Don't Miss!
- News
Indira Canteens: ಇಂದಿರಾ ಕ್ಯಾಂಟೀನ್ಗಳಲ್ಲಿ ಕುಡಿಯಲು ನೀರಿಲ್ಲ, ಬಿಲ್ ಕಟ್ಟಿಲ್ಲ ಎಂದು ಸಂಪರ್ಕ ಕಡಿತ
- Automobiles
ಭಾರತದಲ್ಲಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಯಾವಾಗ? ಅತಿ ಹೆಚ್ಚು ರೇಂಜ್ ಕೊಡಲಿದೆಯಂತೆ..!
- Technology
ಭಾರತದಲ್ಲಿ ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್ಟಾಪ್ ಲಾಂಚ್; ಏನೆಲ್ಲಾ ಫೀಚರ್ಸ್ ಇವೆ ಗೊತ್ತಾ!?
- Sports
Ranji Trophy: ಕರ್ನಾಟಕ ಮಾರಕ ದಾಳಿಗೆ ತತ್ತರಿಸಿದ ಉತ್ತರಾಖಂಡ: 116 ರನ್ಗಳಿಗೆ ಆಲೌಟ್
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಇನ್ನು ಮೂರು ದಿನದಲ್ಲಿ ಹಾರಲಿದೆ 'ಬಟರ್ ಫ್ಲೈ' ಟೀಸರ್
ದಕ್ಷಿಣ ಭಾರತದ ಬಹುನಿರೀಕ್ಷೆಯ ಸಿನಿಮಾ 'ಬಟರ್ ಫ್ಲೈ' ಟೀಸರ್ ಬಿಡುಗಡೆಗೆ ದಿನಗಣನೆ ಶುರುವಾಗಿದ್ದು, ಇನ್ನು ಮೂರು ದಿನಗಳು ಮಾತ್ರ ಬಾಕಿ ಇದೆ.
ಹೌದು, ಡಿಸೆಂಬರ್ 21ನೇ ತಾರೀಖು 'ಬಟರ್ ಫ್ಲೈ' ಚಿತ್ರದ ಟೀಸರ್ ರಿಲೀಸ್ ಆಗ್ತಿದೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಈ ಸಿನಿಮಾ ತಯಾರಾಗುತ್ತಿದ್ದು, ಎಲ್ಲ ಭಾಷೆಯಲ್ಲೂ ಒಂದೇ ದಿನ ಟೀಸರ್ ಬರ್ತಿದೆ.
ಅಂದ್ಹಾಗೆ, ಬಾಲಿವುಡ್ ಸೂಪರ್ ಹಿಟ್ ಸಿನಿಮಾ 'ಕ್ವೀನ್' ಚಿತ್ರದ ರೀಮೇಕ್ ಇದಾಗಿದ್ದು, ಹಿಂದಿನಲ್ಲಿ ಕಂಗನಾ ರಣಾವತ್ ಮಾಡಿದ್ದ ಪಾತ್ರವನ್ನ ಕನ್ನಡದಲ್ಲಿ ಪಾರೂಲ್ ಯಾದವ್ ನಿರ್ವಹಿಸಿದ್ದಾರೆ. ಇನ್ನುಳಿದಂತೆ ತಮಿಳಿನಲ್ಲಿ ಕಾಜಲ್, ತೆಲುಗಿನಲ್ಲಿ ತಮನ್ನಾ, ಮಲಯಾಳಂನಲ್ಲಿ ಮಂಜಿಮ ಮೋಹನ್ ಅಭಿನಯಿಸುತ್ತಿದ್ದಾರೆ.
ಕನ್ನಡದ 'ಬಟರ್ ಫ್ಲೈ' ಹಾಗೂ ತಮಿಳಿನ 'ಪ್ಯಾರೀಸ್ ಪ್ಯಾರೀಸ್' ಚಿತ್ರಕ್ಕೆ ರಮೇಶ್ ಅರವಿಂದ್ ಆಕ್ಷನ್ ಕಟ್ ಹೇಳಿದ್ದಾರೆ. ಅಮಿತ್ ತ್ರಿವೇದಿ ಸಂಗೀತ ನೀಡಿದ್ದು, ಸತ್ಯ ಹೆಗಡೆ ಅವರ ಛಾಯಗ್ರಹಣವಿದೆ. ಜಯಂತ್ ಕಾಯ್ಕಿಣಿ ಮತ್ತು ಯೋಗರಾಜ್ ಭಟ್ ಅವರ ಸಾಹಿತ್ಯ ಈ ಚಿತ್ರಕ್ಕಿದೆ.