For Quick Alerts
  ALLOW NOTIFICATIONS  
  For Daily Alerts

  'ಕಾವೇರಿ ವಿವಾದ': ಶಿವಣ್ಣನ ಸಾರಥ್ಯದಲ್ಲಿ ಮೋದಿ ಭೇಟಿಗೆ ಚಿತ್ರರಂಗ?

  By Suneetha
  |

  ಕಾವೇರಿ ಜಲ ವಿವಾದದ ಕುರಿತು ಇಡೀ ಕರ್ನಾಟಕದಾದ್ಯಂತ ಸಾಮಾನ್ಯ ಜನರು ಹಾಗೂ ರೈತರು ಹೋರಾಟ-ಪ್ರತಿಭಟನೆ ಮಾಡಿದ್ದಾರೆ. ಎಲ್ಲಾ ಕನ್ನಡಿಗರ ಆಕ್ರೋಶ ಭುಗಿಲೆದ್ದಿದೆ. ಒಟ್ಟಾರೆ ಕಾವೇರಿ ಗಲಭೆಯಿಂದ ಸಾಕಷ್ಟು ನಷ್ಟದ ಜೊತೆಗೆ ಸಾವು-ನೋವು ಸಂಭವಿಸಿದೆ.

  ಇದೀಗ 'ಕಾವೇರಿ ವಿವಾದ' ಕುರಿತು ವಿವರವಾಗಿ ಚರ್ಚಿಸಲು ಇಡೀ ಕನ್ನಡ ಚಿತ್ರರಂಗದ ಕಲಾವಿದರೆಲ್ಲರೂ ಒಟ್ಟು ಸೇರಿ, ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ದೆಹಲಿಗೆ ಪ್ರಯಾಣಿಸಲು ನಿರ್ಧರಿಸಿದ್ದಾರೆ.['ಕಾವೇರಿ ಹಿಂಸಾಚಾರ'ದಲ್ಲಿ ಬಲಿಯಾದವರಿಗೆ ಅಣ್ಣಾವ್ರ ಮಕ್ಕಳ ಸಹಾಯ ಹಸ್ತ]

  ಪ್ರಧಾನಿ ಮೋದಿ ಅವರ ಜೊತೆ ಚರ್ಚೆ ನಡೆಸಲು ದೆಹಲಿಗೆ ಪ್ರಯಾಣಿಸುವ ವಿಚಾರವನ್ನು ಖುದ್ದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಿಳಿಸಿದ್ದಾರೆ. ಮುಂದೆ ಓದಿ...

  ಶಾಂತಿಯುತ ಹೋರಾಟ

  ಶಾಂತಿಯುತ ಹೋರಾಟ

  ಬೆಂಗಳೂರಿನ ಕಾವೇರಿ ಗಲಭೆ ಕುರಿತು ಮಾತನಾಡಿದ ಅವರು "ನಾವು ಶಾಂತಿಪ್ರಿಯರು, ಹಾಗಾಗಿ ಹೋರಾಟವನ್ನು ಶಾಂತಿಯುತವಾಗಿ ಮಾಡೋಣ. ಕಲಾವಿದರೆಲ್ಲ ಸೇರಿ ಒಟ್ಟಾಗಿ ದೆಹಲಿಗೆ ಹೋಗಿ ಪ್ರಧಾನಿ ಭೇಟಿ ಮಾಡಲು ನಿರ್ಧರಿಸಿದ್ದೇವೆ" ಎಂದರು.[ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ: ಉಪೇಂದ್ರ ಕೊಟ್ಟ ಸೂಪರ್ ಸುಪ್ರೀಂ ಐಡಿಯಾ!]

  ವಾಣಿಜ್ಯ ಮಂಡಳಿಯಲ್ಲಿ ಸಭೆ

  ವಾಣಿಜ್ಯ ಮಂಡಳಿಯಲ್ಲಿ ಸಭೆ

  "ದೆಹಲಿ ಭೇಟಿ ಕುರಿತಾಗಿ ಇಂದು (ಸೆಪ್ಟೆಂಬರ್ 14, ಬುಧವಾರ) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಸಿ, ಆದಷ್ಟು ಬೇಗ ದೆಹಲಿಗೆ ಹೋಗಿ ಮೋದಿ ಅವರನ್ನು ಭೇಟಿ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದಿದ್ದಾರೆ.

  ಕೆ.ಆರ್.ಎಸ್ ಭೇಟಿ

  ಕೆ.ಆರ್.ಎಸ್ ಭೇಟಿ

  ಇನ್ನು ಇಡೀ ಚಿತ್ರರಂಗದವರು ಕೆ.ಆರ್.ಎಸ್ ಅಣೆಕಟ್ಟು ಪ್ರದೇಶಕ್ಕೆ ಕೂಡ ಭೇಟಿ ನೀಡುವ ಯೋಜನೆ ಹಾಕಿಕೊಂಡಿದ್ದಾರೆ. ಈ ಕುರಿತಂತೆ ಕೂಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಇಂದು ಮಹತ್ವದ ಸಭೆ ನಡೆಯಲಿದೆ.

  ನ್ಯಾಯ ಕೊಡಿ ಸ್ವಾಮಿ

  ನ್ಯಾಯ ಕೊಡಿ ಸ್ವಾಮಿ

  'ನಮಗಾಗಿರುವ ಅನ್ಯಾಯವನ್ನು ಸರಿಪಡಿಸೋಣ, ಎಲ್ಲರೂ ಶಾಂತ ರೀತಿಯಲ್ಲಿ ಪ್ರತಿಭಟಿಸುವ ಮೂಲಕ, ನ್ಯಾಯ ದೊರಕಿಸಿ ಕೊಡುವಂತೆ ಕೇಳಿಕೊಳ್ಳೋಣ' ಅಂತ ಶಿವಣ್ಣ ಮನವಿ ಮಾಡಿದ್ದಾರೆ.

  English summary
  Cauvery Water Dispute: Kannada Film Industry stars decided to meet PM Narendra Modi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X