»   » ಪುಸ್ತಕದಲ್ಲಿ ವೆಂಕಟ್ - ಹುಚ್ಚು ಮನಸ್ಸಿನ ನೂರು ಮುಖಗಳು!

ಪುಸ್ತಕದಲ್ಲಿ ವೆಂಕಟ್ - ಹುಚ್ಚು ಮನಸ್ಸಿನ ನೂರು ಮುಖಗಳು!

Posted By:
Subscribe to Filmibeat Kannada

ಬರೀ ಯೂಟ್ಯೂಬ್ ಸ್ಟಾರ್ ಆಗಿದ್ದ 'ಬಿಗ್ ಬಾಸ್' ಖ್ಯಾತಿಯ ವೆಂಕಟ್ ಅವರು ಇದೀಗ ಒಳ್ಳೆ ಕೆಲಸ ಮಾಡುವ ಮೂಲಕ ಸುದ್ದಿಯಾಗುತ್ತಿದ್ದಾರೆ. ಈ ಮೊದಲು ಯಾವುದಾದರೂ ಅವಾಂತರ ಮಾಡಿಕೊಂಡು ಅಥವಾ ರಂಪ ಮಾಡಿಕೊಂಡು ಸುದ್ದಿ ಆಗುತ್ತಿದ್ದರು.

ಈ ಬಾರಿ ವೆಂಕಟ್ ಅವರು ತಮ್ಮದೇ ಕಥೆಯಾಧರಿತ ಪುಸ್ತಕ ಬಿಡುಗಡೆ ಮಾಡುವ ಮೂಲಕ ಒಳ್ಳೆ ರೀತಿಯಲ್ಲಿ ಸುದ್ದಿಯಾಗಿದ್ದಾರೆ. ಹೌದು ಈ ಮೊದಲು ವೆಂಕಟ್ ಅವರ ಜೀವನ ಕುರಿತಾದ ಪುಸ್ತಕವೊಂದು ಹೊರಬರುತ್ತಿದೆ ಎಂದು ಎಲ್ಲಾ ಕಡೆ ಸುದ್ದಿಯಾಗಿತ್ತಲ್ವ.[ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

Book on Huccha Venkat by Ganesh Kasargod

ಇದೀಗ ವೆಂಕಟ್ ಅವರ ಜೀವನ ಚರಿತ್ರೆ ಕುರಿತಾದ ಪುಸ್ತಕ ಬಿಡುಗಡೆ ಆಗಿದ್ದು, ಎಲ್ಲೆಡೆ ಜಗಜ್ಜಾಹೀರಾಗಿದೆ. ಬೆಂಗಳೂರಿನ ರಾಜ್ ಮಿಲನ್ ಗ್ರೀನ್ ಹೌಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವೆಂಕಟ್ ಅವರ ಕುರಿತಾದ 'ವೆಂಕಟ್-ಹುಚ್ಚು ಮನಸ್ಸಿನ ನೂರು ಮುಖಗಳು' ಪುಸ್ತಕವನ್ನು ಕೆ.ಎಫ್.ಸಿ.ಸಿ ಮಾಜಿ ಅಧ್ಯಕ್ಷ ಕಮ್ ಚಿತ್ರ ನಿರ್ಮಾಪಕ ವಿಜಯ್ ಕುಮಾರ್ ಅವರು ಬಿಡುಗಡೆ ಮಾಡಿದ್ದಾರೆ.

ಹಿರಿಯ ಪತ್ರಕರ್ತರಾದ ಗಣೇಶ್ ಕಾಸರಗೋಡು ಅವರು 'ಫೈರಿಂಗ್ ಸ್ಟಾರ್ ವೆಂಕಟ್' ಅವರ ಕುರಿತಾದ 'ವೆಂಕಟ್-ಹುಚ್ಚು ಮನಸ್ಸಿನ ನೂರು ಮುಖಗಳು' ಎಂಬ ಪುಸ್ತಕವನ್ನು ಬರೆದು ಲೋಕಾರ್ಪಣೆ ಕೂಡ ಮಾಡಿದ್ದಾರೆ. ಈ ಪುಸ್ತಕದಲ್ಲಿ ವೆಂಕಟ್ ಅವರ ವ್ಯಕ್ತಿ ಚಿತ್ರಣವನ್ನು ಹಿಡಿದಿಡುವಲ್ಲಿ ಗಣೇಶ್ ಕಾಸರಗೋಡು ಅವರು ಯಶಸ್ವಿಯಾಗಿದ್ದಾರೆ.[ವೆಂಕಟ್ ಅಭಿಮಾನಿಗಳೇ, ಅಣ್ಣ ಮತ್ತೆ ಬಿಗ್ ಮನೆಗೆ ಹೋಗ್ತಾರೆ]

Book on Huccha Venkat by Ganesh Kasargod

ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರು ಇದುವರೆಗೂ ಹತ್ತು ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಅವರ 'ಚದುರಿದ ಚಿತ್ರಗಳು', 'ಗುರಿ ಹೆಗ್ಗುರಿ', 'ಆಫ್ ದಿ ರೆಕಾರ್ಡ್' ಮುಂತಾದ ಪುಸ್ತಕಗಳು ಸಾಕಷ್ಟು ಜನಪ್ರಿಯತೆ ಗಳಿಸಿವೆ.

ಅಂದಹಾಗೆ ಕೇಕ್ ಕತ್ತರಿಸಿದ 'ಫೈರಿಂಗ್ ಸ್ಟಾರ್' ವೆಂಕಟ್ ಅವರು ತಮ್ಮ ಜೀವನಾಧರಿತ ಪುಸ್ತಕ ಬಿಡುಗಡೆ ಆದ ಸಂಭ್ರಮದಲ್ಲಿದ್ದರು. ಆ ಸಂತಸ ಅವರ ಮಾತಿನಲ್ಲೂ ಬಹಳ ಸ್ಪಷ್ಟವಾಗಿ ಗೋಚರಿಸುತ್ತಿತ್ತು.['ಹುಚ್ಚ ವೆಂಕಟ್' ಸಿನಿಮಾ ಹೌಸ್ ಫುಲ್ ಓಡ್ತಿದೆ ಕಣ್ರೀ!]

Book on Huccha Venkat by Ganesh Kasargod

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು, ಚಿತ್ರ ನಿರ್ಮಾಪಕ ವಿಜಯ್ ಕುಮಾರ್, 'ಫೈರಿಂಗ್ ಸ್ಟಾರ್' ವೆಂಕಟ್, ಸತೀಶ್ ಬಾಬು ಮತ್ತು ವೆಂಕಟ್ ಅವರ ಅಭಿಮಾನಿಗಳು ಮತ್ತಿತ್ತರು ಹಾಜರಿದ್ದರು.

English summary
‘Bigg Boss' controversial actor-director Venkat Autobiography book released. Senior Journalist Ganesh Kasaragodu write about Venkat Autobiography.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada