ಸಖತ್ ಹಾಟ್ ಅಂಡ್ ಕ್ಯೂಟ್ ಆಗಿದೆ 'ಬಟರ್ ಫ್ಲೈ' ಟೀಸರ್

ಹಿಂದಿಯ ಸೂಪರ್ ಹಿಟ್ 'ಕ್ವೀನ್' ಚಿತ್ರದ ಕನ್ನಡ ರೀಮೇಕ್ 'ಬಟರ್ ಫ್ಲೈ' ಟೀಸರ್ ಬಿಡುಗಡೆಯಾಗಿದೆ. ಮೂಲ ಸಿನಿಮಾದಲ್ಲಿ ಕಂಗನಾ ಸಖತ್ ಬೋಲ್ಡ್ ಆಗಿ ಅಭಿನಯಿಸಿದ್ದರು. ಕನ್ನಡದಲ್ಲೂ ಅದೇ ಫಾರ್ಮುಲಾದಲ್ಲಿ ಸಿನಿಮಾ ಬರುತ್ತಾ ಎಂಬ ಕುತೂಹಲಕ್ಕೆ ಪಾರೂಲ್ ಬ್ರೇಕ್ ಹಾಕಿದ್ದಾರೆ.

ಹೌದು, ಕಂಗನಾ ಅವರಂತೆ ನಟಿ ಪಾರೂಲ್ ಕೂಡ ಬೋಲ್ಡ್ ಆಗಿ ನಟಿಸಿದ್ದಾರೆ. ಗೋಕರ್ಣದ ಮೂಲದ ಪಾರ್ವತಿ ಪಾತ್ರದಲ್ಲಿ ಪಾರೂಲ್ ಅಭಿನಯಿಸಿದ್ದು, ಭಾರತೀಯ ಸಂಪ್ರದಾಯವನ್ನ ಜಗತ್ತಿಗೆ ಸಾರುತ್ತಿದ್ದಾರೆ.

Butterfly teaser released today

ಸದ್ಯ, ಬಿಡುಗಡೆಯಾಗಿರುವ ಟೀಸರ್ ಸಖತ್ ಹಾಟ್ ಅಂಡ್ ಕ್ಯೂಟ್ ಆಗಿದೆ. ಈ ಟೀಸರ್ ನೋಡಿ ಈಗ 'ಬಟರ್ ಫ್ಲೈ' ಮೇಲೆ ಮತ್ತಷ್ಟು ಭರವಸೆ ಮೂಡಿದೆ. ರಮೇಶ್ ಅರವಿಂದ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಕನ್ನಡದ ಜೊತೆಯಲ್ಲಿ ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ಬರ್ತಿದೆ. ಕನ್ನಡ ಹಾಗೂ ತಮಿಳಿನಲ್ಲಿ ರಮೇಶ್ ಅರವಿಂದ್ ಆಕ್ಷನ್ ಕಟ್ ಹೇಳಿದ್ದಾರೆ.

ಅಂದ್ಹಾಗೆ, ಅಮಿತ್ ತ್ರಿವೇದಿ ಸಂಗೀತ ನೀಡಿದ್ದು, ಸತ್ಯ ಹೆಗ್ಡೆ ಅವರ ಕ್ಯಾಮೆರಾ ವರ್ಕ್ ಇದೆ. ಸದ್ಯ, ರಿಲೀಸ್ ದಿನಾಂಕ ಘೋಷಿಸಿಲ್ಲ. ಹೀಗಾಗಿ, ಮುಂದಿನ ವರ್ಷದ ನಿರೀಕ್ಷೆಯ ಚಿತ್ರಗಳ ಪೈಕಿ 'ಬಟರ್ ಫ್ಲೈ' ಕೂಡ ಒಂದು.

More from Filmibeat

English summary
Parul yadav starrer and ramesh aravind directional most anticipated movie Butterfly teaser has released today (december 21st)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X