For Quick Alerts
  ALLOW NOTIFICATIONS  
  For Daily Alerts

  ನಟಿ ಸಂಜನಾ ಜೊತೆ ಹಣಕಾಸು ವ್ಯವಹಾರ: ರಾಜಕಾರಣಿ ಪುತ್ರನ ವಿಚಾರಣೆ

  |

  ಸ್ಯಾಂಡಲ್‌ವುಡ್‌ ಗೆ ಡ್ರಗ್ಸ್ ನಂಟು ಪ್ರಕರಣದ ತನಿಖೆ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಲೇ ಇದೆ. ಆರಂಭದಲ್ಲಿ ಸಿನಿಮಾ ಉದ್ಯಮಕ್ಕೆ ಸಂಬಂಧಿಸಿದವರನ್ನು ಮಾತ್ರವೇ ವಿಚಾರಣೆ ಮಾಡಲಾಗಿತ್ತು, ಈಗ ಉದ್ಯಮಿಗಳು, ರಾಜಕಾರಣಿಗಳನ್ನೂ ವಿಚಾರಣೆ ಮಾಡಲಾಗುತ್ತಿದೆ.

  ಡ್ರಗ್ಸ್ ಪ್ರಕರಣದ ಆರೋಪಿಗಳೊಂದಿಗೆ ನಂಟು ಹೊಂದಿರುವ ರಾಜಕಾರಣಿ ಪುತ್ರ, ಉದ್ಯಮಿಯೊಬ್ಬರನ್ನು ಸಿಸಿಬಿ ಪೊಲೀಸರು ಇಂದು ವಿಚಾರಣೆಗೆ ಒಳಪಡಿಸಿದ್ದಾರೆ.

  ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಎಂಎಲ್‌ಸಿ ಯು.ಬಿ.ವೆಂಕಟೇಶ್ ಪುತ್ರ, ಉದ್ಯಮಿ ಗಣೇಶ್ ರಾವ್ ಅವರನ್ನು ಇಂದು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇದೇ ದಿನ ನಿರ್ಮಾಪಕ ಸೌಂದರ್ಯ ಜಗದೀಶ್ ದಂಪತಿಯನ್ನು ಸಹ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

  ರಾಯಲ್ ಮೀನಾಕ್ಷಿ ಮಾಲ್ ಮಾಲೀಕ

  ರಾಯಲ್ ಮೀನಾಕ್ಷಿ ಮಾಲ್ ಮಾಲೀಕ

  ಗಣೇಶ್ ರಾವ್ ಅವರು ನಗರದಲ್ಲಿನ ಪ್ರಸಿದ್ಧ ಮಾಲ್ ರಾಯಲ್ ಮೀನಾಕ್ಷಿ ಮಾಲ್‌ನ ಮಾಲೀಕರಾಗಿದ್ದು, ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ಸಂಜನಾ ಅವರೊಂದಿಗೆ ಹಣಕಾಸು ಸಂಬಂಧ ಹೊಂದಿದ್ದರು ಎನ್ನಲಾಗುತ್ತಿದೆ.

  ಲಕ್ಷಾಂತರ ಹಣ ಗಣೇಶ್ ಖಾತೆಗೆ ವರ್ಗ

  ಲಕ್ಷಾಂತರ ಹಣ ಗಣೇಶ್ ಖಾತೆಗೆ ವರ್ಗ

  ನಟಿ ಸಂಜನಾ ಖಾತೆಯಿಂದ ಲಕ್ಷಾಂತರ ಹಣ ಗಣೇಶ್ ಅವರ ಖಾತೆಗೆ ವರ್ಗಾವಣೆ ಆಗಿದೆ ಎನ್ನಲಾಗುತ್ತಿದ್ದು, ಇದೇ ಕಾರಣಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ನಿನ್ನೆಯೇ ಗಣೇಶ್ ಅವರಿಗೆ ಸಮನ್ಸ್ ನೀಡಿದ್ದರು, ಅಂತೆಯೇ ಇಂದು ಗಣೇಶ್ ಅವರು ವಿಚಾರಣೆ ಎದುರಿಸಿದ್ದಾರೆ.

  ಸಂಜನಾ-ಗಣೇಶ್ ನಡುವೆ ಹಣಕಾಸು ವ್ಯವಹಾರದ ಬಗ್ಗೆ ಪ್ರಶ್ನೆ

  ಸಂಜನಾ-ಗಣೇಶ್ ನಡುವೆ ಹಣಕಾಸು ವ್ಯವಹಾರದ ಬಗ್ಗೆ ಪ್ರಶ್ನೆ

  ವಿಚಾರಣೆ ವೇಳೆ, ಸಂಜನಾ ಹಾಗೂ ಗಣೇಶ್ ನಡುವಿನ ಹಣಕಾಸು ವ್ಯವಹಾರದ ಬಗ್ಗೆ ಸಿಸಿಬಿ ಪ್ರಶ್ನೆ ಮಾಡಿದೆ. ಹಣಕಾಸು ವ್ಯವಹಾರ ಯಾವ ಕಾರಣಕ್ಕೆ ಇತ್ತು, ಹಣಕಾಸು ವ್ಯವಹಾರಕ್ಕೆ ದಾಖಲೆಗಳನ್ನು ಸಹ ಸಿಸಿಬಿ ಗಣೇಶ್ ಅವರನ್ನು ಕೇಳಿದೆ ಎನ್ನಲಾಗುತ್ತಿದೆ.

  Dhruva Sarja First Reaction For Chiru Baby | ಅಣ್ಣನ ಮಗು ನೋಡಿ ಧ್ರುವನಿಗೆ ಮೊದಲು ಅನ್ನಿಸಿದ್ದೇನು ಗೊತ್ತಾ
  ಸಂದರ್ಯ ಜಗದೀಶ್ ದಂಪತಿ ವಿಚಾರಣೆ

  ಸಂದರ್ಯ ಜಗದೀಶ್ ದಂಪತಿ ವಿಚಾರಣೆ

  ಇದೇ ದಿನ ನಿರ್ಮಾಪಕ ಸೌಂದರ್ಯ ಜಗದೀಶ್ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದರು. ಸಂಜನಾ ನಟನೆಯ ರಾಮ್ ಲೀಲಾ ಸಿನಿಮಾವನ್ನು ಸೌಂದರ್ಯ ಜಗದೀಶ್ ನಿರ್ಮಿಸಿದ್ದರು. ಸಿನಿಮಾ ಹಾಗೂ ಸಂಜನಾ ಗೆ ನೀಡಿದ ಸಂಭಾವನೆ ವಿಷಯವಾಗಿ ಮಾತ್ರವೇ ಸಿಸಿಬಿ ಪೊಲೀಸರು ಪ್ರಶ್ನೆ ಮಾಡಿದ್ದಾರೆ ಎಂದು ಸೌಂದರ್ಯ ಜಗದೀಶ್ ದಂಪತಿ ಮಾಧ್ಯಮಗಳಿಗೆ ಹೇಳಿದ್ದಾರೆ.

  English summary
  Businessman Ganesh Rao inquired by CCB police in drug case. Said to be accused Sanjana Galrani transfers lakhs of money to Ganesh Rao's account.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X