For Quick Alerts
  ALLOW NOTIFICATIONS  
  For Daily Alerts

  ಅರ್ಜುನ್ ಸರ್ಜಾ ಗುರು, ಮಗ ಶಿಷ್ಯ: ಬುಲೆಟ್ ಪ್ರಕಾಶ್ ಕನಸಿನ ಚಿತ್ರ

  |

  ಮಗನನ್ನು ಸ್ಯಾಂಡಲ್‌ವುಡ್‌ಗೆ ಪರಿಚಯ ಮಾಡ್ಬೇಕು ಎಂದು ಬುಲೆಟ್ ಪ್ರಕಾಶ್ ಬಹಳ ಆಸೆ ಪಟ್ಟಿದ್ದರು. ಅದಕ್ಕಾಗಿ ಕನಸು ಕಂಡಿದ್ದರು. ಇಂತಹದ್ದೇ ಸಿನಿಮಾ ಮಾಡ್ಬೇಕು ಎಂದು ನಿರ್ಧರಿಸಿದ್ದರು. ಬಹುಶಃ ಅವರಿದಿದ್ದರೇ ಆ ಕನಸು ನನಸಾಗುತ್ತಿತ್ತು ಅನ್ಸುತ್ತೆ.

  ತಂದೆಯ ಆಸೆಯಂತೆ ಮಗ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ. ಶರಣ್ ನಟನೆಯ 'ಗುರು ಶಿಷ್ಯರು' ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಧಿಕೃತವಾಗಿ ಸಿನಿ ಪ್ರಪಂಚಕ್ಕೆ ಕಾಲಿಡುತ್ತಿದ್ದಾರೆ ಬುಲೆಟ್ ಪುತ್ರ ರಕ್ಷಕ್.

  ಹೀರೋ ಆಗಿಯೂ ಲಾಂಚ್ ಆಗಲು ಎಲ್ಲಾ ಸಿದ್ದತೆ ನಡೆಸುತ್ತಿದ್ದಾರೆ ರಕ್ಷಕ್. ಫೈಟ್, ಡ್ಯಾನ್ಸ್, ವರ್ಕೌಟ್ ಹೀಗೆ ಪರಿಪೂರ್ಣವಾಗಿ ಎಲ್ಲದರಲ್ಲಿಯೂ ತರಬೇತಿ ಪಡೆದು ನಾಯಕ ಆಗ್ಬೇಕು ಎಂದು ಹೊರಟಿದ್ದಾರೆ. ಇದೀಗ, 'ನ್ಯೂಸ್‌ ಫಸ್ಟ್' ವಾಹಿನಿ ಜೊತೆಗಿನ ಸಂದರ್ಶನದಲ್ಲಿ ಥ್ರಿಲ್ಲಿಂಗ್ ವಿಷಯವೊಂದನ್ನು ಬುಲೆಟ್ ಪುತ್ರ ಬಹಿರಂಗಪಡಿಸಿದ್ದಾರೆ.

  ಹಾಸ್ಯನಟ ಬುಲೆಟ್ ಪ್ರಕಾಶ್ ಮಗ ರಕ್ಷಕ್ ಇಂಡಸ್ಟ್ರಿಗೆ ಎಂಟ್ರಿಹಾಸ್ಯನಟ ಬುಲೆಟ್ ಪ್ರಕಾಶ್ ಮಗ ರಕ್ಷಕ್ ಇಂಡಸ್ಟ್ರಿಗೆ ಎಂಟ್ರಿ

  ಮಗನನ್ನು ಲಾಂಚ್ ಮಾಡುವ ಕನಸು ಕಂಡಿದ್ದ ಬುಲೆಟ್, ಜಾಕಿಚಾನ್ ನಟಿಸಿದ್ದ ಚಿತ್ರವೊಂದನ್ನು ಕನ್ನಡದಲ್ಲಿ ಮಾಡಲು ಮನಸ್ಸು ಮಾಡಿದ್ದರಂತೆ. ಈ ಚಿತ್ರದಲ್ಲಿ ಅರ್ಜುನ್ ಸರ್ಜಾ ಜೊತೆ ಮಗನನ್ನು ಲಾಂಚ್ ಮಾಡುವ ಆಸೆ ಹೊಂದಿದ್ದರಂತೆ. ಈ ವಿಷಯವನ್ನು ರಕ್ಷಕ್ ಹೇಳಿಕೊಂಡಿದ್ದಾರೆ.

  ''ಜಾಕಿ ಚಾನ್ ಚಿತ್ರದಲ್ಲಿ ಗುರು-ಶಿಷ್ಯನ ಕಥೆ ಇದೆ. ಜಾಕಿ ಚಾನ್‌ಗೆ ಒಬ್ಬರ ಗುರು ಇರ್ತಾರೆ. ಗುರು ಪಾತ್ರದಲ್ಲಿ ಅರ್ಜುನ್ ಸರ್ಜಾ, ಜಾಕಿಚಾನ್ ಪಾತ್ರದಲ್ಲಿ ನಾನು ನಟಿಸಬೇಕು ಎಂದು ನಿರ್ಧರಿಸಿದ್ವಿ. ಆ ಚಿತ್ರವನ್ನು ನಿರ್ಮಾಪಕರಿಗೂ ತೋರಿಸಲಾಗಿತ್ತು. ಅದಾದ ಮೇಲೆಯೇ ನಾನು ಫೈಟ್ ಕಲಿಯಲು ಆರಂಭಿಸಿದ್ದು. ಈಗ ಬುಲೆಟ್ ಇಲ್ಲ. ಮುಂದಿನ ದಿನದಲ್ಲಿ ಸಾಧ್ಯವಾದರೆ ಈ ಸಿನಿಮಾ ಮಾಡ್ತೀನಿ'' ಎಂದು ರಕ್ಷಕ್ ನ್ಯೂಸ್‌ ಫಸ್ಟ್‌ಗೆ ತಿಳಿಸಿದ್ದಾರೆ.

  ಏಪ್ರಿಲ್ 6, 2020 ರಂದು ಹಾಸ್ಯನಟ ಬುಲೆಟ್ ಪ್ರಕಾಶ್ ಅನಾರೋಗ್ಯದಿಂದ ನಿಧನರಾದರು. ಆಗ ಅವರ ವಯಸ್ಸು 44 ವರ್ಷ.

  Recommended Video

  Akshay Kumarಗೆ ನನ್ನ ಜೊತೆ ಫೈಟಿಂಗ್ ಮಾಡಿ ಎಂದು ಕರೆದ Undertaker | Oneindia Kannada

  1997ರಲ್ಲಿ 'ಎಕೆ 47' ಚಿತ್ರದಿಂದ ಆರಂಭವಾಗಿದ್ದ ಬುಲೆಟ್ ಪ್ರಕಾಶ್ ಜರ್ನಿ ಎರಡು ದಶಕಗಳ ಕಾಲ ಮುಂದುವರಿದಿತ್ತು. ನಟ ದರ್ಶನ್ ಅವರ ಬಹುತೇಕ ಎಲ್ಲ ಚಿತ್ರಗಳಲ್ಲಿಯೂ ಖಾಯಂ ಪಾತ್ರ ಇರುತ್ತಿತ್ತು. ಡಾನ್, ಯುವರಾಜ, ಧ್ರುವ, ಜಾಕಿ, ಓಂಕಾರ, ಆರ್ಯನ್, ಮಿಸ್ಟರ್ ಐರಾವತ, ಲವ್ ಯೂ ಆಲಿಯಾ, ಜಗ್ಗುದಾದ, ಸಾಹೇಬ, ಪೊಗರು, ಗಾಳಿಪಟ 2 ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದರು.

  English summary
  Late Actor Bullet Prakash had planned to make a movie with his son and action king Arjun Sarja.
  Saturday, June 19, 2021, 21:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X