»   » 'ಧೀರ ರಣವಿಕ್ರಮ'ದ ವಿಲನ್ ಆಗಿ ಬಾಲಿವುಡ್ ವಿಕ್ರಮ್ ಸಿಂಗ್

'ಧೀರ ರಣವಿಕ್ರಮ'ದ ವಿಲನ್ ಆಗಿ ಬಾಲಿವುಡ್ ವಿಕ್ರಮ್ ಸಿಂಗ್

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಧೀರ ರಣವಿಕ್ರಮ' ಚಿತ್ರ ಹಲವಾರು ವಿಶೇಷತೆಗಳಿಂದ ಸಾಕಷ್ಟು ಸದ್ದು ಮಾಡುತ್ತಿದೆ. ವಿದೇಶಗಳಲ್ಲಿ ಚಿತ್ರೀಕರಣವನ್ನ ಮುಗಿಸಿ ಬೆಂಗಳೂರಿಗೆ ವಾಪಸ್ಸಾಗಿರುವ ಚಿತ್ರತಂಡ ರಣವಿಕ್ರಮನ ಹೊಸ ಪರಾಕ್ರಮದ ಅಧ್ಯಾಯವನ್ನ ಬಿಚ್ಚಿಟ್ಟಿದೆ.

'ಧೀರ ರಣವಿಕ್ರಮ' ಚಿತ್ರದ ಹೀರೋ ಪುನೀತ್. ಅಪ್ಪು ಜೊತೆ ಟಾಲಿವುಡ್ ನಟಿ ಅಂಜಲಿ ಮತ್ತು ಬಾಲಿವುಡ್ ನಟಿ ಅದಾ ಶರ್ಮ ನಾಯಕಿಯರಾಗಿ ಮಿಂಚಿದ್ದಾರೆ. ಅಷ್ಟು ಬಿಟ್ಟರೆ, ರಣವಿಕ್ರಮನಿಗೆ ಸವಾಲ್ ಹಾಕುವ ಗಟ್ಟಿ ಗುಂಡಿಗೆಯ ವಿಲನ್ ಯಾರು ಅನ್ನುವುದು ಈವರೆಗೂ ಗುಟ್ಟಾಗಿತ್ತು. ಅದೀಗ ರಟ್ಟಾಗಿದೆ. [ಗುಂಡಿಗೆ ಗಟ್ಟಿಮಾಡಿಕೊಂಡು ನೋಡಿ 'ರಣವಿಕ್ರಮ' ಟೀಸರ್]


Actor Vikram Singh

'ಧೀರ ರಣವಿಕ್ರಮ' ಚಿತ್ರದಲ್ಲಿ ಕಾಣಿಸಿಕೊಂಡಿರುವ ಖೇಡಿ, ಬಾಲಿವುಡ್ ನ ವಿಕ್ರಮ್ ಸಿಂಗ್. ಹಿಂದಿಯ 'ಹೀರೋಪಂತಿ', 'ಆತ್ಮ', 'ಮುಂಬೈ ಗಾಡ್ ಫಾದರ್' ಮತ್ತು ತೆಲುಗಿನ 'ರೆಬೆಲ್' ಸೇರಿದಂತೆ ಅನೇಕ ಚಿತ್ರಗಳಲ್ಲಿ ವಿಲನ್ ಆಗಿ ಮಿಂಚಿರುವ ವಿಕ್ರಮ್ ಸಿಂಗ್, 'ಧೀರ ರಣವಿಕ್ರಮ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ. ['ರಣವಿಕ್ರಮ' ಪುನೀತ್ ರಾಜ್ ಕುಮಾರ್ ಫಸ್ಟ್ ಲುಕ್]


Actor Vikram Singh2

ಅಭಿಮಾನಿಗಳಿಂದ 'ಲೋಕೋವಿಕ್ಕಿ' ಅಂತ ಕರೆಯಿಸಿಕೊಳ್ಳುವ ವಿಕ್ರಮ್ ಸಿಂಗ್, ಸ್ಕೈ ಡೈವಿಂಗ್, ಕುದುರೆ ಸವಾರಿ, ಸ್ಪೋರ್ಟ್ಸ್ ಕಾರ್ ಡ್ರಿಫ್ಟಿಂಗ್ ಮತ್ತು ಅನೇಕ ಸಾಹಸ ಕ್ರೀಡೆಗಳಲ್ಲಿ ಹೆಸರುವಾಸಿ.


ಇಂತಹ ವಿಕ್ರಮ್ ಸಿಂಗ್, 'ಧೀರ ರಣವಿಕ್ರಮ' ಚಿತ್ರದಲ್ಲಿ ಇಂಟರ್ ನ್ಯಾಷಿನಲ್ ಡಾನ್ ಪಾತ್ರ ನಿರ್ವಹಿಸುತ್ತಿದ್ದಾರೆ. ಹೇಳಿ ಕೇಳಿ, ಇದು ಪವರ್ ಸ್ಟಾರ್ ಸಿನಿಮಾ. ಪುನೀತ್ ಜೊತೆ ಇಂತಹ ಪವರ್ ಫುಲ್ ವಿಲನ್ ಸಿಕ್ಕಿದ್ಮೇಲೆ ಚಿತ್ರ ಆಕ್ಷನ್ ಪ್ರಿಯರಿಗೆ ಅಚ್ಚುಮೆಚ್ಚಾಗುವುದರಲ್ಲಿ ಅನುಮಾನವೇ ಇಲ್ಲ. [ಮೆಟ್ರೋ ರೈಲಿನಲ್ಲಿ ಪುನೀತ್ ರಾಜ್ 'ರಣವಿಕ್ರಮ']


Actor Vikram Singh3

ಪವನ್ ಒಡೆಯರ್ ನಿರ್ದೇಶನದ 'ಧೀರ ರಣವಿಕ್ರಮ' ಇನ್ನೂ ಚಿತ್ರೀಕರಣ ಹಂತದಲ್ಲಿದೆ. ಜಯಣ್ಣ-ಭೋಗೇಂದ್ರ ನಿರ್ಮಾಣದ ಈ ಚಿತ್ರ ಅದ್ದೂರಿಯಾಗಿ ನಿರ್ಮಾಣವಾಗುತ್ತಿದೆ. ದಕ್ಷ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚುತ್ತಿರುವ ಅಪ್ಪು ಜೊತೆ ವಿಕ್ರಮ್ ಜುಗಲ್ಬಂದಿ ನೋಡಬೇಕಂದ್ರೆ, ನೀವು ಇನ್ನೂ ಸ್ವಲ್ಪ ದಿನ ಕಾಯಲೇಬೇಕು. (ಫಿಲ್ಮಿಬೀಟ್ ಕನ್ನಡ)

English summary
Bollywood Actor Vikram Singh is making his Sandalwood Debut with the movie 'Dheera Ranavikrama'. Vikram Singh is roped in to play Villain opposite Power Star Puneeth Rajkumar in the movie, which is directed by Pawan Wadeyar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada