For Quick Alerts
  ALLOW NOTIFICATIONS  
  For Daily Alerts

  ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ: ಉಪೇಂದ್ರ ಕೊಟ್ಟ ಸೂಪರ್ ಸುಪ್ರೀಂ ಐಡಿಯಾ!

  By Harshitha
  |

  ರಿಯಲ್ ಸಮಸ್ಯೆಗಳನ್ನೇ ಆಧಾರವಾಗಿ ಇಟ್ಟುಕೊಂಡು ತೆರೆಮೇಲೆ ಅದಕ್ಕೆ ರಿಯಲಿಸ್ಟಿಕ್ ಪರಿಹಾರ ನೀಡುವುದರಲ್ಲಿ ಉಪೇಂದ್ರ ನಿಸ್ಸೀಮ. ಅದಕ್ಕೆ 'H2O' ಮತ್ತು 'ಸೂಪರ್' ಸಿನಿಮಾಗಳಿಂತ ಉತ್ತಮ ನಿದರ್ಶನ ಬೇಕಿಲ್ಲ. Infact, ಇದೇ ಕಾರಣಕ್ಕೆ ಉಪೇಂದ್ರ ರವರಿಗೆ 'ರಿಯಲ್ ಸ್ಟಾರ್' ಅಂತ ಬಿರುದು ಸಿಕ್ಕಿರುವುದು.!

  ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕದಲ್ಲಿ ಹೋರಾಟ ನಡೆದಿದೆ, ನಡೆಯುತ್ತಲೇ ಇದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಪ್ರತಿಭಟನೆ ನಿರಂತರ. ಆದ್ರೆ, ಇದಕ್ಕೆ ಪರಿಹಾರ ಏನು? ಹಾಗ್ನೋಡಿದ್ರೆ, ದಶಕದ ಹಿಂದೆಯೇ ಕಾವೇರಿ ವಿವಾದಕ್ಕೆ ಇದೇ ಉಪೇಂದ್ರ ತಮ್ಮ 'H2O' ಚಿತ್ರದ ಮೂಲಕ ಪರಿಹಾರ ಸೂಚಿಸಿದ್ರು.

  ಆದರೂ ಏನ್ ಬಂತು ಪ್ರಯೋಜನ? ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಹಾಗೂ ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ನಡೆದ ಹಲ್ಲೆ ಪರಿಣಾಮ ಬೆಂಗಳೂರಿನಲ್ಲಿ ಮೊನ್ನೆ (ಸೆಪ್ಟೆಂಬರ್ 12) ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿತ್ತು. ಈ ಬಗ್ಗೆ ಆತಂಕ ವ್ಯಕ್ತಪಡಿಸಿದ ಉಪೇಂದ್ರ, ನಿನ್ನೆ (ಸೆಪ್ಟೆಂಬರ್ 13) ಕನ್ನಡ ಮಾಧ್ಯಮಗಳ ಜೊತೆ ಮಾತನಾಡುವಾಗ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಬಗ್ಗೆ ತಮ್ಮದೇ ವಾದ ಮಂಡಿಸಿದರು.

  ಉಪೇಂದ್ರ ಕೊಟ್ಟಿರುವ ಸೂಪರ್ ಸುಪ್ರೀಂ ಐಡಿಯಾಗೆ ಕನ್ನಡ ಮಾಧ್ಯಮಗಳು ಸಹಕಾರ ನೀಡಿದರೆ, ಕರ್ನಾಟಕ ಸರ್ಕಾರ ಗಂಭೀರವಾಗಿ ಪರಿಗಣಿಸಿದರೆ, ನೀರಿಗಾಗಿ ರೈತರು ಬೀದಿಗೆ ಇಳಿಯುವ ಪರಿಸ್ಥಿತಿ ಬರುವುದೇ ಇಲ್ಲ. ಅಷ್ಟಕ್ಕೂ ಉಪೇಂದ್ರ ರವರ ಪ್ಲಾನ್ ಏನು ಅಂತ ಅವರ ಮಾತುಗಳಲ್ಲೇ ಓದಿರಿ, ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ......

  ವಿವಾದ ದೊಡ್ಡದು ಮಾಡ್ತಿರೋದು ರಾಜಕಾರಣಿಗಳು!

  ವಿವಾದ ದೊಡ್ಡದು ಮಾಡ್ತಿರೋದು ರಾಜಕಾರಣಿಗಳು!

  ''ಕಾವೇರಿ ವಿವಾದವನ್ನ 'ಸೋ ಕಾಲ್ಡ್' ಲೀಡರ್ಸ್ Complicate ಮಾಡ್ತಿದ್ದಾರೆ ಅನ್ಸುತ್ತೆ. ಕಾವೇರಿ ಸಮಸ್ಯೆ ಹಲವಾರು ವರ್ಷಗಳಿಂದಲೂ ಇದೆ. ನಾನೇ ಒಂದು ಚಿತ್ರ ಕೂಡ ಮಾಡಿದ್ದೀನಿ. ಪ್ರಾಬ್ಲಂ ಇದೆ ನಿಜ. ನಾವು ಕೊರಗುತ್ತಿದ್ದೇವೆ ಅನ್ನೋದು ಕೂಡ ನಿಜ. ಕೋರ್ಟ್, ಕೇಸ್ ಆಗಿದೆ ಸತ್ಯ. ಆದ್ರೆ, ಯಾವ ಲೀಡರ್ ಗಳೂ ಸಹ ಸಮಸ್ಯೆಗೆ ಪರಿಹಾರ ಹುಡುಕುತ್ತಿಲ್ಲ'' - ಉಪೇಂದ್ರ ['ಅಮ್ಮ' ಜಯಲಲಿತಾ ವಿರುದ್ಧ ಜಗ್ಗೇಶ್ ಉಗುಳಿದ ಬೆಂಕಿ ಉಂಡೆಗಳು...]

  ಸಮುದ್ರದ ನೀರನ್ನ ಬಳಕೆ ಮಾಡುವ ಬಗ್ಗೆ....

  ಸಮುದ್ರದ ನೀರನ್ನ ಬಳಕೆ ಮಾಡುವ ಬಗ್ಗೆ....

  ''ಸುಬ್ರಮಣಿಯನ್ ಸ್ವಾಮಿ ಯವರು ಸಮುದ್ರದ ನೀರನ್ನ Desalination (ಉಪ್ಪಿನಂಶ ತೆಗೆಯುವ ಪ್ರಕ್ರಿಯೆ) ಮಾಡುವ ಬಗ್ಗೆ ಮಾತನಾಡಿರುವ ವಿಡಿಯೋನ ನಾನು ಯೂಟ್ಯೂಬ್ ನಲ್ಲಿ ನೋಡಿದೆ. ಆ ಯೋಜನೆಯನ್ನ ನಾವು ಅನುಷ್ಟಾನಕ್ಕೆ ತಂದರೆ ಖಂಡಿತ ನಮಗೆ ನೀರಿನ ಸಮಸ್ಯೆ ಇರುವುದಿಲ್ಲ'' - ಉಪೇಂದ್ರ [ಆಯಮ್ಮನ (ಜಯಲಲಿತಾ) ಹೆದರಿಸುವ ಗಂಡಸು ಕರ್ನಾಟಕದಲ್ಲಿ ಹುಟ್ಟಿಲ್ವಾ?]

  ಮಾಧ್ಯಮಗಳ ಪಾತ್ರವೇನು?

  ಮಾಧ್ಯಮಗಳ ಪಾತ್ರವೇನು?

  ''ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಶಾಸಕರನ್ನ ಹಾಗೂ ಸಚಿವರನ್ನ ಕರೆಯಿಸಿ ಅವರಿಗೆ ಈ ಕೆಲಸ (ಸಮುದ್ರದ ನೀರನ್ನ Desalination) ಮಾಡುವಂತೆ ಮನವರಿಕೆ ಮಾಡಿಕೊಡುವ ಕೆಲಸವನ್ನ ಕನ್ನಡ ಮಾಧ್ಯಮಗಳು ಮಾಡಬೇಕು'' - ಉಪೇಂದ್ರ [ಬಂಗಾರಪ್ಪನಂತೆ ಸಿದ್ದು ನಿರ್ಧರಿಸಿದ್ರೆ 'ಗಂಡಸು' ಆಗ್ತಿದ್ರು : ಶಿವಣ್ಣ]

  ಜನರೇ ದುಡ್ಡು ಕೊಡ್ತಾರೆ ಸ್ವಾಮಿ!

  ಜನರೇ ದುಡ್ಡು ಕೊಡ್ತಾರೆ ಸ್ವಾಮಿ!

  ''ದುಡ್ಡು ನಮ್ಮಲ್ಲಿ ಇಲ್ಲ ಅಂದ್ರೆ, ಜನರೇ ಇದಕ್ಕೆ ಖಂಡಿತ ಸಹಾಯ ಮಾಡ್ತಾರೆ. ಸಿಟಿಗಳಲ್ಲಿ ನಾವು ಎಷ್ಟೋ ನೀರನ್ನ ವೇಸ್ಟ್ ಮಾಡ್ತಿದ್ದೀವಿ. ಅದನ್ನೆಲ್ಲಾ ಕಡಿಮೆ ಮಾಡಿ, ಕೆರೆಗಳನ್ನ ಕಟ್ಟುವ ಬಗ್ಗೆ ಕೂಡ ಯೋಜನೆ ಹಾಕಬೇಕು'' - ಉಪೇಂದ್ರ

  ಮುಂದಕ್ಕೆ ನೀರಿನ ಸಮಸ್ಯೆ ಜಾಸ್ತಿ ಆಗುತ್ತೆ!

  ಮುಂದಕ್ಕೆ ನೀರಿನ ಸಮಸ್ಯೆ ಜಾಸ್ತಿ ಆಗುತ್ತೆ!

  ''ಮುಂದಕ್ಕೆ ನೀರಿನ ಸಮಸ್ಯೆ ಇನ್ನೂ ಜಾಸ್ತಿ ಆಗುತ್ತೆ. ಜನ ಸಂಖ್ಯೆ ಹೆಚ್ಚಾಗುತ್ತಿದೆ. ಮಳೆ ಬಾರದೆ ಇರುವ ಪರಿಸ್ಥಿತಿ ಬರಬಹುದು. ಆ ಸಮಯದಲ್ಲಿ ಇದೇ ತರಹ ಕಂಡಲ್ಲಿ ಗುಂಡು ಆರ್ಡರ್ ಮಾಡಿ, ಜನರು ಹೋರಾಟ ಮಾಡ್ಕೊಂಡು, ಗಲಾಟೆ ಮಾಡ್ಕೊಂಡು ಇದ್ರೆ ಸಮಸ್ಯೆ ಬಗೆಹರಿಯುವುದಾದರೂ ಹೇಗೆ?'' - ಉಪೇಂದ್ರ

  ಕಮರ್ಶಿಯಲ್ ಸಿನಿಮಾ ಆಗ್ಬಿಟ್ಟಿದೆ!

  ಕಮರ್ಶಿಯಲ್ ಸಿನಿಮಾ ಆಗ್ಬಿಟ್ಟಿದೆ!

  ''ಕಾವೇರಿ ವಿವಾದ ಒಂಥರಾ ಕಮರ್ಶಿಯಲ್ ಸಿನಿಮಾ ಆಗ್ಬಿಟ್ಟಿದ್ದೆ. ಲೀಡರ್ ಗಳು ಕಿಲಾಡಿಗಳು. ಅದಕ್ಕೆ ಈ ವಿವಾದಕ್ಕೆ ಎಂಡ್ ಕೊಡುತ್ತಿಲ್ಲ. ಸೀರಿಯಲ್ ತರಹ ಎಳೆಯುತ್ತಿದ್ದಾರೆ. ಮಜಾ ತೆಗೆದುಕೊಳ್ಳುತ್ತಿದ್ದಾರೆ. ತೊಂದರೆ ಆಗುತ್ತಿರುವವರಿಗೆ ತೊಂದರೆ ಆಗುತ್ತಲೇ ಇದೆ. ಮೇಲಿರುವವರಿಗೆ ಇದೆಲ್ಲಾ ಎಂಜಾಯ್ಮೆಂಟ್'' - ಉಪೇಂದ್ರ

  ಮಾಧ್ಯಮಗಳೇ ಗಮನಿಸಿ....

  ಮಾಧ್ಯಮಗಳೇ ಗಮನಿಸಿ....

  ''ಜನರಿಗೆ ಆಪ್ಷನ್ ಇಲ್ಲ. ಎಲ್ಲಾ ಲೀಡರ್ ಗಳು ಹೀಗೆಯೇ. ಮಾಧ್ಯಮಗಳು ಇದರ ಬಗ್ಗೆ ಗಮನ ಹರಿಸಬೇಕು. ಎಲ್ಲರನ್ನ ಕರೆಯಿಸಿ, ಪ್ರಾಬ್ಲಂ ಬಗ್ಗೆ ಮಾತನಾಡುವ ಬದಲು ಪರಿಹಾರ ಏನು ಎನ್ನುವುದರ ಬಗ್ಗೆ ಚರ್ಚೆ ಮಾಡಿ. ಸಮುದ್ರದ ನೀರನ್ನ ಬಳಸುವ ಬಗ್ಗೆ ಯೋಜನೆ ಮಾಡಿ. ಅದಕ್ಕೆ ಎಷ್ಟು ಖರ್ಚು ಆಗಲಿದೆ ಎಂಬ ಕುರಿತು ಬಹಿರಂಗ ಚರ್ಚೆ ಮಾಡಿ. ಇದೆಲ್ಲಾ ಮಾಧ್ಯಮಗಳ ಕರ್ತವ್ಯ. ಬೆಳಗ್ಗೆ ಎದ್ದು ಎಲ್ಲರೂ ಟಿವಿ ನೋಡ್ತಾರೆ. ನಿಮ್ಮಿಂದ ನಾವು ಕಲಿಯುತ್ತೇವೆ. ಸಿನಿಮಾದಲ್ಲಿ ನನಗೆ ಸಾಧ್ಯವಾದಷ್ಟು ನಾನು ಹೇಳ್ತೀನಿ. ಆದರೆ ವಾಸ್ತವವನ್ನ ಮಾಧ್ಯಮಗಳೇ ತಿಳಿಸಬೇಕು'' - ಉಪೇಂದ್ರ

  ಪಾಸಿಟೀವ್ ಯೋಚನೆ ಮಾಡಿ....

  ಪಾಸಿಟೀವ್ ಯೋಚನೆ ಮಾಡಿ....

  ''ರಾಜಕಾರಣಿಗಳು ಮತ್ತು ಮಾಧ್ಯಮಗಳು ಪಾಸಿಟೀವ್ ಆಗಿ ಯೋಚನೆ ಮಾಡ್ಬೇಕು. 'ಆಗಲ್ಲ' ಅಂತ ನೆಗೆಟಿವ್ ಆಗಿ ಯೋಚನೆ ಮಾಡಿದರೆ, ಜನರನ್ನ ಕಾಪಾಡುವವರು ಯಾರು?'' - ಉಪೇಂದ್ರ

  ಆಗಲ್ಲ ಅನ್ನೋಕೆ ಸಾಧ್ಯ ಇಲ್ಲ!

  ಆಗಲ್ಲ ಅನ್ನೋಕೆ ಸಾಧ್ಯ ಇಲ್ಲ!

  ''ನೀರಿನ ಪ್ರಾಬ್ಲಂ ಇದೆ ನಿಜ. ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಕೂಡ ಅಷ್ಟೇ ಮುಖ್ಯ. ನೀರಿನ ಸಮಸ್ಯೆ ಇದೆ, ಅದಕ್ಕಾಗಿ ಈ ಯೋಜನೆ ಮಾಡ್ತಿದ್ದೇವೆ ಅಂತ ಕೇಂದ್ರ ಸರ್ಕಾರಕ್ಕೆ ನಾವೆಲ್ಲಾ ಮನವರಿಕೆ ಮಾಡಿಕೊಡಬೇಕು. ಪ್ರಧಾನಿ ಬಂದು ಸಮಸ್ಯೆ ಬಗೆಹರಿಸಬೇಕು ಅನ್ನೋದಲ್ಲ. ನಾವೇ ನಮ್ಮ ಪ್ಲಾನ್ ಗಳನ್ನ ಅವರ ಬಳಿ ತೆಗೆದುಕೊಂಡು ಹೋಗ್ಬೇಕು. ಆಗ ಆಗಲ್ಲ ಅಂತ ಅವರು ಹೇಗೆ ಹೇಳ್ತಾರೆ?'' - ಉಪೇಂದ್ರ

  ಸುಬ್ರಮಣಿಯನ್ ಸ್ವಾಮಿ ಮಾತನಾಡಿರುವ ಈ ವಿಡಿಯೋ ನೋಡಿ...

  ಸುಬ್ರಮಣಿಯನ್ ಸ್ವಾಮಿ ಮಾತನಾಡಿರುವ ಈ ವಿಡಿಯೋ ನೋಡಿ...

  ''ನಿಮಗೆ ನೀರು ಬೇಕಾ ಅಥವಾ ಕಾವೇರಿ ನೀರೇ ಬೇಕಾ'' ಅಂತ ತಮಿಳರಿಗೆ ಪ್ರಶ್ನೆ ಮಾಡುವ ಮೂಲಕ ಸಮುದ್ರದ ನೀರನ್ನ Desalination ಮಾಡುವ ಪ್ರಕ್ರಿಯೆ ಬಗ್ಗೆ ಸುಬ್ರಮಣಿಯನ್ ಸ್ವಾಮಿ ಮಾತನಾಡಿರುವ ವಿಡಿಯೋ ಲಿಂಕ್ ಇಲ್ಲಿದೆ ನೋಡಿ.....

  ಸಮುದ್ರದ ನೀರನ್ನ Desalination ಮಾಡುವ ಪ್ರಕ್ರಿಯೆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ....

  ಸಮುದ್ರದ ನೀರನ್ನ Desalination ಮಾಡುವ ಪ್ರಕ್ರಿಯೆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ....

  ಉಪ್ಪಿನಾಂಶ ಇರುವ ಸಮುದ್ರ ನೀರನ್ನ ಇಸ್ರೇಲ್ Desalination ಮಾಡಿ ಕುಡಿಯಲು ಬಳಸುತ್ತಿದೆ. ಹೆಚ್ಚಿನ ಮಾಹಿತಿ ಪಡೆಯಲು ಈ ವಿಡಿಯೋ ನೋಡಿ....

  English summary
  Kannada Actor, Director Real Star Upendra who had given solution to Cauvery Water Dispute in his movie 'H2O', has now come up with a permanent solution to solve Water Crisis in Karnataka. Check out Upendra's suggestion in this article.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X