»   » ವಾಸ್ತು ಪ್ರಕಾರ ಬಣ್ಣ ಹಚ್ಚಿದ 'ಬ್ರಹ್ಮಾಂಡ' ಬಾಬು

ವಾಸ್ತು ಪ್ರಕಾರ ಬಣ್ಣ ಹಚ್ಚಿದ 'ಬ್ರಹ್ಮಾಂಡ' ಬಾಬು

Posted By:
Subscribe to Filmibeat Kannada

ಕನ್ನಡ ಕಿರುತೆರೆಯ ವೀಕ್ಷಕರಿಗೆ ಚಿರಪರಿಚಿತ ಮುಖ 'ಬ್ರಹ್ಮಾಂಡ' ಖ್ಯಾತಿಯ ನರೇಂದ್ರ ಬಾಬು ಶರ್ಮ. ಕನ್ನಡದ ಎಲ್ಲಾ ಮನರಂಜನಾ ವಾಹಿನಿಗಳಲ್ಲೂ ಒಂದು ಸುತ್ತು ಹೊಡೆದುಕೊಂಡು ಬಂದಿರುವ 'ಬ್ರಹ್ಮಾಂಡ' ಗುರುಗಳು ಇದೀಗ ಪಬ್ಲಿಕ್ ಟಿವಿಯಲ್ಲಿ ಬ್ರಹ್ಮಾಂಡ ಭಂಡಾರ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.

ಇದೇ ಗ್ಯಾಪಲ್ಲಿ ಅವರು ಮತ್ತೊಂದು ದೃಢ ಹೆಜ್ಜೆ ಇಟ್ಟಿದ್ದಾರೆ. ಯೋಗರಾಜ್ ಭಟ್ ಅವರ ವಾಸ್ತು ಪ್ರಕಾರ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. 'ಬ್ರಹ್ಮಾಂಡ' ಬಾಬು ಅವರು ಬಣ್ಣ ಹಚ್ಚುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅವರು ಕಲ್ಲರಲಿ ಹೂವಾಗಿ, ಉಪ್ಪಿದಾದಾ ಎಂಬಿಬಿಎಸ್ ಸೇರಿದಂತೆ ಹಲವು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಪೋಷಿಸಿದ್ದಾರೆ. [ವೇಲಾಯುಧ ರಹಸ್ಯ ಬಿಚ್ಚಿಟ್ಟ ಬ್ರಹ್ಮಾಂಡ ಶರ್ಮಾ]

Narendra Babu Sharma

ಇನ್ನು ಬ್ರಹ್ಮಾಂಡ ಗುರುಗಳು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕಡೆಯತನಕ ಕಿರುತೆರೆ ವೀಕ್ಷಕರಿಗೆ ಸಖತ್ ಮನರಂಜನೆ ಕೊಟ್ಟಿದ್ದರು. ಮಾತೆತ್ತಿದ್ದರೆ ಮುಂಡಾಮೋಚ್ತು, ಮುಂಡೇವು, ಪುಟಗೋಸಿ ಎಂಬ ಮಾತುಗಳಿಗೆ ಬೆರಗಾಗಿದ್ದರು.

ಇಷ್ಟಕ್ಕೂ ಚಿತ್ರದಲ್ಲಿ ಶರ್ಮಾ ಅವರ ಪಾತ್ರ ನಾಯಕ ನಟ ರಕ್ಷಿತ್ ಅವರಿಗೆ ತಂದೆಯಾಗಿ ಅಭಿನಯಿಸುತ್ತಿದ್ದಾರೆ. ಜೊತೆಗೆ ವಾಸ್ತುತಜ್ಞ. ಶರ್ಮಾ ಅವರಿಗೆ ವಾಸ್ತು ಎಂದರೆ ಬಲು ಇಷ್ಟ. ಆದರೆ ಅವರ ಪುತ್ರನಿಗೆ ವಾಸ್ತು ಎಂದರೆ ಆಗಲ್ಲ. ಅದೇ ವಾಸ್ತು ಇಬ್ಬರನ್ನು ಹೇಗೆ ಒಂದು ಮಾಡುತ್ತದೆ ಎಂಬುದೇ ಚಿತ್ರದ ಕಥಾವಸ್ತು.

ವಾಸ್ತುಪ್ರಕಾರ ಚಿತ್ರದ ಬಹುತೇಕ ಶೂಟಿಂಗ್ ಮಲೇಷ್ಯಾದಲ್ಲಿ ನಡೆಯಲಿದೆಯಂತೆ. ಆದರೆ ಬ್ರಹ್ಮಾಂಡ ಬಾಬು ಅವರ ಪಾತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಮೇ ತಿಂಗಳಿಂದ ಚಿತ್ರೀಕರಣ ಆರಂಭ. 'ಬ್ರಹ್ಮಾಂಡ' ಬಾಬು ಅವರಿಗೆ ಒಳ್ಳೆಯ ಕಾಲ ಈಗ.

English summary
Hindu televangelist, actor, TV anchor, self-styled astrologer and spiritual guru 'Brahmanda Guruji' Narendra Babu Sharma to play a father role in Yograj Bhat's upcoming movie 'Vastu Prakara'. The movie shooting stars from May, 2014.
Please Wait while comments are loading...