»   » 'ಅಮ್ಮ' ಜಯಲಲಿತಾ ವಿರುದ್ಧ ಜಗ್ಗೇಶ್ ಉಗುಳಿದ ಬೆಂಕಿ ಉಂಡೆಗಳು...

'ಅಮ್ಮ' ಜಯಲಲಿತಾ ವಿರುದ್ಧ ಜಗ್ಗೇಶ್ ಉಗುಳಿದ ಬೆಂಕಿ ಉಂಡೆಗಳು...

Posted By:
Subscribe to Filmibeat Kannada

''ನಾಚಿಕೆ ಆಗ್ಬೇಕು...ನೀವು ಹುಟ್ಟಿದ್ದು ಕರ್ನಾಟಕದಲ್ಲಿ...ಮಂಡ್ಯ ಭಾಗದಲ್ಲಿ. ತಟ್ಟೆ ಹಿಡ್ಕೊಂಡು ಮದ್ರಾಸ್ ಗೆ ಹೋದ ಹೆಣ್ಣುಮಗಳೇ...ಭಿಕ್ಷೆ ಎತ್ತಿ ತಮಿಳುನಾಡು ಮುಖ್ಯಮಂತ್ರಿ ಆಗಿದ್ಯಲ್ಲಾ, ಕರ್ನಾಟಕಕ್ಕೆ ನೀನು ಯಾವಾಗ್ಲೇ ಬಂದರೂ, ಕರ್ನಾಟಕದ ಜನ ನಿನಗೆ ಹೂವಿನ ಹಾರ ಹಾಕುವುದಿಲ್ಲ. ಬದಲಾಗಿ ಎಡಗೈನಲ್ಲಿ ಕೆರಗಳನ್ನ ಇಟ್ಕೊಂಡು ಬರಮಾಡಿಕೊಳ್ಳುತ್ತಾರೆ'' - ಹೀಗಂತ ತಮಿಳುನಾಡಿನ 'ಅಮ್ಮ' ಜಯಲಲಿತಾ ವಿರುದ್ಧ ಬೆಂಕಿ ಉಂಡೆಗಳನ್ನ ಉಗುಳಿದವರು ನವರಸ ನಾಯಕ, ರಾಜಕಾರಣಿ ಜಗ್ಗೇಶ್.

ಕಾವೇರಿ ನೀರಿಗಾಗಿ ಹೋರಾಡುತ್ತಿರುವ ರೈತರಿಗೆ ಬೆಂಬಲ ನೀಡಿ ಇಂದು ಕನ್ನಡ ಚಿತ್ರೋದ್ಯಮ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ (ಶಿವಾನಂದ ಸರ್ಕಲ್) ಬೃಹತ್ ಪ್ರತಿಭಟನೆ ನಡೆಸಿತು.

ಆ ವೇಳೆ ಜಗ್ಗೇಶ್, ಜಯಲಲಿತಾ ವಿರುದ್ಧ ಮಾತನಾಡಿದ್ದು ಹೀಗೆ....ಓವರ್ ಟು ಜಗ್ಗೇಶ್....

ಇತಿಹಾಸ ಹೇಳಿದ ಜಗ್ಗೇಶ್

''ಸ್ವಾತಂತ್ರ್ಯ ಪೂರ್ವದಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ನ ಬಿಟ್ರೀಷರು ಆಳುತ್ತಿದ್ದರು. ನಮ್ಮ ಮೈಸೂರು ಸಂಸ್ಥಾನದ ಒಡೆಯರ್ ಬಹಳ ದೂರಗಾಮಿ ಚಿಂತನೆ ಮಾಡಿ, ನೀರನ್ನ ಹಿಡಿದಿಟ್ಟುಕೊಳ್ಳಬೇಕು ಅಂತ ಡ್ಯಾಮ್ ಕಟ್ಟುವ ಯೋಜನೆಗೆ ವಿಶ್ವೇಶ್ವರಯ್ಯನವರ ಜೊತೆ ಚಾಲನೆ ನೀಡಿದ್ರು. ರೈತಾಪಿ ಮಕ್ಕಳಿಗೆ ನೀರಿನ ಸಮಸ್ಯೆ ಬರಬಾರದು ಅಂತ ಅಂದೇ ಅವರು ಈ ಕೆಲಸ ಮಾಡಿದ್ದರು'' - ಜಗ್ಗೇಶ್ [ಶಾಶ್ವತ ನೀರಾವರಿಗಾಗಿ ಹೋರಾಟ: ಕೋಲಾರದಲ್ಲಿ ತಾರೆಯರು ಹೇಳಿದ್ದೇನು.?]

ಅವರಿಗೆ ಯೋಗ್ಯತೆ ಇಲ್ಲ!

''ನಮ್ಮ ರಾಜ್ಯದಲ್ಲಿ ಹುಟ್ಟಿದ ನದಿ, ಪಕ್ಕದ ತಮಿಳುನಾಡು, ಪಾಂಡಿಚೆರಿ, ಆಂಧ್ರಗೆ ನೀಡುವಂತಾಗಿದೆ. ಆದರೆ, ಇಂತಹ ಯೋಜನೆ ಮಾಡೋ ಯೋಗ್ಯತೆ ಇಲ್ಲದ ಮೊಂಡ ಜನ ರೈತಾಪಿ ಮನಸ್ಸುಗಳಿಗೆ ನೋವು ಮಾಡ್ತಿದ್ದಾರೆ'' - ಜಗ್ಗೇಶ್ [ಕಳಸಾ-ಬಂಡೂರಿಗೆ ಸ್ಯಾಂಡಲ್ ವುಡ್ ಕಿಚ್ಚು ; ಯಾರು ಏನು ಹೇಳಿದರು?]

ಯೋಗ್ಯತೆ ಇದ್ದರೆ....

''ಮೆಟ್ಟೂರು ಡ್ಯಾಮ್ ನಿಂದ ಎಷ್ಟೋ ನೀರು ಸಮುದ್ರದ ಪಾಲಾಗುತ್ತಿದೆ. ನಿಮಗೆ ಯೋಗ್ಯತೆ ಇದ್ದರೆ, ತಮಿಳುನಾಡು ಸರ್ಕಾರ ಒಂದು ಅಣೆಕಟ್ಟು ಕಟ್ಟಿಕೊಳ್ಳಿ ಅಲ್ಲಿ'' - ಜಗ್ಗೇಶ್ [ಜಯಲಲಿತಾ ಹೆದರಿಸುವ ಗಂಡಸು ಕರ್ನಾಟಕದಲ್ಲಿ ಹುಟ್ಟಿಲ್ವಾ?]

ಜಾಗ ಕೊಡಿ

''ನಿಮಗೆ ಅಖಂಡ ಭಾರತದ ಸಂವಿಧಾನದ ಬಗ್ಗೆ ಗೌರವ ಇದ್ದರೆ, ಹೊಗೆನಕಲ್ ನಲ್ಲಿ ಅಣೆಕಟ್ಟು ಕಟ್ಟಲು ನಮಗೂ ಜಾಗ ಬಿಟ್ಟು ಕೊಡಿ'' - ಜಗ್ಗೇಶ್ [ಬಂಗಾರಪ್ಪನಂತೆ ಸಿದ್ಧರಾಮಯ್ಯ ನಿರ್ಧರಿಸಿದ್ರೆ 'ಗಂಡಸು' ಆಗ್ತಿದ್ರು ಎಂದ ಶಿವಣ್ಣ]

ಭಿಕ್ಷೆ ಎತ್ತಿ....

''ನಾಚಿಕೆ ಆಗ್ಬೇಕು ಅವರಿಗೆ. ನೀವು ಹುಟ್ಟಿದ್ದು ಕರ್ನಾಟಕದಲ್ಲಿ. ಮಂಡ್ಯ ಭಾಗದಲ್ಲಿ. ತಟ್ಟೆ ಹಿಡ್ಕೊಂಡು ಮದ್ರಾಸ್ ಗೆ ಹೋದ ಹೆಣ್ಣುಮಗಳೇ, ಭಿಕ್ಷೆ ಎತ್ತಿ ತಮಿಳುನಾಡು ಮುಖ್ಯಮಂತ್ರಿ ಆಗಿದ್ಯಲ್ಲಾ. ಕರ್ನಾಟಕಕ್ಕೆ ನೀನು ಯಾವಾಗ್ಲೇ ಬಂದರೂ, ಕರ್ನಾಟಕದ ಜನ ನಿನಗೆ ಹೂವಿನ ಹಾರ ಹಾಕುವುದಿಲ್ಲ. ಬದಲಾಗಿ ಎಡಗೈನಲ್ಲಿ ಕೆರಗಳನ್ನ ಇಟ್ಕೊಂಡು ಬರಮಾಡಿಕೊಳ್ಳುತ್ತಾರೆ. ನಾಚಿಕೆ ಆಗ್ಬೇಕು ನಿಮಗೆ'' - ಜಗ್ಗೇಶ್

English summary
Kannada Actor, Politician Jaggesh lambasted Tamil Nadu 'Amma' Jayalalitha during the protest organized at Shivananda Circle, Bengaluru by KFCC to support Karnataka Farmers in Cauvery water Sharing Dispute.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada