»   » 'ಚಿತ್ರಪಥ' ಪುಸ್ತಕ ಬಿಡುಗಡೆಗೆ ತಪ್ಪದೇ ಬನ್ನಿ

'ಚಿತ್ರಪಥ' ಪುಸ್ತಕ ಬಿಡುಗಡೆಗೆ ತಪ್ಪದೇ ಬನ್ನಿ

Posted By:
Subscribe to Filmibeat Kannada

ಕನ್ನಡ ಚಲನಚಿತ್ರಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆ ದೊರಕುವಂತೆ ಮಾಡಬೇಕು. ಕರ್ನಾಟಕದಲ್ಲಿ ಚಲನಚಿತ್ರ ಸಂಸ್ಕೃತಿ ಮೂಡಿಸಬೇಕು. ಚಿತ್ರರಂಗದ ಅಕಾಡೆಮಿಕ್ ಅಧ್ಯಯನ ಸಾಧ್ಯವಾಗುವಂತೆ ಮಾಡಬೇಕು. ಕನ್ನಡ ಚಿತ್ರರಂಗಕ್ಕೆ ಹೊಸ ವೃತ್ತಿಪರತೆಯ ಆಯಾಮ ನೀಡಬೇಕು ಎನ್ನುವ ಸುಮಾರು ಕನಸುಗಳೊಂದಿಗೆ, ಕರ್ನಾಟಕ ಸರ್ಕಾರದ ಅಡಿಯಲ್ಲಿ ಹುಟ್ಟಿಕೊಂಡ ಸಂಸ್ಥೆ ಕರ್ನಾಟಕ ಚಲನಚಿತ್ರ ಅಕಾಡೆಮಿ.

ಸತತ 5 ವರ್ಷಗಳ ಇತಿಹಾಸದಲ್ಲಿ ಅನೇಕ ದಾಖಲೆಗಳನ್ನು ಬರೆದು ಮುನ್ನಡೆಯುತ್ತಿರುವ ಅಕಾಡೆಮಿ, ಚಿತ್ರರಂಗದ ಕುರಿತಾದ ಪುಸ್ತಕ ಪ್ರಕಟಣೆಯಲ್ಲೂ ಕೈ ಜೋಡಿಸಿದೆ. ಇದೀಗ 'ಚಿತ್ರಪಥ' ಹಾಗೂ 'ಚಿತ್ರೋತ್ಸವಗಳು ಹಿನ್ನಲೆ-ಮುನ್ನಲೆ' ಎನ್ನುವ 2 ಹೊಸ ಪುಸ್ತಕಗಳು ಪ್ರಕಟಣೆಗೆ ಸಿದ್ಧವಾಗಿದ್ದು, ಇದೇ ಜುಲೈ 4, 2015 ರಂದು ಸಂಜೆ 5.30ಕ್ಕೆ ಗಾಂಧಿ ಭವನದಲ್ಲಿ ಬಿಡುಗಡೆಯಾಗಲಿದೆ.

rajendra sing babu

ಸಮಾರಂಭದಲ್ಲಿ ಖ್ಯಾತರಾದ ಡಾ.ಶ್ರೀನಾಥ್, ಡಾ.ಬರಗೂರು ರಾಮಚಂದ್ರಪ್ಪ, ಡಾ.ಜಯಮಾಲ, ಜೈಜಗದೀಶ್, ಶ್ರೀಮತಿ ಭವ್ಯ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಶ್ರೀ ಎಸ್.ವಿ.ರಾಜೇಂದ್ರಸಿಂಗ್ ಬಾಬು, ಕನ್ನಡ ಸಂಸ್ಕೃತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಶ್ರೀ ಬಿ.ಜಿ.ನಂದಕುಮಾರ್ ಮತ್ತು ಕರ್ನಾಟಕ ಚಲನಚಿತ್ರ ಮಂಡಳಿ ಅಧ್ಯಕ್ಷ ಶ್ರೀ ಥಾಮಸ್ ಡಿಸೋಜಾ ಭಾಗವಹಿಸಲಿದ್ದಾರೆ.[ಚಲನಚಿತ್ರ ಅಕಾಡೆಮಿಗೆ ರಾಜೇಂದ್ರಸಿಂಗ್ ಬಾಬು ಸಾರಥ್ಯ]

ಪುಸ್ತಕದ ಒಳಗೇನಿದೆ?
'ಚಿತ್ರಪಥ' - ಪ್ರಗತಿ ಅಶ್ವಥ್ ನಾರಾಯಣ ನಮ್ಮ ನಡುವಿರುವ ಒಬ್ಬ ಚಿತ್ರಗಾರುಡಿಗ. ಕನ್ನಡ ಚಿತ್ರರಂಗದೊಂದಿಗೆ ಅವರದ್ದು ನಾಲ್ಕು ದಶಕಗಳಿಗೂ ಮಿಕ್ಕಿದ ನಂಟು. ನಾಲ್ಕು ಲಕ್ಷಕ್ಕೂ ಹೆಚ್ಚು ಚಿತ್ರ ಕ್ಲಿಕಿಸಿದ ಹಿರಿಮೆ. ಚಿತ್ರರಂಗದ ಸರಿಸುಮಾರು ಎಲ್ಲ ಘಟನೆಗಳನ್ನು ದಾಖಲಿಸಿದ ಹೆಗ್ಗಳಿಕೆ ಅವರದು. ಅವರಲ್ಲಿನ ಅಗಾಧ ಚಿತ್ರ ಸಂಗ್ರಹದಿಂದ ಅಪರೂಪದ ಚಿತ್ರಗಳನ್ನು ಹೆಕ್ಕಿ ತೆಗೆದು ಕಟ್ಟಿರುವ ಪುಸ್ತಕ 'ಚಿತ್ರಪಥ'.

'ಚಿತ್ರೋತ್ಸವಗಳು ಹಿನ್ನಲೆ-ಮುನ್ನಲೆ' - ಗೌರಿಬಿದನೂರಿನ ಹೆಚ್.ಎಸ್. ಮಂಜುನಾಥ ಚಿತ್ರೋತ್ಸವಗಳ ಕುರಿತು ತಮ್ಮ ಆಸಕ್ತಿ, ತಮ್ಮ ಮನಸೆಳೆದ ಚಿತ್ರಗಳು ಮೊದಲಾದವುಗಳ ಜೊತೆಗೆ ಜಗತ್ತಿನ ಖ್ಯಾತ ಚಲನಚಿತ್ರೋತ್ಸವಗಳ ವಿವರಗಳನ್ನು ದಾಖಲೆಗಳ ಸಂಗ್ರಹ ಈ ಪುಸ್ತಕದಲ್ಲಿದೆ.

ಸಮಾರಂಭ ನಡೆಯುವ ವಿವರ: ಬಾದಾಮಿ ಹೌಸ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಕಛೇರಿ ಮುಂಭಾಗ, ಬೆಂಗಳೂರು-560 002

English summary
Karnataka Chalanachitra Academy is releasing two books namely, 'Chitrapatha' and 'Chalanachitrotsavagalu hinnale-munnale' on July 4th. Venue - Badami House, Bengaluru

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada