಿಟ್ ಸಿನಿಮಾ 'RRR'. ರಾಜಮೌಳಿ ನಿರ್ದೇಶಿಸಿ ಜೂ ಎನ್‌ಟಿಆರ್ ಹಾಗೂ ರಾಮ್ ಚರಣ್ ತೇಜ ನಟಿಸಿರುವ ಈ ಸಿನಿಮಾ ವಿಶ್ವದಾದ್ಯಂತ 1200 ಕೋಟಿಗೂ ಹೆಚ್ಚು ಹಣ ಗಳಿಸಿದೆ.

    ಗಳಿಕೆಯಲ್ಲಿ ಈ ವರ್ಷ ದಾಖಲೆ ಬರೆದ ಎರಡು ಸಿನಿಮಾಗಳಿವು. ಇವುಗಳ ಬಳಿಕ ಇನ್ನಾವ ಸಿನಿಮಾವು 1000 ಕೋಟಿ ಕಲೆಕ್ಷನ್ ದಾಟಲು ಸಾಧ್ಯವಾಗಲಿಲ್ಲ. ಆದರೆ ಇದೀಗ ಹೊಸ ಸಿನಿಮಾ ಒಂದು ಬಂದಿದೆ. 'ಕೆಜಿಎಫ್ 2', 'RRR' ಎರಡೂ ಸಿನಿಮಾಗಳ ಕಲೆಕ್ಷನ್ ದಾಖಲೆಯನ್ನು ಒಂದೇ ವಾರದಲ್ಲಿ ಮುರಿದು ಬಿಸಾಡಿದೆ. ಆದರೆ ಇದು ಭಾರತದ ಸಿನಿಮಾ ಅಲ್ಲ ಹಾಲಿವುಡ್ ಸಿನಿಮಾ!

    'ಬ್ಲಾಕ್ ಪ್ಯಾಂಥರ್: ವಕಾಂಡಾ ಫಾರೆವರ್'

    'ಬ್ಲಾಕ್ ಪ್ಯಾಂಥರ್: ವಕಾಂಡಾ ಫಾರೆವರ್'

    ಮಾರ್ವೆಲ್ ಸಂಸ್ಥೆಯ 'ಬ್ಲಾಕ್ ಪ್ಯಾಂಥರ್: ವಕಾಂಡಾ ಫಾರೆವರ್' ಸಿನಿಮಾ ನವೆಂಬರ್ 11 ರಂದು ವಿಶ್ವದಾದ್ಯಂತ ಬಿಡುಗಡೆ ಆಗಿದೆ. 'ಬ್ಲಾಕ್ ಪ್ಯಾಂಥರ್' ಸಿನಿಮಾ ಸರಣಿಯ ಎರಡನೇ ಸಿನಿಮಾ ಇದಾಗಿದ್ದು, 'ಬ್ಲಾಕ್ ಪ್ಯಾಂಥರ್' ಪಾತ್ರಧಾರಿ ಚಾಡ್‌ವಿಕ್ ಬೋಸ್‌ಮೆನ್ ನಿಧನವಾದ ಬಳಿಕ ಬಿಡುಗಡೆ ಆಗುತ್ತಿರುವ ಮೊದಲ 'ಬ್ಲಾಕ್ ಪ್ಯಾಂಥರ್' ಸಿನಿಮಾ ಇದಾಗಿದೆ. ಹಾಗಾಗಿ ಸಹಜವಾಗಿಯೇ ಸಿನಿಮಾದ ಬಗ್ಗೆ ಭಾರಿ ಕುತೂಹಲ ಇತ್ತು.

    ಎರಡೂ ಸಿನಿಮಾಗಳ ಕಲೆಕ್ಷನ್ ದಾಖಲೆ ಮುರಿದ ಸಿನಿಮಾ

    ಎರಡೂ ಸಿನಿಮಾಗಳ ಕಲೆಕ್ಷನ್ ದಾಖಲೆ ಮುರಿದ ಸಿನಿಮಾ

    ಸಿನಿಮಾವು ಬಿಡುಗಡೆ ಆದ ಒಂದು ವಾರದಲ್ಲಿ ವಿಶ್ವದಾದ್ಯಂತ 400 ಮಿಲಿಯನ್ ಡಾಲರ್ ಕಲೆಕ್ಷನ್ ಮಾಡಿದೆ. 400 ಮಿಲಿಯನ್ ಡಾಲರ್ ಅನ್ನು ಭಾರತೀಯ ರುಪಾಯಿಯಲ್ಲಿ ಲೆಕ್ಕ ಹಾಕಿದರೆ ಬರೋಬ್ಬರಿ 3260 ಕೋಟಿ ರುಪಾಯಿಯಾಗುತ್ತದೆ. 'ಕೆಜಿಎಫ್ 2' ಹಾಗೂ 'RRR' ಸಿನಿಮಾದ ಒಟ್ಟು ಕಲೆಕ್ಷನ್ ಅನ್ನು 'ಬ್ಲ್ಯಾಕ್ ಪ್ಯಾಂಥರ್' ಸಿನಿಮಾ ಕೇವಲ ಒಂದು ವಾರದಲ್ಲಿ ಮುರಿದು ಹಾಕಿದೆ. ಅಮೆರಿಕ ಒಂದರಲ್ಲೇ ಈ ಸಿನಿಮಾ 1700 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ವಿಶ್ವದ ಇನ್ನುಳಿದ ದೇಶಗಳಲ್ಲಿ ಇನ್ನುಳಿದ ಕಲೆಕ್ಷನ್ ಮಾಡಿದೆ.

    ಉತ್ತಮ ಓಪನಿಂಗ್ ಪಡೆದ ಸಿನಿಮಾ

    ಉತ್ತಮ ಓಪನಿಂಗ್ ಪಡೆದ ಸಿನಿಮಾ

    ಈ ವರ್ಷ ಅತಿ ಹೆಚ್ಚು ಹಣ ಗಳಿಸಿದ ಹಾಲಿವುಡ್ ಸಿನಿಮಾ ಎಂಬ ಖ್ಯಾತಿಗೂ 'ಬ್ಲ್ಯಾಕ್ ಪ್ಯಾಂಥರ್; ವಕಾಂಡ ಫಾರೆವರ್' ಸಿನಿಮಾ ಪಾತ್ರವಾಗಿದೆ. 'ಬ್ಲಾಕ್ ಆಡಮ್ಸ್', 'ಬ್ಯಾಟ್‌ ಮ್ಯಾನ್' ಇನ್ನೂ ಹಲವು ಹಿಟ್ ಹಾಲಿವುಡ್ ಸಿನಿಮಾಗಳು ಈ ವರ್ಷ ಬಿಡುಗಡೆ ಆಗಿವೆ. ಆದರೆ 'ಬ್ಲಾಕ್ ಪ್ಯಾಂಥರ್‌'ನಷ್ಟು ಇನ್ನಾವ ಸಿನಿಮಾ ಓಪನಿಂಗ್ ಕಂಡಿಲ್ಲ. ಕಳೆದ ವರ್ಷ ಬಿಡುಗಡೆ ಆಗಿದ್ದ 'ಟೆನೆಟ್' ಸಿನಿಮಾ ದೊಡ್ಡ ಹಿಟ್ ಆಗಿತ್ತು. ಕೋವಿಡ್ ನಡುವೆಯೂ ಸುಮಾರು 4000 ಕೋಟಿ ಹಣ ಬಾಚಿತ್ತು 'ಟೆನೆಟ್' ಹಾಲಿವುಡ್ ಸಿನಿಮಾ.

    'ಬ್ಲಾಕ್ ಪ್ಯಾಂಥರ್' ಪಾತ್ರದಲ್ಲಿ ಲಿಟಿಯಾ ರೈಟ್

    'ಬ್ಲಾಕ್ ಪ್ಯಾಂಥರ್' ಪಾತ್ರದಲ್ಲಿ ಲಿಟಿಯಾ ರೈಟ್

    'ಬ್ಲಾಕ್ ಪ್ಯಾಂಥರ್; ವಕಾಂಡಾ ಫಾರೆವರ್' ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹಾಗಿದ್ದಾಗಿಯೂ ಸಿನಿಮಾ ಉತ್ತಮ ಕಲೆಕ್ಷನ್ ಅನ್ನು ವಿಶ್ವದಾದ್ಯಂತ ಮಾಡುತ್ತಿದೆ. 'ಬ್ಲಾಕ್ ಪ್ಯಾಂಥರ್' ಪಾತ್ರಧಾರಿ ಚೋಡ್ವಿಕ್ ಬೋಸ್‌ಮನ್ ನಿಧನವಾದ ಬಳಿಕ 'ಬ್ಲಾಕ್ ಪ್ಯಾಂಥರ್' ಪಾತ್ರದಲ್ಲಿ ಲಿಟಿಯಾ ರೈಟ್ ಕಾಣಿಸಿಕೊಂಡಿದ್ದಾರೆ.

    English summary
    Black Panther: Wakanda Forever Hollywood movie collects more than 3260 crore rs world wide in first week.
    Saturday, November 19, 2022, 15:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X