For Quick Alerts
  ALLOW NOTIFICATIONS  
  For Daily Alerts

  ಸುಷ್ಮಾ ಸ್ವರಾಜ್ ನಿಧನಕ್ಕೆ ಕಣ್ಣೀರು ಹಾಕಿದ ಚಿತ್ರ ತಾರೆಯರು

  |

  ಬಿಜೆಪಿ ಪಕ್ಷದ ನಾಯಕಿ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ (67) ನಿನ್ನೆ (ಆಗಸ್ಟ್ 6) ರಾತ್ರಿ ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೃದಯಘಾತದಿಂದ ನಿಧನ ಹೊಂದಿದ್ದಾರೆ.

  ಸುಷ್ಮಾ ಸ್ವರಾಜ್ ನಿಧನಕ್ಕೆ ಬಾಲಿವುಡ್ ಚಿತ್ರರಂಗದ ಗಣ್ಯಾತಿಗಣ್ಯರು ಹಾಗೂ ಸ್ಯಾಂಡಲ್ ವುಡ್ ಕಲಾವಿದರು ಸಂತಾಪ ಸೂಚಿಸಿದ್ದಾರೆ. ಅಗಲಿದ ನಾಯಕಿಗೆ ನಮನ ಸಲ್ಲಿಸಿದ್ದಾರೆ.

  ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿಧಿವಶ

  ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ಅನುಪಮ್ ಕೇರ್, ನಟ ಬೊಮ್ಮನ್ ಇರಾನಿ, ಸಂಜಯ್ ದತ್, ಪರಿಣಿತಿ ಚೋಪ್ರಾ, ಯಾಮಿ ಗೌತಮ್, ರಿತೇಶ್ ದೇಶ್ ಮುಖ್, ಸ್ವಾರ ಭಾಸ್ಕರ್, ಕನ್ನಡದ ನಟ ಜಗ್ಗೇಶ್, ಮಾಳವಿಕಾ ಅವಿನಾಶ್, ನಭಾ ನಟೇಶ್, ಪ್ರಣೀತಾ, ಹರಿಪ್ರಿಯಾ ಹೀಗೆ ಸಾಕಷ್ಟು ಮಂದಿ ಟ್ವೀಟ್ ಮಾಡಿ ಸುಷ್ಮಾ ಸ್ವರಾಜ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

  ಆಕೆ ಮಾತೋಶ್ರೀ ಸ್ವರೂಪ - ಜಗ್ಗೇಶ್

  ''ವಕೀಲೆಯಾಗಿದ್ದ ಮಹನೀಯಳು ಶ್ರಮ ಸೇವೆಯಿಂದ ವಿದೇಶಾಂಗ ಸಚೀವಳಾಗಿ. ಅನೇಕ ಅಮಾಯಕ ಭಾರತೀಯರಿಗೆ ತಾಯಂತೆ ಜೀವಿಸಿ, ನಿರ್ಗಮಿಸಿದ ಮಾತೋಶ್ರೀ ಸ್ವರೂಪ ಶ್ರೀ ಸುಷ್ಮಾ ಸ್ವರಾಜ್ ರವರಿಗೆ ವಿಧಾಯ ನಮನ! ಓಂ ಶಾಂತಿ.'' - ಜಗ್ಗೇಶ್, ನಟ, ಬಿಜೆಪಿ ಮುಖಂಡ

  ನಿಮಗೆ ಗೊತ್ತಿರದ ಸುಷ್ಮಾ ಸ್ವರಾಜ್ ಹೆಜ್ಜೆ ಗುರುತುಗಳು

  ಭಾರತದ ಪ್ರಾಮಾಣಿಕ ರಾಜಕೀಯ ನಾಯಕಿ - ಅನುಪಮ್ ಖೇರ್

  ''ಈ ಸುದ್ದಿ ಕೇಳಿ ನನಗೆ ದೊಡ್ಡ ಆಘಾತ ಆಗಿದೆ. ಸುಷ್ಮಾ ಸ್ವರಾಜ್ ಒಳ್ಳೆಯ ವ್ಯಕ್ತಿ. ಭಾರತದ ಪ್ರಾಮಾಣಿಕ ರಾಜಕೀಯ ನಾಯಕಿ. ನಾನು ನೋಡಿದ ಅದ್ಬುತ ವಾಗ್ಮಿ. ಕೊನೆಯ ಬಾರಿ ಭೇಟಿ ಮಾಡಿದಾಗ ನಾನು ತುಂಬ ಒಳ್ಳೆಯ ಕೆಲಸ ಮಾಡುತ್ತಿದ್ದೇನೆ ಎಂದು ಹೊಗಳಿದ್ದರು. ಇದು ತುಂಬ ದುಖಃದ ಸಂಗತಿ.'' - ಅನುಪಮ್ ಖೇರ್, ಬಾಲಿವುಡ್ ನಟ

  ಮೃದು ಸ್ವಭಾವದ ವ್ಯಕ್ತಿ - ಸಂಜಯ್ ದತ್

  ''ಸುಷ್ಮಾ ಜೀ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮ ಅಗಲಿಕೆಯ ಸುದ್ದಿ ಕೇಳಿ ಶಾಕ್ ಆಗಿದೆ. ನಾನು ಅವರ ಜೊತೆಗೆ ಒಡನಾಟ ಹೊಂದಿದ್ದೆ. ಅವರು ಮೊದಲಿನಿಂದ ಮೃದು ಸ್ವಭಾವದ ವ್ಯಕ್ತಿ. ಅವರ ಕುಟುಂಬಕ್ಕೆ ಹಾಗೂ ಇಡೀ ದೇಶಕ್ಕೆ ದುಃಖವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ.''- ಸಂಜಯ್ ದತ್, ಬಾಲಿವುಡ್ ನಟ

  ದುಃಖದಲ್ಲಿ ಬಾಲಿವುಡ್ ನಟಿಯರು

  ''ಈ ವಿಷಯ ಕೇಳಿ ತುಂಬ ದುಃಖ ಆಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.'' ಎಂದು ನಟಿ ಅನುಷ್ಕಾ ಶರ್ಮಾ ಟ್ವೀಟ್ ಮಾಡಿದ್ದಾರೆ. ''ಸುಷ್ಮಾ ಸ್ವರಾಜ್ ಮಹಿಳಾ ಸಬಲೀಕರಣ ಎನ್ನುವುದಕ್ಕೆ ಅವರು ನಿಜವಾದ ರೋಲ್ ಮಾಡಲ್.'' ಎಂದು ಯಾಮಿ ಗೌತಮ್ ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ. ಉಳಿದಂತೆ ನಟಿ, ಸ್ವರ ಭಾಸ್ಕರ್, ಪರಿಣಿತಿ ಚೋಪ್ರಾ ನಮನ ಸಲ್ಲಿಸಿದ್ದಾರೆ.

  ರಿತೇಶ್ ದೇಶ್ ಮುಖ್ ಮತ್ತು ಬೊಮ್ಮನ್ ಇರಾನಿ

  ''ಅವರ ಸ್ವಭಾವದಲ್ಲಿಯೇ ಒಂದು ವೇಗ ಇತ್ತು. ತುಂಬ ಬೇಗ ಎಲ್ಲರನ್ನು ಅಗಲಿದರು. ಇದು ದೇಶಕ್ಕೆ ಆದ ನಷ್ಟ.'' ಎಂದು ಬಾಲಿವುಡ್ ನಟ ಬೊಮ್ಮನ್ ಇರಾನಿ ಟ್ವೀಟ್ ಮಾಡಿದ್ದಾರೆ. ''ಅವರು ಒಬ್ಬ ದೇಶ ಭಕ್ತೆ. ಅತ್ಯುತ್ತಮ ನಾಯಕಿ. ವಾಗ್ಮಿ, ವಿದೇಶಾಂಗ ಸಚಿವೆಯಾಗಿ ಕಷ್ಟದಲ್ಲಿ ಇರುವ ಭಾರತೀಯರ ಸಂಪರ್ಕಕ್ಕೆ ಸುಲಭವಾಗಿ ಸಿಗುತ್ತಿದ್ದರು.

  ಕನ್ನಡ ನಟಿಯರ ನಮನ

  ಕನ್ನಡ ನಟಿಯರಾದ ಪ್ರಣೀತಾ, ಹರಿಪ್ರಿಯಾ, ನಭಾ ನಟೇಶ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ರಾಜ್ಯ ಬಿಜೆಪಿ ನಾಯಕಿ ಮಾಳವಿಕಾ ''ದೇಶ ಕಟ್ಟಲು ನನ್ನ ರೀತಿಯ ಸಾಕಷ್ಟು ಮಹಿಳೆಯರಿಗೆ ನೀವು ಸ್ಪೂರ್ತಿ ಎಂದು ಹೇಳಿದ್ದಾರೆ. ಇತ್ತೀಚಿಗಷ್ಟೆ ನಿಮ್ಮನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದೆ.'' ನೆನಪು ಮಾಡಿಕೊಂಡಿದ್ದಾರೆ.

  English summary
  Bollywood and sandalwood stars condolences former foreign minister of india Sushma Swaraj death (August 6th).
  Wednesday, August 7, 2019, 11:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X