Don't Miss!
- News
ಟರ್ಕಿಯಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ: ಅಧಿಕ ಸಾವುನೋವುಗಳ ಭೀತಿ!
- Automobiles
ಭಾರತದಲ್ಲಿ ಹೆಚ್ಚು ಪವರ್ಫುಲ್ ಆಗಿರುವ ಕಮ್ಮಿ ಬೆಲೆಯ ಕಾರುಗಳು: ಟಾಟಾದಿಂದ ಮಹೀಂದ್ರಾವರೆಗೆ...
- Technology
ಆಪಲ್ ಗ್ರಾಹಕರಿಗೆ ಬಿಗ್ ಶಾಕ್; ಆದ್ರೂ, ಗ್ರಾಹಕರಿಗೆ ಕೊನೆಯ ಅವಕಾಶ ನೀಡಿದೆ!
- Sports
WIPL 2023: ಮಹಿಳಾ ಐಪಿಎಲ್ಗಾಗಿ ತನ್ನ ಕೋಚಿಂಗ್ ಬಳಗ ಪ್ರಕಟಿಸಿದ ಮುಂಬೈ ಇಂಡಿಯನ್ಸ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸ್ಟಾರ್ ನಟನ ಚಿತ್ರಕ್ಕಾಗಿ ಕನ್ನಡಕ್ಕೆ ಬಂದ ಹಿಂದಿ ನಟ ಗೋವಿಂದ
ಬಾಲಿವುಡ್ ಹಿರಿಯ ನಟ, ಚಿತ್ರರಂಗದ ಆಲ್ ರೌಂಡರ್ ಗೋವಿಂದ ದಕ್ಷಿಣ ಚಿತ್ರರಂಗದ ಕಡೆ ಆಸಕ್ತಿ ತೋರಿದ್ದಾರೆ. 1986ರಿಂದಲೂ ಹಿಂದಿ ಚಿತ್ರರಂಗದಲ್ಲಿ ತೊಡಗಿಕೊಂಡಿರುವ ಗೋವಿಂದ ಸೌತ್‌ನಲ್ಲಿ ಯಾವುದೇ ಪೂರ್ಣ ಪ್ರಮಾಣದ ಚಿತ್ರದಲ್ಲಿ ನಟಿಸಿಲ್ಲ. ಈಗ ಹೊರಬಿದ್ದಿರುವ ಸುದ್ದಿಯ ಪ್ರಕಾರ, ಗೋವಿಂದ ಸೌತ್ ಎಂಡಸ್ಟ್ರಿಗೆ ಎಂಟ್ರಿ ಕೊಡುತ್ತಿದ್ದಾರೆ.
ಅದರಲ್ಲೂ ಸ್ಯಾಂಡಲ್‌ವುಡ್‌ಗೆ ಗೋವಿಂದ ಎಂಟ್ರಿ ಕೊಡುತ್ತಿರುವುದು ವಿಶೇಷವೆನಿಸಿಕೊಂಡಿದೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಇನ್ನು ಹೆಸರಿಡದ ಚಿತ್ರವೊಂದಕ್ಕೆ ಗೋವಿಂದ ಬರುವ ಸಾಧ್ಯತೆ ಹೆಚ್ಚಿದೆ ಎಂಬ ಸುದ್ದಿ ಹೊರಬಿದ್ದಿದೆ.
ಅಣ್ಣಾವ್ರ
ಹಾಡು
ಹಾಡಿದ
ಬಾಲಿವುಡ್
ಖ್ಯಾತ
ನಟ
ಗೋವಿಂದ:
ವಿಡಿಯೋ
ಹಂಚಿಕೊಂಡ
ನಟಿ
ಹರ್ಷಿಕಾ
ಕಳೆದ ಹತ್ತು ವರ್ಷದಿಂದ ಗೋವಿಂದ ಸಿನಿಮಾಗಳಲ್ಲಿ ನಟಿಸುವುದು ಕಡಿಮೆಯಾಗಿದೆ. ಅಲ್ಲೊಂದು ಇಲ್ಲೊಂದು ಚಿತ್ರ ಮಾಡುತ್ತಾ ಬಂದಿದ್ದಾರೆ ಅಷ್ಟೆ. ಆದರೆ ಕಿರುತೆರೆಯಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಡ್ಯಾನ್ಸ್ ಶೋ, ಸಿಂಗಿಂಗ್ ಶೋ, ಕಾಮಿಡಿ ಶೋ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ, ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಈ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ.
ಇನ್ನು ಪ್ರಜ್ವಲ್ ದೇವರಾಜ್ ಚಿತ್ರದಲ್ಲಿ ಗೋವಿಂದ ನಟಿಸುವ ಕುರಿತು ಬೆಳವಣಿಗೆ ಸಹ ಆಗಿದೆ. ಚಿತ್ರದ ನಿರ್ದೇಶಕ ಕಿರಣ್ ವಿಶ್ವನಾಥ್ ಹಾಗೂ ನಿರ್ಮಾಪಕ ನವೀನ್ ಗೋವಿಂದ ಅವರನ್ನು ಭೇಟಿ ಮಾಡಿ ಒಂದು ಸುತ್ತಿನ ಮಾತುಕತೆ ಸಹ ಮಾಡಿದ್ದಾರೆ. ಸ್ಕ್ರಿಪ್ಟ್ ಕೇಳಿ ಆಸಕ್ತಿ ತೋರಿಸಿದ್ದಾರೆ. ಈ ಬಗ್ಗೆ ಶೀಘ್ರದಲ್ಲಿ ಅಧಿಕೃತವಾಗಿ ಘೋಷಣೆ ಮಾಡಲಿದ್ದೇವೆ ಎಂದು ನಿರ್ದೇಶಕ ಖಚಿತಪಡಿಸಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಮುಂದೆ ಓದಿ...
ಬಾಲಿವುಡ್
ಜನರ
ಕುತಂತ್ರಗಳ
ಬಿಚ್ಚಿಟ್ಟ
ಹಿರಿಯ
ನಟ
ಗೋವಿಂದ

ಅಣ್ಣಾವ್ರ ದೊಡ್ಡ ಅಭಿಮಾನಿ
ಗೋವಿಂದ ಅವರು ಕರ್ನಾಟಕಕ್ಕೆ ಹಾಗೂ ಬೆಂಗಳೂರಿನ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ಅವರ ಸಂಬಂಧಿಕರು ಇಲ್ಲಿ ಇದ್ದಾರೆ. ವಿಶೇಷ ಅಂದ್ರೆ ಗೋವಿಂದ ಅವರು ಡಾ ರಾಜ್ ಕುಮಾರ್ ಅವರ ಬಹುದೊಡ್ಡ ಅಭಿಮಾನಿ. ಇತ್ತೀಚಿಗಷ್ಟೆ ಅಣ್ಣಾವ್ರ 'ಎರಡು ಕನಸು' ಚಿತ್ರದ 'ಎಂದೆಂದೂ ನಿನ್ನನು ಮರೆತು ನಾನಿರಲಾರೆ....' ಹಾಡನ್ನು ಗೋವಿಂದ ಹಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಕನ್ನಡ ಹಾಡು ಹಾಡಿದ್ದ ಗೋವಿಂದ
ನಟಿ ಹರ್ಷಿಕಾ ಪೂಣಚ್ಚ ಅವರು ಸಿನಿಮಾ ಚಿತ್ರೀಕರಣವೊಂದರಲ್ಲಿ ಗೋವಿಂದ ಅವರನ್ನು ಭೇಟಿ ಮಾಡಿದಾಗ, ಕನ್ನಡ ಹಾಡು ಹಾಡಿದ್ದರು. ಆ ಹಾಡನ್ನು ಹರ್ಷಿಕಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ಹಾಡು ಗೋವಿಂದ ಅವರಿಗೆ ಬಹಳ ಇಷ್ಟವಂತೆ. ಇದಕ್ಕೂ ಮುಂಚೆ ಹಿಂದಿ ರಿಯಾಲಿಟಿ ಶೋವೊಂದರಲ್ಲಿಯೂ ಗೋವಿಂದ ಕನ್ನಡ ಹಾಡು ಹಾಡಿದ್ದರು. ಹೀಗೆ, ಮೊದಲಿನಿಂದಲೂ ಕನ್ನಡ ಸಿನಿಮಾ ಹಾಗೂ ಕರ್ನಾಟಕದ ಮೇಲೆ ಅಭಿಮಾನ ಹೊಂದಿರುವ ಗೋವಿಂದ ಈಗ ಅಧಿಕೃತವಾಗಿ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಕಿರಣ್ ಚೊಚ್ಚಲ ಸಿನಿಮಾ
ಪ್ರಜ್ವಲ್ ದೇವರಾಜ್ ಸಿನಿಮಾ ಬಗ್ಗೆ ಹೇಳುವುದಾದರೆ ಈ ಚಿತ್ರಕ್ಕೆ ಇನ್ನು ಹೆಸರಿಟ್ಟಿಲ್ಲ. ಈ ಹಿಂದೆ ರನ್ನ, ಕೆಂಪೇಗೌಡ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಕಿರಣ್ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಇದು ಇವರ ಚೊಚ್ಚಲ ಸಿನಿಮಾ ಆಗಲಿದ್ದು, ನವೆಂಬರ್ ತಿಂಗಳಿನಿಂದ ಚಿತ್ರೀಕರಣ ಮಾಡುವ ಪ್ಲಾನ್ ಮಾಡಿಕೊಂಡಿದ್ದಾರೆ.

ಅರ್ಜುನ್ ಗೌಡ ರಿಲೀಸ್‌ಗೆ ರೆಡಿ
'ಇನ್ಸ್‌ಪೆಕ್ಟರ್ ವಿಕ್ರಂ' ಸಿನಿಮಾದ ಬಳಿಕ ಪ್ರಜ್ವಲ್ ನಟನೆಯ ಯಾವ ಸಿನಿಮಾನೂ ತೆರೆಗೆ ಬಂದಿಲ್ಲ. ದಿವಂಗತ ನಿರ್ಮಾಪಕ ರಾಮು ಬ್ಯಾನರ್‌ನಲ್ಲಿ ತಯಾರಾಗಿರುವ 'ಅರ್ಜುನ್ ಗೌಡ' ಬಿಡುಗಡೆಗೆ ಸಜ್ಜಾಗಿದೆ. ಇದರ ಜೊತೆಗೆ 'ವೀರಂ' ಸಿನಿಮಾನೂ ಸಿದ್ದವಾಗುತ್ತಿದೆ. ಅಬ್ಬರ ಎನ್ನುವ ಚಿತ್ರಗಳಲ್ಲಿಯೂ ಪ್ರಜ್ವಲ್ ನಟಿಸುತ್ತಿದ್ದಾರೆ.

ಗುರುದತ್ ಜೊತೆ 35ನೇ ಚಿತ್ರ
'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರ ನಿರ್ದೇಶಿಸಿದ್ದ ಗುರುದತ್ ಗಾಣಿಗ ಜೊತೆ 'ಮಾಫಿಯಾ' ಎನ್ನುವ ಸಿನಿಮಾದಲ್ಲಿ ಪ್ರಜ್ವಲ್ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಕುಮಾರ್ ಬಂಡವಾಳ ಹಾಕುತ್ತಿದ್ದಾರೆ. ಅಭಿಮನ್ಯು ಸದಾನಂದನ್ ಛಾಯಾಗ್ರಹಣ ಹಾಗೂ ಅನೂಪ್ ಸೀಳಿನ್ ಸಂಗೀತ ಒಳಗೊಂಡಿದೆ. ಖ್ಯಾತ ಸಂಭಾಷಣೆಕಾರ ಮಾಸ್ತಿ ಡೈಲಾಗ್ ಬರೆಯಲಿದ್ದಾರೆ. ಆಶಿಕಾ ರಂಗನಾಥ್ ಅಥವಾ ಅದಿತಿ ಪ್ರಭುದೇವ ನಾಯಕಿಯಾಗುವ ಸಾಧ್ಯತೆ ಇದೆ.