»   » ಪ್ರೀತಿ ಮಾಯೆ ಹುಷಾರು, ಇದು ಲವ್ ಪಾಯಿಸನ್

ಪ್ರೀತಿ ಮಾಯೆ ಹುಷಾರು, ಇದು ಲವ್ ಪಾಯಿಸನ್

Posted By:
Subscribe to Filmibeat Kannada
BMTC bus conductor Nandana Prabhu to direct movie
ಪ್ರೀತಿಯ ಲೋಕ ಎಂಬ ಸಿನಿಮಾ ನಿರ್ದೇಶಿಸಿದ್ದ ಬಿಎಂಟಿಸಿ ಬಸ್ ಕಂಡಕ್ಟರ್ ನಂದನಪ್ರಭು ಮತ್ತೆ ಆ್ಯಕ್ಷನ್ - ಕಟ್ ಹೇಳಲು ಅಣಿಯಾಗಿದ್ದಾರೆ. ಅವರ ಮುಂದಿನ ಚಿತ್ರಕ್ಕೆ ಲವ್ ಪಾಯಿಸನ್ ಎಂದು ಹೆಸರಿಡಲಾಗಿದೆ.

ಕಳೆದ ಮೂರು ತಿಂಗಳಿನಿಂದ ಕಥೆ ಹೆಣೆದಿರುವ ನಂದನ್ ಸದ್ಯಕ್ಕೆ ಫೈನಲ್ ಕಾಪಿ ಸಿದ್ಧಪಡಿಸುತ್ತಿದ್ದಾರೆ. ನಾಯಕನಾಗಿ ಹಳ್ಳಿ ಹೈದ ರಾಜೇಶ್ ಇದ್ದರೆ ಮತ್ತೊಬ್ಬ ನಾಯಕನಾಗಿ ತಬ್ಬಲಿ'ಯ ಆಕಾಶ್‍ಜಿತ್ ಇದ್ದಾರೆ.

ನಾಯಕಿಯಾಗಿ ಶೃತಿರಾಜ್ ಹೆಜ್ಜೆ ಹಾಕಲಿದ್ದಾರೆ. ನೀನ್ಯಾರೆ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಬೆಡಗಿ ಈಕೆ. ಕನ್ನಡದವಳೇ ಆಗಿದ್ದರೂ ಇಷ್ಟು ದಿನ ಅವಕಾಶವಿಲ್ಲದೇ ಇದ್ದದ್ದು ವಿಪರ್ಯಾಸ.

ಮತ್ತೊಬ್ಬ ನಾಯಕಿಯಾಗಿ ಮುಂಬೈನ ಬೆಡಗಿಯೊಬ್ಬಳು ಇರಲಿದ್ದಾಳೆ. ಆಯ್ಕೆ ಈಗಷ್ಟೇ ನಡೆಯುತ್ತಿದೆ.

ಶೀರ್ಷಿಕೆ ನೋಡಿದ ಮೇಲೆ ಕಥೆಯ ಬಗ್ಗೆ ಇನ್ನೇನು ಹೇಳುವ ಅವಶ್ಯಕಥೆ ಇದ್ದಂತಿಲ್ಲ. ಪ್ರೀತಿಯ ಸುತ್ತಲೇ ಗಿರಕಿ ಹೊಡೆದು ನಂತರ ಪ್ರೀತಿಯಿಂದಾಗುವ ಅನಾಹುತದ ಬಗ್ಗೆ ಹೇಳಹೊರಟಿದ್ದಾರೆ ನಂದನ್. ಕೆ.ಸೋಮಶೇಖರ್ ಎಂಬುವವರು ಹಣ ಸುರಿಯುತ್ತಿದ್ದಾರೆ.

ಸ್ವತಃ ಕತೆಯನ್ನು ನಿರ್ದೇಶಕ ನಂದನಪ್ರಭು ಅವರೇ ಹೆಣೆದಿದ್ದಾರೆ. ತಮ್ಮ ಕಂಡಕ್ಟರ್ ವೃತ್ತಿ ಜೀವನದ ಅನುಭವಗಳನ್ನೇ ಕತೆಯಾಗಿಸಿದ್ದಾರೆ. ಡ್ರೈವರ್ ಹಾಗೂ ಕಂಡಕ್ಟರ್ ಆಗಿ ಕಂಡ ಸತ್ಯಗಳು ಶೇ.60ರಷ್ಟು ಚಿತ್ರದಲ್ಲಿರುತ್ತವೆ.

English summary
BMTC bus conductor Nandana Prabhu to direct movie. Love Poison is the name of the movie and Halli Haida Rajesh in the lead role.
Please Wait while comments are loading...