»   » ಸದ್ದಿಲ್ಲದೇ ಗೆದ್ದಿದೆ ಮತ್ತೊಂದು ಹೊಸಬರ ಚಿತ್ರ ಬಾಂಬೆ ಮಿಠಾಯಿ

ಸದ್ದಿಲ್ಲದೇ ಗೆದ್ದಿದೆ ಮತ್ತೊಂದು ಹೊಸಬರ ಚಿತ್ರ ಬಾಂಬೆ ಮಿಠಾಯಿ

By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ವುಡ್ನಲ್ಲಿ ಸೈಲೆಂಟಾಗಿ ಮತ್ತೊಂದು ಹೊಸಬರ ಚಿತ್ರ ಕೋಟಿ ಕೊಳ್ಳೆ ಹೊಡೆದಿದೆ, ಪಡ್ಡೆಗಳ ಸಿಳ್ಳೆ ಗಿಟ್ಟಿಸಿಕೊಂಡಿದೆ. ಅದು 'ಬಾಂಬೆ ಮಿಠಾಯಿ'. ಚಿಕ್ಕಣ್ಣನ ಕಾಮಿಡಿ ಕಿಕ್ಕಿಗೆ, ಬಾಂಬೆ ಬ್ಯೂಟಿ ದಿಶಾ ಪಾಂಡೆ ವೈಯಾರಕ್ಕೆ ಪ್ರೇಕ್ಷಕರು ಜೈಕಾರ ಹಾಕ್ತಿದ್ದಾರೆ.

ಎರಡು ವಾರದ ಹಿಂದೆ ಹಿಂದಿಯ 'ಬಾಂಬೆ ವೆಲ್ವೆಟ್' ಕನ್ನಡದ 'ಬಾಂಬೆ ಮಿಠಾಯಿ' ಎರಡೂ ಚಿತ್ರಗಳು ಒಂದೇ ದಿನ ತೆರೆಗೆ ಬಂದಿದ್ವು. ಬಾಂಬೆ ವೆಲ್ವೆಟ್ ಹಸಿಬಿಸಿ ದೃಶ್ಯಗಳಿದ್ದರೂ ಡುಮ್ಕಿ ಹೊಡೆದರೆ, ತನ್ನ ಹಸಿಬಿಸಿ ಡಬ್ಬಲ್ ಮೀನಿಂಗ್ ಡೈಲಾಗ್ ಗಳಿಂದಲೇ 'ಬಾಂಬೆ ಮಿಠಾಯಿ' ಚಿತ್ರ ಪಡ್ಡೆಗಳಿಗೆ ಮತ್ತು ಸಾಮಾನ್ಯ ವರ್ಗದ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಡ್ತಿದೆ.

Bombay Mittai silently wins audience heart

ಮಲ್ಟಿಪ್ಲೆಕ್ಸ್ಗಳಲ್ಲು ತಕ್ಕಮಟ್ಟಿಗೆ ಹವಾ ಕಾಪಾಡಿಕೊಂಡಿರೋ ಬಾಂಬೆ ಮಿಠಾಯಿ ಕಾಲೇಜ್ ಹುಡ್ಗ ಹುಡುಗಿಯರಿಗೆ ಸಖತ್ ಇಷ್ಟವಾಗ್ತಿದೆ. ಚಿತ್ರದಲ್ಲಿ ಟಿವಿ ನಿರೂಪಕರಾಗಿದ್ದ ನಿರಂಜನ್ ದೇಶಪಾಂಡೆ, ಸೀರಿಯಲ್ ನಟ ವಿಕ್ರಮ್ ಮತ್ತು ಚಿಕ್ಕಣ್ಣ ಮುಖ್ಯಪಾತ್ರದಲ್ಲಿದ್ರೆ, ಬಾಂಬೆ ಮಿಠಾಯಿಯಾಗಿ ಕಾಣಿಸಿಕೊಂಡಿದ್ದು ಮುಂಬೈ ಬೆಡಗಿ ದಿಶಾ ಪಾಂಡೆ.

Bombay Mittai silently wins audience heart

ಅಂದ ಹಾಗೆ ಇತ್ತೀಚೆಗೆ ಬಂದಿರೋ ಬಲ್ಲ ಮೂಲಗಳ ಮಾಹಿತಿಯ ಪ್ರಕಾರ, ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನ ಮನರಂಜನ ವಾಹಿನಿಯೊಂದು 1 ಕೋಟಿ ರು.ಗೂ ಹೆಚ್ಚು ಹಣ ಕೊಟ್ಟು ಖರೀದಿ ಮಾಡಿದೆ. ಒಂದು ದೊಡ್ಡ ಗ್ಯಾಪ್ನ ನಂತ್ರ ಹೊಸಬರ ಚಿತ್ರವೊಂದು ಸೈಲೆಂಟಾಗಿ ಹಿಟ್ ಲಿಸ್ಟ್ ಸೇರಿರೋದು ಸಂತಸದ ಸುದ್ದಿ.

English summary
Kannada movie Bombay Mittai has silently won the hearts of Kannada movie lovers. Satellite rights of the new comers movie has been sold for hopping Rs. 1 crore. Chikkanna, Disha Pandey, Niranjan Deshpande and Vikram are in the lead of this comedy movie, with some double meaning dialogues.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada