Don't Miss!
- Sports
BGT 2023: ನೆಟ್ಸ್ನಲ್ಲಿ ಬೌಲಿಂಗ್ ಮಾಡಲು ಜಮ್ಮು-ಕಾಶ್ಮೀರದ ಸ್ಪಿನ್ನರ್ಗೆ ಆಹ್ವಾನ ನೀಡಿದ ಆಸ್ಟ್ರೇಲಿಯಾ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- News
Union Budget 2023; ಅಮೃತ ಕಾಲಕ್ಕೆ ಎಲ್ಲಾ ಸೌಕರ್ಯ ಒದಗಿಸುವ ಬಜೆಟ್, ಜೋಶಿ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಈ' ಸ್ಟಾರ್ ನಟನಿಗೆ ಸಿನಿಮಾ ನಿರ್ಮಾಣ ಮಾಡುವ ಕನಸಿಟ್ಟುಕೊಂಡಿದ್ದರು ಬುಲೆಟ್ ಪ್ರಕಾಶ್
ಸ್ಯಾಂಡಲ್ ವುಡ್ ನ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಸಾಕಷ್ಟು ಕನಸುಗಳನ್ನು ಇಟ್ಟುಕೊಡಿದ್ದರು. ಕಿಡ್ನಿ ಮತ್ತು ಲಿವರ್ ವೈಫಲ್ಯದಿಂದ ಬಳಲುತ್ತಿದ್ದ ಬುಲೆಟ್ ಪ್ರಕಾಶ್ ಆಸೆ ಈಡೇರುವ ಮೊದಲೆ ಕೊನೆಯುಸಿರೆಳೆದಿದ್ದಾರೆ. ಬಲೆಟ್ ಪ್ರಕಾಶ್ ಗೆ ಇನ್ನೂ 44 ವರ್ಷ. ಇತ್ತೀಚಿಗೆ ಸಿನಿಮಾ ಅವಕಾಶಗಳು ಸಿಗದೆ ಮಾನಸಿಕವಾಗಿ ಕುಗ್ಗಿಹೋಗಿದ್ದ ಬುಲೆಟ್ ಗೆ ಅನಾರೋಗ್ಯ ಬದುಕನ್ನೆ ಕಸಿದುಕೊಂಡಿತ್ತು.
ಒಂದು ಕಾಲದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇದ್ದ ಬುಲೆಟ್, ದಿನಕ್ಕೆ ಮೂರ್ನಾಲ್ಕು ಸಿನಿಮಾಗಳ ಶೂಟಿಂಗ್ ಮಾಡುತ್ತಿದ್ದರು. ಬಹುಬೇಡಿಕೆಯ ನಟರಾಗಿದ್ದ ಪ್ರಕಾಶ್ ಸ್ಯಾಂಡಲ್ ವುಡ್ ನ ಬಹುತೇಕ ಸ್ಟಾರ್ ನಟರ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಷ್ಟದಿಂದ ಬೆಳೆದು ಬಂದ ಬುಲೆಟ್ ಗೆ ಸಿನಿಮಾರಂಗ ಕೈ ಹಿಡಿದು ಎತ್ತರಕ್ಕೆ ಬೆಳೆಸಿತು.

'ಬದುಕಿನ ಕೊನೆ ಕ್ಷಣದವರೆಗೂ ಬಣ್ಣಹಚ್ಚುತ್ತೇನೆ'
ಹಾಸ್ಯ ನಟನಾಗಿ ಪ್ರೇಕ್ಷಕರ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದ ಬುಲೆಟ್ ತಮ್ಮ ಬದುಕಿನ ಕೊನೆಯ ದಿನಗಳನ್ನು ಕಣ್ಣೀರಿನಲ್ಲಿಯೇ ಕೈ ತೊಳೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಬುಲೆಟ್ ಹಿಂದೊಮ್ಮೆ ಬದುಕಿನ ಕೊನೆ ಕ್ಷಣದವರೆಗೂ ಬಣ್ಣಹಚ್ಚುತ್ತೇನೆ ಎಂದು ಹೇಳಿದ್ದರು. ಆದರೆ ಅನಾರೋಗ್ಯ ಅವರನ್ನು ಬಿಡಲೇ ಇಲ್ಲ. ಕಳೆದೆರಡು ವರ್ಷಗಳಲ್ಲಿ ಬುಲೆಟ್ ಬಹುತೇಕ ಆಸ್ಪತ್ರೆಯಲ್ಲಿಯೆ ಕಾಲಕಳೆದಿದ್ದಾರೆ.

ಸಾಕಷ್ಟು ಕನಸಿಟ್ಟುಕೊಂಡಿದ್ದರು ಬುಲೆಟ್
ಬುಲೆಟ್ ಗೆ ಸಾಕಷ್ಟು ಕನಸುಗಳಿದ್ದವು. ಇನ್ನೂ ಅಭಿನಯಿಸಬೇಕು, ಸಿನಿಮಾ ನಿರ್ಮಾಣ ಮಾಡಬೇಕು, ಮಗನನ್ನು ತೆರೆ ಮೇಲೆ ನೋಡಬೇಕೆಂದು ಹೀಗೆ ಸಾಕಷ್ಟು ಆಸೆಗಳನ್ನು ಇಟ್ಟುಕೊಂಡಿದ್ದರು. ಆದರೆ ಈ ಕನಸೆಲ್ಲ ನನಸಾಗುವ ಮೊದಲೆ ಬುಲೆಟ್ ಇಹಲೋಕ ತ್ಯಾಜಿಸಿರುವುದ ವಿಪರ್ಯಾಸ.

ದರ್ಶನ್ ಗೆ ಸಿನಿಮಾ ಮಾಡುವ ಕನಸಿತ್ತು
ಒಂದು ಕಾಲದ ಗೆಳೆಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಸಿನಿಮಾ ನಿರ್ಮಾಣ ಮಾಡಬೇಕೆನ್ನುವ ದೊಡ್ಡ ಕನಸಿಟ್ಟುಕೊಂಡಿದ್ದರು. ದರ್ಶನ್ ಜೊತೆ ಸಾಕಷ್ಟು ಸಿನಿಮಾಗಳಲ್ಲಿಯೂ ಬುಲೆಟ್ ಅಭಿನಯಿಸಿದ್ದಾರೆ. ಪ್ರಾರಂಭದಲ್ಲಿ ಬುಲೆಟ್, ದರ್ಶನ್ ಜೊತೆ ಉತ್ತಮ ಸ್ನೇಹ ಹೊಂದಿದ್ದರು. ಚಿತ್ರರಂಗದಲ್ಲಿ ಯಶಸ್ಸು ಕಾಣುತ್ತಿದ್ದಂತೆ ಬುಲೆಟ್ ನಿರ್ಮಾಣದ ಕನಸು ಕಂಡಿದ್ದರು. ಮೊದಲ ಸಿನಿಮಾ ದರ್ಶನ್ ಅವರಿಗೆ ಮಾಡಬೇಕೆಂದು ನಿರ್ಧಾರ ಮಾಡಿದ್ದರು.

ದರ್ಶನ್ ಗೆ ಮಾಡಬೇಕಿದ್ದ ಸಿನಿಮಾ ಪುನೀತ್ ಪಾಲಾಯಿತು
ದರ್ಶನ್ ಗೆ ನಿರ್ಮಾಣ ಮಾಡಬೇಕೆಂದು ಬುಲೆಟ್ ತಮಿಳಿನ ಸೂಪರ್ ಹಿಟ್ ಪೂಜೈ ಸಿನಿಮಾದ ರಿಮೇಕ್ ರೈಟ್ಸ್ ಅನ್ನು ತೆಗೆದುಕೊಂಡಿದ್ದರು. ಗೆಳೆಯನಿಗಾಗಿ ಆ ಸಿನಿಮಾ ಮಾಡುವ ನಿರ್ಧಾರ ಮಾಡಿದ್ದರು. ಅಷ್ಟರಲ್ಲೆ ದರ್ಶನ್ ಮತ್ತು ಬುಲೆಟ್ ನಡುವಿನ ಸ್ನೇಹ ಮುರಿದುಬಿತ್ತು. ಅಲ್ಲಿಗೆ ಬುಲೆಟ್ ಸಿನಿಮಾ ಕನಸು ಮಣ್ಣಾಯಿತು. ಆ ನಂತರ ಪೂಜೈ ಕನ್ನಡ ರಿಮೇಕ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಾಯಕನಾಗಿ ಕಾಣಿಸಿಕೊಂಡರು.

ಮಗನನ್ನು ತೆರೆಮೇಲೆ ನೋಡುವ ಆಸೆ ಹೊಂದಿದ್ದರು
ಬುಲೆಟ್ ಪ್ರಕಾಶ್ ಗೆ ಒಬ್ಬಳು ಮಗಳು ಮತ್ತು ಒಬ್ಬ ಮಗ ಇದ್ದಾರೆ. ಬುಲೆಟ್ ಪ್ರಕಾಶ್ ಪುತ್ರ ರಕ್ಷನ್ ಅನ್ನು ಹೀರೋ ಮಾಡಬೇಕು ಎನ್ನುವ ದೊಡ್ಡ ಆಸೆ ಇಟ್ಟುಕೊಂಡಿದ್ದರು. ಸಿನಿಮಾಗಾಗಿಯೆ ರಕ್ಷನ್ ಅನೇಕ ತರಬೇತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸ್ವಿಮ್ಮಿಂಗ್, ಡಾನ್ಸ್, ಫೈಟ್, ಬಾಕ್ಸಿಂಗ್ ಹೀಗೆ ಸಿನಿಮಾಗೆ ಬೇಕಾದ ಸಾಕಷ್ಟು ವಿಚಾರಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇನ್ನೇನು ಮಗ ಹೀರೋ ಆಗುತ್ತಾನೆ, ಸಿನಿಮಾದಲ್ಲಿ ಅಬ್ಬರಿಸುವ ಮಗನ್ನು ನೋಡಬೇಕೆಂದು ಕೊಂಡಿದ್ದರು. ಆದರೆ ಮಗನನ್ನು ತೆರೆ ಮೇಲೆ ನೋಡುವ ಮೊದಲೆ ಕೊನೆಯುಸಿರೆಳೆದಿದ್ದಾರೆ.