»   » ಬುಲ್ಲೆಟ್ ಬಸ್ಯಾನೋ ಮಳೆನೋ, ಒಟ್ನಲ್ಲಿ ಎರಡೂ ಮುಳುಗದಿರಲಿ

ಬುಲ್ಲೆಟ್ ಬಸ್ಯಾನೋ ಮಳೆನೋ, ಒಟ್ನಲ್ಲಿ ಎರಡೂ ಮುಳುಗದಿರಲಿ

By: ಜೀವನರಸಿಕ
Subscribe to Filmibeat Kannada

ಒಂದೆರಡು ವಾರಗಳಿಂದ ಭಾರತೀಯ ಚಿತ್ರರಂಗವೇ ಬಾಹುಬಲಿಯ ಬಗ್ಗೆ ಮಾತ್ನಾಡ್ತಿದೆ. ಇನ್ನು ಸ್ಯಾಂಡಲ್ವುಡ್ ಕೂಡ ಬಾಹುಬಲಿಯ ಕಬಂಧ ಬಾಹುಗಳಿಗೆ ಸಿಕ್ಕಿ ನುಜ್ಜುಗುಜ್ಜಾಗಿದೆ. ಹೆಚ್ಚೂ ಕಡಿಮೆ ಮೂರುವಾರ ಸ್ಯಾಂಡಲ್ವುಡ್ ಸಿನಿಮಾಗಳು ಸುದ್ದಿ ಮಾಡಿಲ್ಲ.

ಅದಾದ ನಂತ್ರ ಈಗ ಮೂರು ವಾರದಿಂದ ಕಾದಿದ್ದ ದೊಡ್ಡ ಸಿನಿಮಾಗಳು ನಾವು ಬರ್ತೀವಿ, ನಾವು ಬರ್ತೀವಿ ಅಂತ ಥಿಯೇಟರ್ ತಲಾಶ್ನಲ್ಲಿದ್ದಾರೆ. ಆದ್ರೆ ಈಗ್ಲೇ ಬಾಹುಬಲಿಯ ಬಾಹುಬಂಧನದಲ್ಲಿರೋ ಚಿತ್ರಮಂದಿರಗಳಿಗೆ ಎರಡೆರಡು ದೊಡ್ಡ ಚಿತ್ರಗಳನ್ನ ಒಂದೇ ಬಾರಿ ಸ್ವೀಕರಿಸೋ ತಾಕತ್ತಿಲ್ಲ. [ಸೆನ್ಸಾರ್ ನಿಂದ ಕ್ಲೀನ್ ಚಿಟ್ ಪಡೆದ ಶರಣ್ 'ಬುಲೆಟ್ ಬಸ್ಯಾ']


Bullet Basya or Male : Let there be no fight

ಆದ್ರೆ ಮುಂದಿನ ವಾರ ಅಂದ್ರೆ 24ಕ್ಕೆ ಶರಣ್-ಹರಿಪ್ರಿಯಾ ಅಭಿನಯದ ಬುಲೆಟ್ ಬಸ್ಯಾ, ಪ್ರೇಮ್ ಅಮೂಲ್ಯ ಅಭಿನಯದ ಎರಡೂ ಚಿತ್ರಗಳು ನಾವು ಮೊದಲು ನಾವು ಮೊದಲು ಅಂತಿದ್ದಾರೆ. ಯಾವ ಚಿತ್ರ ಮುಂದಕ್ಕೆ ಹೋಗುತ್ತೋ ಗೊತ್ತಿಲ್ಲ. ಆದ್ರೆ ಎರಡೂ ಚಿತ್ರಗಳು ಒಟ್ಟಿಗೇ ಬಂದ್ರೆ ಒಂದಕ್ಕೆ ಮಾತ್ರ ಅಲ್ಲ ಎರಡೂ ಚಿತ್ರಗಳಿಗೆ ನಷ್ಟ ತಪ್ಪಿದ್ದಲ್ಲ. ['ಶರಣ ಬಸವೇಶ್ವರ'ರಿಗೆ ಶರಣ್ ಶರಣು ಶರಣಾರ್ಥಿ]


ಇದು ವಿಪರ್ಯಾಸವೂ ಹೌದು. ಅನ್ಯಭಾಷೆಯ ಚಿತ್ರಗಳ ಜೊತೆ ಥಿಯೇಟರುಗಳಿಗಾಗಿ ಹೋರಾಟಕ್ಕೆ ಯಾರೂ ಮುಂದೆ ಬರುವುದಿಲ್ಲ. ಆದರೆ, ನಮ್ಮನಮ್ಮಲ್ಲೇ ಆಗುವ ಪರಸ್ಪರ ಜಗಳಗಳಿಂದ, ಲಾಭದ ಮಾತು ಅತ್ಲಾಗಿರಲಿ ಇತ್ತೀಚಿನ ದಿನಗಳಲ್ಲಿ ಅಸಲು ಕೂಡ ಹುಟ್ಟುತ್ತಿಲ್ಲ. ಬುಲೆಟ್ ಬಸ್ಯಾ ಸ್ಪೀಡ್ ಜಾಸ್ತಿ ಮಾಡಿದ್ರೆ ಅಪಘಾತ ಆಗೋದು ಗ್ಯಾರಂಟಿ.


ಸುದೀಪ್ ಅವರ ರನ್ನ ಬಿಡುಗಡೆಯಾಗುವ ಸಂದರ್ಭದಲ್ಲೂ ಇಂಥದೇ ಪರಿಸ್ಥಿತಿ ಒದಗಿತ್ತು. ಶಿವರಾಜ್ ಕುಮಾರ್ ಅವರು ಭಜರಂಗಿ ಕೂಡ ಬಿಡುಗಡೆಯ ಹಾದಿಯಲ್ಲಿತ್ತು. ಆಗ ಪರಸ್ಪರ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ರನ್ನ ಬಿಡುಗಡೆಯಾಗಿ ಒಂದು ವಾರದ ನಂತರ ಭಜರಂಗಿ ತೆರೆ ಕಂಡಿತ್ತು. ಹೀಗಾಗಿ ಎರಡೂ ಚಿತ್ರಗಳು ಜಯಭೇರಿ ಬಾರಿಸಿ ಲಾಭದಲ್ಲಿವೆ.

English summary
Bullet Basya starring Sharan and Haripriya, Male sarring Prem Kumar and Amoolya are slated to be released on July 24. But, relase of two Kannada movies on the same day may cause loss to both the movies, when other language movies like Baahubali are making big noise.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada