For Quick Alerts
  ALLOW NOTIFICATIONS  
  For Daily Alerts

  'ಪೈಲ್ವಾನ್' ಸೆಟ್ ಗೆ ಬಂದ ಸುನೀಲ್ ಶೆಟ್ಟಿ: ಸ್ವಾಗತ ಕೋರಿದ ಕಿಚ್ಚ

  By Bharath Kumar
  |
  ಪೈಲ್ವಾನ್ ಅಖಾಡದಲ್ಲಿ ಇವರ ಎಂಟ್ರಿ ಆಗೋಯ್ತು..! | Filmibeta Kannada

  'ಹೆಬ್ಬುಲಿ' ನಂತರ ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಕೃಷ್ಣ ಕಾಂಬಿನೇಷನ್ ನಲ್ಲಿ ತಯಾರಾಗುತ್ತಿರುವ ಸಿನಿಮಾ 'ಪೈಲ್ವಾನ್'. ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗುತ್ತಿದೆ.

  ಶೀರ್ಷಿಕೆಯಲ್ಲಿ ಹೇಳಿರುವಂತೆ ಸುದೀಪ್ ಈ ಚಿತ್ರದಲ್ಲಿ ಪೈಲ್ವಾನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಅಂದ್ರೆ, ಬಾಲಿವುಡ್ ಸೂಪರ್ ಸ್ಟಾರ್ ಸುನೀಲ್ ಶೆಟ್ಟಿ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

  ಇದೀಗ, ಸುನೀಲ್ ಶೆಟ್ಟಿ 'ಪೈಲ್ವಾನ್' ಚಿತ್ರದ ಸೆಟ್ ಗೆ ಆಗಮಿಸಿದ್ದಾರೆ. ಈ ವಿಷ್ಯವನ್ನ ಸ್ವತಃ ಕಿಚ್ಚ ಸುದೀಪ್ ಅವರೇ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಕನ್ನಡ ಇಂಡಸ್ಟ್ರಿಗೆ ಸ್ವಾಗತ ಮಾಡಿದ್ದಾರೆ.

  'ಪೈಲ್ವಾನ್' ತಂಡ ಸೇರುವ ಮೊದಲ ಸುನೀಲ್ ಶೆಟ್ಟಿ ಮಾಡಿದ ಟ್ವೀಟ್'ಪೈಲ್ವಾನ್' ತಂಡ ಸೇರುವ ಮೊದಲ ಸುನೀಲ್ ಶೆಟ್ಟಿ ಮಾಡಿದ ಟ್ವೀಟ್

  ''ಅದ್ಭುತ ವ್ಯಕ್ತಿತ್ವ ಹೊಂದಿರುವ ಸುನೀಲ್ ಶೆಟ್ಟಿ ಅವರು ಕಳೆದ ರಾತ್ರಿ ಪೈಲ್ವಾನ್ ತಂಡವನ್ನ ಸೇರಿಕೊಂಡಿದ್ದಾರೆ. ಅವರಿಗೆ ಹೃದಯಪೂರ್ವಕವಾಗಿ ಕನ್ನಡ ಇಂಡಸ್ಟ್ರಿಗೆ ಸ್ವಾಗತ ಕೋರುತ್ತಿದ್ದೇನೆ'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

  ಅಂದ್ಹಾಗೆ, ಸುನೀಲ್ ಶೆಟ್ಟಿ ಅವರಿಗಿದು ಮೊಟ್ಟ ಮೊದಲ ಕನ್ನಡ ಸಿನಿಮಾ. ಮೂಲತಃ ಕರ್ನಾಟದವರಾದರೂ, ಇದುವರೆಗೂ ಒಂದೇ ಒಂದು ಕನ್ನಡ ಚಿತ್ರದಲ್ಲಿ ಬಣ್ಣ ಹಚ್ಚಿರಲಿಲ್ಲ. ಸುನೀಲ್ ಶೆಟ್ಟಿ ಹುಟ್ಟಿದ್ದು ಮಂಗಳೂರಿನ ತುಳು ಕುಟುಂಬದಲ್ಲಿ. ಆದ್ರೆ, ವೃತ್ತಿ ಆರಂಭಿಸಿದ್ದು ಮಾತ್ರ ಹಿಂದಿ ಚಿತ್ರರಂಗದಲ್ಲಿ 1992ರಲ್ಲಿ 'ಬಲ್ವಾನ್' ಚಿತ್ರದ ಮೂಲಕ ಕೆರಿಯರ್ ಶುರು ಮಾಡಿದ ನಟ ಸುಮಾರು 26 ವರ್ಷಗಳ ಕಾಲ ಬಾಲಿವುಡ್ ನಲ್ಲಿ ನಟಿಸಿದ್ದಾರೆ.

  ಕಿಚ್ಚನ ಸಿನಿಮಾದಲ್ಲಿ ಸುನೀಲ್ ಶೆಟ್ಟಿಕಿಚ್ಚನ ಸಿನಿಮಾದಲ್ಲಿ ಸುನೀಲ್ ಶೆಟ್ಟಿ

  ಈಗಾಗಲೇ 'ಪೈಲ್ವಾನ್' ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಇನ್ನುಳಿದಂತೆ ಸುದೀಪ್ ಗೆ ನಾಯಕಿಯಾಗಿ ಮುಂಬೈನ ಆಕಾಂಕ್ಷ ಸಿಂಗ್ ಆಯ್ಕೆ ಆಗಿದ್ದು ಕಬೀರ್ ದುಹಾನ್ ಸಿಂಗ್ ಕೂಡ ಸಿನಿಮಾದ ಮುಖ್ಯ ಪಾತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ. ಹೆಬ್ಬುಲಿ ಕೃಷ್ಣ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಅವರೇ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

  English summary
  Bollywood actor Sunil Shetty joins sudeep starrer Pailwan team. the movie directed by hebbuli krishna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X