ಮೇ 10, 'ಬುಲ್ ಬುಲ್' ರಚಿತಾಗೆ ಅದೃಷ್ಟ ಕೊಟ್ಟ ದಿನ

By Bharath Kumar

ಮೇ 10, ಕನ್ನಡ ಚಿತ್ರರಂಗದ ಕೆಲವರಿಗೆ ಬಹಳ ಮುಖ್ಯವಾದ ದಿನ. ಈ ದಿನ ಅನೇಕ ಕಲಾವಿದರ ಜೀವನ ಬದಲಿಸಿದೆ ಎನ್ನಬಹುದು. ಅದರಲ್ಲೂ, ಚಂದನವನದಲ್ಲಿ 'ಬುಲ್ ಬುಲ್' ಎಂದೇ ಖ್ಯಾತಿ ಗಳಿಸಿಕೊಂಡಿರುವ ರಚಿತಾ ರಾಮ್ ಗೂ ಇದು ಅದೃಷ್ಟದ ದಿನ.

ಮೇ 10, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಬುಲ್ ಬುಲ್' ಸಿನಿಮಾ ಬಿಡುಗಡೆಯಾದ ದಿನ. ಎಂ.ಡಿ ಶ್ರೀಧರ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಸಿನಿಮಾ ಮೇ 10, 2013 ರಂದು ತೆರೆಕಂಡಿತ್ತು. ಈ ಮೂಲಕ 'ಬುಲ್ ಬುಲ್' ಚಿತ್ರ ಹಾಗೂ ರಚಿತಾ ರಾಮ್ ಗೆ ಇಂಡಸ್ಟ್ರಿಯಲ್ಲಿ 5 ವರ್ಷದ ಸಂಭ್ರಮದಲ್ಲಿದ್ದಾರೆ.

ಹೌದು, ದರ್ಶನ್ ಅಭಿನಯದ 'ಬುಲ್ ಬುಲ್' ಚಿತ್ರದ ಮೂಲಕವೇ ರಚಿತಾ ರಾಮ್ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಪರಿಚಯವಾಗಿದ್ದು. ಇಲ್ಲಿಂದ ಶುರುವಾದ ರಚಿತಾ ಸಿನಿ ಪಯಣ ಯಶಸ್ಸಿ ಹಾದಿಯಲ್ಲೇ ಇದೆ. ದರ್ಶನ್, ಸುದೀಪ್, ಪುನೀತ್, ಶ್ರೀಮುರಳಿ, ಗಣೇಶ್, ದುನಿಯಾ ವಿಜಯ್, ಧ್ರುವ ಸರ್ಜಾ ಹೀಗೆ ಸ್ಟಾರ್ ನಟರ ಲಕ್ಕಿ ನಟಿಯಾಗಿದ್ದಾರೆ.

Bul bul movie 5th anniversary

in pics: ಬುಲ್ ಬುಲ್ ಚಿತ್ರದ ಫೋಟೋಗಳು

ಈಗ ಸತೀಶ್ ನೀನಾಸಂ ಅಭಿನಯದ 'ಅಯೋಗ್ಯ' ಹಾಗೂ ಉಪೇಂದ್ರ ಜೊತೆ 'ಉಪ್ಪಿ-ರುಪ್ಪಿ', ನಿಖಿಲ್ ಕುಮಾರ್ ಜೊತೆ 'ಸೀತರಾಮ ಕಲ್ಯಾಣ' ಹಾಗೂ ಪುನೀತ್ ರಾಜ್ ಕುಮಾರ್ ಜೊತೆ 'ನಟಸಾರ್ವಭೌಮ' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಮೀನಾ ತೂಗುದೀಪ ಅವರು ಈ ಚಿತ್ರವನ್ನ ನಿರ್ಮಾಣ ಮಾಡಿದ್ದರು. ಹರಿಕೃಷ್ಣ ಸಂಗೀತ ಸಂಯೋಜನೆ ಒಳಗೊಂಡಿತ್ತು. ದರ್ಶನ್ ಜೊತೆಯಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಅವರು ಅಭಿನಯಿಸಿದ್ದರು.

More from Filmibeat

English summary
Kannada Actor challenging star darshan and rachitha ram starrer bul bul movie celebrating 5th anniversary. the movie has released on may 10th, 2013.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X