»   » ಬಿ.ಆರ್.ಪಂತುಲು ಕುರಿತ 'ಸಾಕ್ಷ್ಯಚಿತ್ರ' ಹಾಗೂ 'ಪುಸ್ತಕ' ಬಿಡುಗಡೆ

ಬಿ.ಆರ್.ಪಂತುಲು ಕುರಿತ 'ಸಾಕ್ಷ್ಯಚಿತ್ರ' ಹಾಗೂ 'ಪುಸ್ತಕ' ಬಿಡುಗಡೆ

Posted By:
Subscribe to Filmibeat Kannada

ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಬಿ.ಆರ್.ಪಂತುಲು ಅವರ ಕುರಿತಾದ 'ಸಾಕ್ಷ್ಯಚಿತ್ರ' ಹಾಗೂ 'ಪುಸ್ತಕ'ವನ್ನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಹೊರ ತರಲಾಗುತ್ತಿದೆ.

ಪತ್ರಕರ್ತ ಜೋಗಿ ಅವರು ನಿರ್ದೇಶನದ ಸಾಕ್ಷ್ಯಚಿತ್ರ 'ಕನ್ನಡದ ಮೊದಲ ಮೇಸ್ಟ್ರು' ಹಾಗೂ ಅ.ನಾ. ಪ್ರಹ್ಲಾದ್ ರಾವ್ ಅವರು ಬರೆದಿರುವ 'ಧಣಿವಿಲ್ಲದ ಧಣಿ' ಪುಸ್ತಕವನ್ನ ಇಂದು ಬಿಡುಗಡೆ ಮಾಡಲಾಗುತ್ತಿದೆ.

Book And Documentary Release on B R Panthulu
 

ಬಿ.ಆರ್.ಪಂತುಲು ಅವರ ಕುರಿತಾದ 'ಸಾಕ್ಷ್ಯಚಿತ್ರ' ಹಾಗೂ 'ಪುಸ್ತಕ'ವನ್ನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಾಣ ಮಾಡಿದೆ. 'ಸಾಕ್ಷ್ಯಚಿತ್ರ' ಹಾಗೂ 'ಪುಸ್ತಕ' ಬಿಡುಗಡೆ ಕಾರ್ಯಕ್ರಮವನ್ನು ಇಂದು (ನವೆಂಬರ್ 15) ಸಂಜೆ 5.30 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿರುವ 'ಸಂಸ ಬಯಲು ರಂಗಮಂದಿರ'ದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಹಮ್ಮಿಕೊಂಡಿದೆ.

Book And Documentary Release on B R Panthulu

'ಕನ್ನಡದ ಮೊದಲ ಮೇಸ್ಟ್ರು' ಸಾಕ್ಷ್ಯಚಿತ್ರವನ್ನು ಶ್ರೀಮತಿ ಭಾರತಿ ವಿಷ್ಣುವರ್ಧನ್ ಅವರು ಲೋಕಾರ್ಪಣೆ ಮಾಡಲಿದ್ದಾರೆ. "ಧಣಿವಿಲ್ಲದ ಧಣಿ" ಪುಸ್ತಕವನ್ನು ಸರ್ಕಾರದ ನಿವೃತ್ತ ಮುಖ್ಯ ಅಪರ ಕಾರ್ಯದರ್ಶಿ ಕೆ. ಜೈರಾಜ್ ಅವರು ಬಿಡುಗಡೆ ಮಾಡಲಿದ್ದಾರೆ. ಇನ್ನೂ ಕಾರ್ಯಕ್ರಮದಲ್ಲಿ "ಮಹಾತ್ಮಗಾಂಧಿ ಮತ್ತು ಸಿನಿಮಾ" ಪುಸ್ತಕ ಕುರಿತು ಕರ್ನಾಟಕದ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಡಾ. ವೂಡೇ ಪಿ. ಕೃಷ್ಣ ಮತ್ತು "ಧಣಿವಿಲ್ಲದ ಧಣಿ" ಪುಸ್ತಕ ಕುರಿತು ಪತ್ರಕರ್ತ ಜೋಗಿ ಅವರು ಮಾತನಾಡಲಿದ್ದಾರೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರಸಿಂಗ್ ಬಾಬು ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹಂಸಜ್ಯೋತಿ ತಂಡದವರಿಂದ ಬಿ.ಆರ್. ಪಂತುಲು ಚಲನಚಿತ್ರಗಳ ಗೀತಗಾಯನವನ್ನು ಹಮ್ಮಿಕೊಳ್ಳಲಾಗಿದೆ.

Book And Documentary Release on B R Panthulu

ಬಿ ಆರ್ ಪಂತುಲು ದಕ್ಷಿಣ ಭಾರತದ ದಿಗ್ಗಜ ನಿರ್ದೇಶಕ. ಭಾರತೀಯ ಚಿತ್ರರಂಗದಲ್ಲಿ ಕನ್ನಡ, ತೆಲುಗು, ತಮಿಳು ಚಿತ್ರಗಳಿಗೆ ಮೌಲ್ಯ ಹೆಚ್ಚಿಸಿದ ನಿರ್ದೇಶಕರ ಫೈಕಿ ಬಿ ಆರ್ ಪಂತುಲು ಕೂಡ ಒಬ್ಬರು. 1957 ರಲ್ಲಿ ಬಿಡುಗಡೆಯಾದ ತಮಿಳಿನ 'ತಂಗಮಲೈ ರಹಸ್ಯ' ಪಂತುಲು ನಿರ್ದೇಶನದ ಮೊದಲ ಚಿತ್ರ. ಇದೇ ಚಿತ್ರ ಕನ್ನಡದಲ್ಲಿ 'ರತ್ನಗಿರಿ ರಹಸ್ಯ' ಹೆಸರಿನಲ್ಲಿ ತೆರೆಕಂಡಿತ್ತು.

ಬಿ ಆರ್ ಪಂತುಲು ಕೇವಲ ನಿರ್ದೇಶಕರಾಗಿ ಮಾತ್ರವಲ್ಲದೇ, ನಟನಾಗಿ, ನಿರ್ಮಾಪಕನಾಗಿಯೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. 1936 ರಲ್ಲಿ ಎಚ್.ಎಲ್.ಎನ್. ಸಿಂಹ ಅವರು ನಿರ್ದೇಶನದಲ್ಲಿ ಮೂಡಿಬಂದ 'ಸಂಸಾರ ನೌಕ' ಚಿತ್ರದಲ್ಲಿ ಪಂತುಲು ಪ್ರಮುಖ ಪಾತ್ರ ನಿರ್ವಹಿಸಿದ್ದರು. ಸುಮಾರು 57 ಚಿತ್ರಗಳನ್ನ ನಿರ್ದೇಶನ ಮಾಡಿರುವ ಪಂತುಲು ಅವರು 'ಶ್ರೀಕೃಷ್ಣದೇವರಾಯ', 'ಸ್ಕೂಲ್ ಮಾಸ್ಟರ್', 'ಕಿತ್ತೂರು ಚೆನ್ನಮ್ಮ', 'ರತ್ನಗಿರಿ ರಹಸ್ಯ', 'ಮಕ್ಕಳ ರಾಜ್ಯ', 'ಸಾಕು ಮಗಳು', 'ಬೀದಿ ಬಸವಣ್ಣ', ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನ ಕೊಡುಗೆಯಾಗಿ ನೀಡಿದ್ದಾರೆ.

English summary
'Dhani illada Dhani' by A.N.Prahald Rao and 'Kannadada Modala Mestru' documentary by Jogi based on Late Veteran Director B.R.Panthalu will release today (November 15th) at Ravindra Kalakshetra.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada