»   » ಪೂನಂ ಪಾಂಡೆ ಅಲ್ಲ ಈ 'ಬಾಂಬೆ ಮಿಠಾಯಿ'

ಪೂನಂ ಪಾಂಡೆ ಅಲ್ಲ ಈ 'ಬಾಂಬೆ ಮಿಠಾಯಿ'

By: ರವಿಕಿಶೋರ್
Subscribe to Filmibeat Kannada

ಹೆಸರಿನಲ್ಲಷ್ಟೇ ಪಾಂಡೆ ಎಂಬ ಸರ್ ನೇಮ್ ಇದೆ. ಆದರೆ ಬಾಲಿವುಡ್ ಸೆಕ್ಸ್ ಬಾಂಬ್ ಪೂನಂ ಪಾಂಡೆಗೂ ಇದೀಗ ಕನ್ನಡಕ್ಕೆ ಅಡಿಯಿಟ್ಟಿರುವ ದಿಶಾ ಪಾಂಡೆಗೂ ಯಾವುದೇ ಸಂಬಂಧವಿಲ್ಲ. ಪೂನಂಗೆ ದೂರದ ಸಂಬಂಧಿಯೂ ಅಲ್ಲ ಹತ್ತಿರದ ನೆಂಟರೂ ಅಲ್ಲ.

ಪೂನಂ ಪಾಂಡೆ ಕನ್ನಡದಲ್ಲಿ ಸ್ಪೆಷಲ್ ಸಾಂಗ್ ಮಾಡಿದ ಮೇಲೆ ಇದೀಗ ಜೈಪುರದ ಈ ಹುಡುಗಿ ಕನ್ನಡಕ್ಕೆ ಅಡಿಯಿಟ್ಟಿದ್ದಾರೆ. ಮೂರು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ ದಿಶಾ ಪಾಂಡೆ. ಶರಣ್ ಜೊತೆಗಿನ 'ಮಿಸ್ ಜಯಲಲಿತಾ', ಶ್ರೀನಗರ ಕಿಟ್ಟಿ ಅವರೊಂದಿಗೆ 'ಸುಬ್ರಮಣಿ' ಹಾಗೂ 'ಬಾಂಬೆ ಮಿಠಾಯಿ' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ತೆಲುಗು ಹಾಗೂ ತಮಿಳಿನ ಕೆಲ ಚಿತ್ರಗಳಲ್ಲಿ ಅಭಿನಯಿಸಿರುವ ದಿಶಾ ಮೂಲತಃ ಮಾಡೆಲಿಂಗ್ ಕ್ಷೇತ್ರಕ್ಕೆ ಸೇರಿದವರು. 'ಬೋಲೋ ರಾಮ್' ಎಂಬ ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟವರು. ಬಂದ ಪಾತ್ರಗಳನ್ನೆಲ್ಲಾ ಒಪ್ಪಿಕೊಳ್ಳಲ್ಲ ಎನ್ನುವ ದಿಶಾ, ಅಭಿನಯಕ್ಕೆ ಒತ್ತು ನೀಡುವ ತಾರೆ.

ಸದ್ಯಕ್ಕೆ 'ಬಾಂಬೆ ಮಿಠಾಯಿ' ಸವಿಯುತ್ತಿರುವ ದಿಶಾ

ಸದ್ಯಕ್ಕೆ ಅವರು 'ಬಾಂಬೆ ಮಿಠಾಯಿ' ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಟಚ್ ವುಡ್ ಕ್ರಿಯೇಷನ್ ಅಡಿಯಲ್ಲಿ ಸೌದ ಶರಿಫ್ ಹಾಗೂ ಅಮೀರ್ ಶರಿಫ್ ನಿರ್ಮಾಣದ ಚಿತ್ರ 'ಬಾಂಬೆ ಮಿಠಾಯಿ'. ಚಂದ್ರಮೋಹನ್ ಅವರ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಚಿತ್ರಕ್ಕಿದೆ.

ಮೂವತ್ತು ದಿನಗಳ ಕಾಲ ಚಿತ್ರೀಕರಣ

ಸುಮಾರು 30 ದಿವಸಗಳ ಕಾಲ ಮೊದಲ ಹಂತದಲ್ಲಿ ಮೈಸೂರು, ಮಡಿಕೇರಿ, ಕುಶಾಲನಗರ, ಗೋಲ್ಡನ್ ಟೆಂಪಲ್, ಚಿಕ್ಕಮಗಳೂರು, ಕುದುರೆಮುಖ, ಕಳಸ ದೇವಸ್ಥಾನ, ಹಾಲಾಡಿ, ಮುರುಡೇಶ್ವರ, ಕಾರವಾರ, ಹುಬ್ಬಳ್ಳಿ, ಗದಗ, ರಾಣೆಬೆನ್ನೂರು, ಚಿತ್ರದುರ್ಗ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.

ಚಂಚಲ ಮನಸ್ಸಿನ ಯುವಕನ ಕಥೆ

ಚಂಚಲ ಮನಸ್ಸಿನ ಯುವಕನ ಸುತ್ತ ಹೆಣೆಯಲಾದ ಕಥೆ ಇದು. ಕ್ಷಮಿಸುವುದರಿಂದ ಮುಂದಾಗುವ ನೋವು, ತಪ್ಪುಗಳನ್ನು ಹೇಗೆ ನಿಭಾಯಿಸಬಹುದು ಎಂಬುದನ್ನು ಹಾಸ್ಯ ಭರಿತವಾಗಿ ನಿರ್ದೇಶಕರು ಈ ಚಿತ್ರದಲ್ಲಿ ಹೇಳಿದ್ದಾರೆ.

ಪಾತ್ರವರ್ಗದಲ್ಲಿ ಯಾರ್ಯಾರಿದ್ದಾರೆ?

ನಿರಂಜನ್ ದೇಶ್ ಪಾಂಡೆ, ದಿಶಾ ಪಾಂಡೆ ಜೊತೆಗೆ ಪೋಷಕ ವರ್ಗದಲ್ಲಿ ವಿಕ್ರಮ್, ಚಿಕ್ಕಣ್ಣ, ಕಿಶೋರಿ ಬಲ್ಲಾಳ್, ಸುನಿಲ್, ಬುಲ್ಲೆಟ್ ಪ್ರಕಾಶ್, ಮೈಕಲ್ ಮಧು, ಮೂಗು ಸುರೇಶ್, ನಲ್ಲೂರ್ ನಾರಾಯಣ್, ಬೇಬೀ ಬಿಂದುಶ್ರೀ ಇದ್ದಾರೆ.

ಬಾಂಬೆ ಮಿಠಾಯಿ ತಾಂತ್ರಿಕ ಬಳಗ ಹೀಗಿದೆ

ನಲ್ಲೂರ್ ನಾರಾಯಣ್ ಅವರು ಕಾರ್ಯನಿರ್ವಾಹಕ ನಿರ್ಮಾಪಕರು. ವೀರ್ ಸಮರ್ಥ ಅವರ ಸಂಗೀತ, ಆರ್ ಕೆ ಶಿವಕುಮಾರ್ ಅವರ ಛಾಯಾಗ್ರಹಣ, ಹರ್ಷ, ರಘು, ಕಲೈ ಅವರ ನೃತ್ಯ ನಿರ್ದೇಶನ, ವಿ ನಾಗೇಂದ್ರ ಪ್ರಸಾದ್, ನವೀನ್ ಕುಮಾರ್ ಹಾಗೂ ಹೃದಯ ಶಿವ ಅವರ ಗೀತಸಾಹಿತ್ಯ ಈ ಚಿತ್ರಕ್ಕೆ ಇದೆ.

English summary
Kannada actress Disha Pandey who says she has no connections to sexy siren Poonam Pandey has acted in 'Ms Jayalalitha, Bombay Mitayi and signed a film opposite Srinagara Kitty in 'Subramani'. Apparently all the three are at under production stages.
Please Wait while comments are loading...