For Quick Alerts
  ALLOW NOTIFICATIONS  
  For Daily Alerts

  ಹಾಸ್ಯ ನಟ ಬುಲೆಟ್ ಪ್ರಕಾಶ್ ಆರೋಗ್ಯದಲ್ಲಿ ಏರುಪೇರು

  By Pavithra
  |
  ಹಾಸ್ಯ ನಟ ಬುಲೆಟ್ ಪ್ರಕಾಶ್ ಆಸ್ಪತ್ರೆಗೆ ದಾಖಲು | Filmibeat Kannada

  ಕನ್ನಡ ಸಿನಿಮಾರಂಗದಲ್ಲಿ ಹಾಸ್ಯ ನಟನಾಗಿ ಗುರುತಿಸಿಕೊಂಡಿರುವ ಬುಲೆಟ್ ಪ್ರಕಾಶ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಬುಲೆಟ್ ಪ್ರಕಾಶ್ ಇತ್ತೀಚಿನ ದಿನಗಳಲ್ಲಿ ತುಂಬಾ ಸಣ್ಣಗಾಗಿದ್ದರು. ಅದೇ ಅವರ ಆರೋಗ್ಯ ಹದಗೆಡಲು ಕಾರಣ ಎನ್ನುತ್ತಿವೆ ಮೂಲಗಳು. ಬುಲೆಟ್ ಪ್ರಕಾಶ್ ಸಣ್ಣಗಾಗಲು ಚಿಕಿತ್ಸೆಯನ್ನು ತೆಗೆದುಕೊಂಡಿದ್ದರಂತೆ, ಅದರಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ.

  ಚಿಕಿತ್ಸೆಗಾಗಿ ಬುಲೆಟ್ ಪ್ರಕಾಶ್ ಅವರನ್ನು ಮೂರು ದಿನಗಳ ಹಿಂದೆ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲಾಗಿದೆ. ನಂತರ ವೈದ್ಯರ ಸಲಹೆಯ ಮೇರೆಗೆ ಅಲ್ಲಿಯೇ ದಾಖಲು ಮಾಡಿ ಎರಡು ದಿನ ಚಿಕಿತ್ಸೆ ಕೊಡಿಸಲಾಗಿದೆ. ನಿನ್ನೆ(ಮಾರ್ಚ್ 11) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಸದ್ಯ ಮನೆಯಲ್ಲಿ ಬುಲೆಟ್ ಪ್ರಕಾಶ್ ವಿಶ್ರಾಂತಿ ಪಡೆಯುತ್ತಿದ್ದಾರಂತೆ.

  ಬುಲೆಟ್ ಪ್ರಕಾಶ್ ದರ್ಶನ್, ದುನಿಯಾ ವಿಜಯ್‌, ಸಾಧುಕೋಕಿಲಾ, ರಂಗಾಯಣ ರಘು ಜೊತೆ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಗುರುತಿಸಿಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ಬುಲೆಟ್ ಪ್ರಕಾಶ್ ರಾಜಕೀಯ ಕ್ಷೇತ್ರದಲ್ಲಿಯೂ ತಮ್ಮನ್ನ ತೊಡಗಿಸಿಕೊಂಡಿದ್ದರು.

  English summary
  Kannada comedian Bullet Prakash has been admitted to the hospital, Bullet Prakash has been admitted to Vikram Hospital in Bangalore,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X