»   » ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಬಾಲಿವುಡ್ ನಟಿ ಕಾಜೋಲ್ ಭೇಟಿ

ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಬಾಲಿವುಡ್ ನಟಿ ಕಾಜೋಲ್ ಭೇಟಿ

Posted By:
Subscribe to Filmibeat Kannada
ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಬಾಲಿವುಡ್ ನಟಿ ಕಾಜೋಲ್ ಭೇಟಿ

ಬಾಲಿವುಡ್ ನ ಖ್ಯಾತ ನಟಿ ಕಾಜೋಲ್ ಇಂದು (ನವೆಂಬರ್ 30) ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಬೇಟಿ ನೀಡಿದ್ದಾರೆ. ಕಾಜೋಲ್ ಜೊತೆಯಲ್ಲಿ ತಾಯಿ ತನುಜಾ ಮುಖರ್ಜಿ, ತಂಗಿ ತನಿಷಾ, ಹಾಗೂ ಕಾಜೋಲ್ ಪುತ್ರ ಯುಗ್ ಕೂಡ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ಸಿದ್ಧಾರೂಢ ಸ್ವಾಮೀಜಿಗಳ ಗದ್ದುಗೆಯ ದರ್ಶನ ಪಡೆಯುವುದರ ಜೊತೆಗೆ ಕಾಜೋಲ್ ಕುಟುಂಬದ ವತಿಯಿಂದ ಗದ್ದುಗೆಗೆ ವಿಶೇಷ ಅಭಿಷೇಕವನ್ನು ಮಾಡಿಸಲಾಯಿತು.

ಪೂಜೆ ಸಲ್ಲಿಸಿದ ನಂತರ ಕೆಲವು ನಿಮಿಷಗಳು ನಟಿ ಕಾಜೋಲ್ ಗದ್ದುಗೆಯ ಬಳಿ ಧ್ಯಾನ ಮಾಡಿದ್ದಾರೆ. ಮಠದ ದರ್ಶನಕ್ಕಾಗಿ ವಿಶೇಷ ವಿಮಾನದಲ್ಲಿ ಕಾಜೋಲ್ ಮತ್ತು ಕುಟುಂಬಸ್ಥರು ಹುಬ್ಬಳ್ಳಿಗೆ ಆಗಮಿಸಿದ್ದರು.

Bollywood actress Kajol visit 'Shri Siddharoodha Swamy Math' Hubballi

ಇದೇ ಸಂದರ್ಭದಲ್ಲಿ ನಟಿ ಕಾಜೋಲ್ ಮತ್ತು ಕುಟುಂಬಸ್ಥರಿಗೆ ಮಠದ ಟ್ರಸ್ಟ್ ವತಿಯಿಂದ ಸನ್ಮಾನಿಸಿ ರಕ್ಷೆ ತೊಡಿಸಲಾಗಿದೆ. ಹಲವು ವರ್ಷಗಳಿಂದ ಕಾಜೋಲ್ ತಾಯಿ ಸಿದ್ಧಾರೂಢ ಮಠದ ಭಕ್ತರಾಗಿದ್ದು ಈಗಾಗಲೇ ಸಾಕಷ್ಟು ಬಾರಿ ಮಠಕ್ಕೆ ಬೇಟಿ ನೀಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ನಟಿ ಕಾಜೋಲ್ ಸಿದ್ಧಾರೂಢ ಮಠಕ್ಕೆ ಬೇಟಿ ನೀಡಿ ಗದ್ದುಗೆಯ ದರ್ಶನ ಪಡೆದಿದ್ದಾರೆ. ಕಾಜೋಲ್ ಸಿದ್ಧಾರೂಢ ಮಠಕ್ಕೆ ಬೇಟಿ ನೀಡಿದ ವಿಷಯ ತಿಳಿದ ಮೇಲೆ ಅಪಾರ ಸಂಖ್ಯೆಯ ಅಭಿಮಾನಿಗಳು ಮಠದ ಬಳಿ ಜಮಾಯಿಸಿದ್ದರು.

English summary
Bollywood actress Kajol visit 'Shri Siddharoodha Swamy Math' Hubballi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada