For Quick Alerts
  ALLOW NOTIFICATIONS  
  For Daily Alerts

  ಕೈಬೆರಳಿಗೆ ಪೆಟ್ಟು ಮಾಡಿಕೊಂಡ ಪುನೀತ್ ನಾಯಕಿ ಅದಾ ಶರ್ಮಾ.!

  By Harshitha
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆಗೆ 'ರಣ ವಿಕ್ರಮ' ಚಿತ್ರದಲ್ಲಿ ಅಭಿನಯಿಸಿದ ಚೆಲುವೆ ಅದಾ ಶರ್ಮಾ. ಹಿಂದಿಯ '1920' ಸಿನಿಮಾ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಅದಾ ಶರ್ಮಾ ತೆಲುಗು, ತಮಿಳು ಹಾಗೂ ಕನ್ನಡ ಚಿತ್ರರಂಗಗಳಲ್ಲಿಯೂ ಜನಪ್ರಿಯತೆ ಪಡೆದಿದ್ದಾರೆ.

  2017 ರಲ್ಲಿ ತೆರೆಕಂಡ 'ಕಮಾಂಡೋ-2' ಯಶಸ್ವಿ ಆದ್ಮೇಲೆ, ಇದೀಗ 'ಕಮಾಂಡೋ-3' ಚಿತ್ರದ ಚಿತ್ರೀಕರಣದಲ್ಲಿ ನಟಿ ಅದಾ ಶರ್ಮಾ ಬಿಜಿಯಾಗಿದ್ದಾರೆ. 'ಕಮಾಂಡೋ-3' ಶೂಟಿಂಗ್ ಬಿರುಸಿನಿಂದ ಸಾಗುತ್ತಿರುವಾಗಲೇ, ಅದಾ ಶರ್ಮಾ ತಮ್ಮ ಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ.

  ಕಾರಿನ ಬಾಗಿಲಿಗೆ ಕೈಯಿಟ್ಟು, ತಮ್ಮ ಎಡಗೈ ಕಿರುಬೆರಳಿಗೆ ಅದಾ ಶರ್ಮಾ ಪೆಟ್ಟು ಮಾಡಿಕೊಂಡಿದ್ದಾರೆ. ಈ ಬಗ್ಗೆ ಅದಾ ಶರ್ಮಾ ಟ್ವೀಟ್ ಕೂಡ ಮಾಡಿದ್ದಾರೆ.

  ಬೀದಿಬದಿಯಲ್ಲಿ ತರಕಾರಿ ಮಾರಿದ ಪುನೀತ್ ರಾಜ್ ಕುಮಾರ್ ನಾಯಕಿ.!ಬೀದಿಬದಿಯಲ್ಲಿ ತರಕಾರಿ ಮಾರಿದ ಪುನೀತ್ ರಾಜ್ ಕುಮಾರ್ ನಾಯಕಿ.!

  ''ನನಗೆ ಒಂಬತ್ತು ಬೆರಳುಗಳು ಇದ್ದರೂ, ನೀವು ನನ್ನನ್ನ ಪ್ರೀತಿಸುತ್ತೀರಾ.? ಕಾರಿನ ಬಾಗಿಲು ಹಾಕುವಾಗ, ಮಧ್ಯದಲ್ಲಿ ಬೆರಳು ಇಟ್ಬಿಟ್ಟೆ. ಖುಷಿಯ ವಿಷಯ ಏನಂದ್ರೆ, ಕಾರಿನ ಬಾಗಿಲು ತೆಗೆದಾಗ ಬೆರಳಿನ ಬಾಕಿ ಭಾಗ ನನ್ನ ದೇಹದಲ್ಲಿ ಉಳಿದಿತ್ತು'' ಎಂದು ಅದಾ ಶರ್ಮಾ ಟ್ವೀಟ್ ಮಾಡಿದ್ದಾರೆ.

  ಹಾಗ್ನೋಡಿದ್ರೆ, ಸಾಮಾಜಿಕ ಜಾಲತಾಣಗಳಲ್ಲಿ ನಟಿ ಅದಾ ಶರ್ಮಾ ಸದಾ ಸಕ್ರಿಯರಾಗಿರುತ್ತಾರೆ. ಚಿತ್ರವೊಂದಕ್ಕಾಗಿ ಬೀದಿ ಬದಿಯಲ್ಲಿ ಅದಾ ಶರ್ಮಾ ತರಕಾರಿ ಮಾರಿದ ಫೋಟೋಗಳು ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅಲ್ಲದೇ, ಮಾರಕ ಕಿಕಿ ಡ್ಯಾನ್ಸ್ ಮಾಡಿ ಟ್ವೀಟಿಗರ ಕೆಂಗಣ್ಣಿಗೆ ಅದಾ ಶರ್ಮಾ ಗುರಿಯಾಗಿದ್ದರು.

  ಬೇಡ ಬೇಡ ಅಂದರೂ ತಾರೆಯರೇ ಡೇಂಜರಸ್ ಚಾಲೆಂಜ್ ಒಪ್ಪಿಕೊಳ್ತಾರಲ್ಲ.! ಇದು ಸರೀನಾ.?ಬೇಡ ಬೇಡ ಅಂದರೂ ತಾರೆಯರೇ ಡೇಂಜರಸ್ ಚಾಲೆಂಜ್ ಒಪ್ಪಿಕೊಳ್ತಾರಲ್ಲ.! ಇದು ಸರೀನಾ.?

  ಸದ್ಯ ಕೈಬೆರಳಿಗೆ ಪೆಟ್ಟಾಗಿದ್ದರೂ, ಅದಾ ಶರ್ಮಾ ಸುಮ್ಮನೆ ಕೂತಿಲ್ಲ. 'ಕಮಾಂಡೋ-3' ಶೂಟಿಂಗ್ ಗಾಗಿ ಹೋಮ್ ವರ್ಕ್ ಮಾಡುತ್ತಿದ್ದಾರೆ.

  English summary
  Bollywood Actress Adah Sharma hurts her finger.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X