»   » ರಾಜ್ಯದೆಲ್ಲೆಡೆ ಬಸ್ಯಾನ ಬುಲೆಟ್ ಸದ್ದು ಜೋರಾಗೈತೆ!

ರಾಜ್ಯದೆಲ್ಲೆಡೆ ಬಸ್ಯಾನ ಬುಲೆಟ್ ಸದ್ದು ಜೋರಾಗೈತೆ!

Posted By:
Subscribe to Filmibeat Kannada

ಬೆಂಗಳೂರಿನ ಕಪಾಲಿ ಚಿತ್ರಮಂದಿರ ಸೇರಿದಂತೆ ಕರ್ನಾಟಕದಾದ್ಯಂತೆ ಸುಮಾರು 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಸ್ಯಾನ 'ಬುಲೆಟ್' ಜೋರಾಗಿ ಕೇಳಿಸುತ್ತಿದೆ. ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಮೊದಲ ದಿನದ ಮೊದಲ ಶೋ ನೋಡಿದ ಸಿನಿರಸಿಕರು ತಮ್ಮಮ್ಮ ಅಭಿಪ್ರಾಯ, ಅನಿಸಿಕೆ, ವಿಮರ್ಶೆ ಹಂಚಿಕೊಳ್ಳುತ್ತಿದ್ದಾರೆ. ಅಲ್ಲಲ್ಲಿ ಡಬ್ಬಲ್ ಮೀನಿಂಗ್ ಡೈಲಾಗ್ ಇದ್ದರೂ ಒಳ್ಳೆ ಕಾಮಿಡಿ ಚಿತ್ರ ಎಂಬ ಅಭಿಪ್ರಾಯ ಈ ಕ್ಷಣಕ್ಕೆ ಸಿಕ್ಕಿದೆ.

ಒಲವೇ ಮಂದಾರ, ಟೋನಿಯಂಥ ಚಿತ್ರ ನಿರ್ದೇಶಿಸಿದ್ದ ರಂಗಭೂಮಿ ಹಿನ್ನೆಲೆಯುಳ್ಳ ಕನ್ನಡದ ಪ್ರತಿಭೆ ಜಯತೀರ್ಥ ಅವರು ಶರಣ್ ಅವರಿಂದ 'ಬುಲೆಟ್' ಸಕತ್ತಾಗಿ ಓಡಿಸಿದ್ದಾರೆ. ಉಗ್ರಂ ನಂತರ ಹರಿಪ್ರಿಯಾ ನೋಡಿ ಪಡ್ಡೆಗಳು ಹೇಗಿರಲಿ ನಾನು ಸುಮ್ನೆ ಎಂದು ಗುನುಗುತ್ತಿದ್ದಾರೆ.

ಕಿಚ್ಚ ಸುದೀಪ್ ಸೇರಿದಂತೆ ಕನ್ನಡ ಚಿತ್ರರಂಗದ ಕಲಾವಿದರು, ಸದಭಿರುಚಿ ಚಿತ್ರಗಳನ್ನು ಇಷ್ಟಪಡುವ ಅಪ್ಪಟ ಕನ್ನಡ ಪ್ರೇಕ್ಷಕರು, ಹರಿಪ್ರಿಯಾ, ಶರಣ್ ಹಾಗೂ ಹಾಸ್ಯ ಚಿತ್ರಗಳ ಫ್ಯಾನ್ಸುಗಳು ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

ಬೆಂಗಳೂರಿನ ಆನಂದ್ ರಾವ್ ಸರ್ಕಲ್ ನಲ್ಲಿರೋ ಗಣೇಶನಿಗೆ ಕೈ ಮುಗಿದ ಶರಣ್ ಅವರು ಹರಿಪ್ರಿಯಾ ಜತೆಗೂಡಿ ಬುಲೆಟ್ ಏರಿ ಕಪಾಲಿ ಚಿತ್ರಮಂದಿರಕ್ಕೆ ಎಂಟ್ರಿಕೊಟ್ಟಿದ್ದಾರೆ. ಒಟ್ಟಾರೆ, ಶರಣ್ ಅವರ ಚಿತ್ರ ಮತ್ತೊಮ್ಮೆ ಭರ್ಜರಿ ಓಪನಿಂಗ್ ಪಡೆದುಕೊಳ್ಳುವ ಎಲ್ಲಾ ನಿರೀಕ್ಷೆ ಹುಟ್ಟಿಸಿದೆ.. ಸದ್ಯಕ್ಕೆ ಟ್ವಿಟ್ಟರ್ ನಲ್ಲಿ ಬಂದಿರುವ ಅಭಿಪ್ರಾಯಗಳ ಸಂಗ್ರಹ ಇಲ್ಲಿದೆ ಓದಿ...

ಬುಲೆಟ್ ಬಸ್ಯಾ ಹೆಸರು ಹೇಗೆ ಬಂತು?

1989ರಲ್ಲಿ ಭರ್ಜರಿ ಯಶಸ್ಸು ಕಂಡ ಶಂಕರ್ ನಾಗ್ ಅಭಿನಯದ ಸಿಬಿಐ ಶಂಕರ್ ಚಿತ್ರದ ಪಾತ್ರಧಾರಿ ಸುಧೀರ್ ಅವರ ಹೆಸರು 'ಬುಲೆಟ್ ಬಸ್ಯಾ'. ಇದೇ ಹೆಸರು ಇಲ್ಲಿ ಬಳಸಿಕೊಳ್ಳಲಾಗಿದೆ. ಅದರೆ, ಆ ಬಸ್ಯಾನಿಗೂ ಈ ಬಸ್ಯಾನಿಗೂ ಸಂಬಂಧವಿಲ್ಲ ಬಿಡಿ.

ಅರ್ಜುನ್ ಜನ್ಯಾ ಸಂಗೀತ ಜನಪ್ರಿಯತೆ

ಅರ್ಜುನ್ ಜನ್ಯಾ ಅವರು ಎಂದಿನಂತೆ ಎದ್ದು ಕುಣಿದಾಡುವಂಥ ಟ್ಯೂನ್ ಗಳನ್ನು ಹೊಸೆದಿದ್ದಾರೆ. ಜಯಣ್ಣ ಹಾಗೂ ಭೋಗೇಂದ್ರ ಯಶಸ್ವಿ ನಿರ್ಮಾಪಕರ ಈ ಚಿತ್ರದ ಅವಧಿ 139 ನಿಮಿಷಗಳು.

ಕಿಚ್ಚ ಸುದೀಪ್ ಅವರಿಂದ ಶುಭ ಹಾರೈಕೆ

ಬುಲೆಟ್ ಬಸ್ಯಾ ಚಿತ್ರ ಯಶಸ್ಸು ಕಾಣಲಿ ಎಂದು ಕಿಚ್ಚ ಸುದೀಪ್ ಅವರಿಂದ ಶುಭ ಹಾರೈಕೆ.

ಚಿತ್ರದ ಮಧ್ಯಂತರ ಸಮಯದ ವರದಿ

ಚಿತ್ರದ ಮಧ್ಯಂತರ ಸಮಯದ ವರದಿ ಪ್ರಕಾರ ಶರಣ್ ಹಾಗೂ ಹರಿಪ್ರಿಯಾ ನಟನೆ, ಸುಗ್ನನ್ ಅವರ ಛಾಯಾಗ್ರಹಣ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.

ರಾಜ್ಯದ ಚಿತ್ರಮಂದಿರಗಳ ಪಟ್ಟಿ ಇರುವ ಟ್ವೀಟ್

ರಾಜ್ಯದ ಚಿತ್ರಮಂದಿರಗಳ ಪಟ್ಟಿ ಇರುವ ಟ್ವೀಟ್ ನಿಮಗಾಗಿ.

ಡಬ್ಬಲ್ ಮೀನಿಂಗ್ ಡೈಲಾಗ್ ಸಹಿಸಿಕೊಳ್ಳಿ

ಡಬ್ಬಲ್ ಮೀನಿಂಗ್ ಡೈಲಾಗ್ ಸಹಿಸಿಕೊಂಡರೆ ಇಲ್ಲಿ ತನಕ ಏನು ತೊಂದರೆ ಇಲ್ಲದೆ ಮನರಂಜನೆ ನೀಡುತ್ತಿದೆ ಎಂದು ಮಧ್ಯಂತರ ಅವಧಿಯಲ್ಲಿ ನೀಡಿದ ಅಭಿಪ್ರಾಯ.

English summary
Bullet Basya Kannada film directed by Jayatheertha got released today(July 24) over 200 screens across Karnataka. Bullet Basya has Sharan, Haripriya in the lead roles. The movie got good response, Here is first day first show report and fans craze in twitter.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada