For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣ: ವಿಚಾರಣೆ ಮುಗಿಸಿದ ನಟ ಯೋಗಿ, ಕ್ರಿಕೆಟಿಗ ಎನ್‌ಸಿ ಅಯ್ಯಪ್ಪ

  |

  ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸೇರಿದಂತೆ ಇನ್ನೂ ಹಲವರಿಗೆ ಉರುಳಾಗಿ ಪರಿಣಮಿಸಿರುವ ಡ್ರಗ್ಸ್ ಪ್ರಕರಣ ಸಿನಿಮಾ ಜಗತ್ತಿನ ಇನ್ನೂ ಕೆಲವರಿಗೆ ಕಂಟಕವಾಗುವ ಮುನ್ಸೂಚನೆ ನೀಡಿದೆ.

  ನಟ ದಿಗಂತ್, ನಟಿ ಐಂದ್ರಿತಾ, ಅಕುಲ್ ಬಾಲಾಜಿ, ನಟ ಸಂತೋಶ್ ಅವರುಗಳನ್ನು ಇದೇ ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಿರುವ ಸಿಸಿಬಿ ಪೊಲೀಸರು ಈಗ ಇನ್ನೂ ಕೆಲವು ಪ್ರಮುಖ ಸೆಲೆಬ್ರಿಟಿಗಳಿಗೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನೊಟೀಸ್ ನೀಡಿದ್ದಾರೆ.

  ಖ್ಯಾತ ನಟ ಲೂಸ್ ಮಾದಾ ಖ್ಯಾತಿಯ ಯೋಗಿ ಗೆ ಮೂರು ದಿನಗಳ ಹಿಂದೆಯೇ ನೊಟೀಸ್ ನೀಡಿದ್ದು, ಯೋಗಿ ಈಗಾಗಲೇ ವಿಚಾರಣೆಗೆ ನೀಡಿ ಬಂದಿದ್ದಾರೆ.

  ಎನ್‌ಸಿ ಅಯ್ಯಪ್ಪ ಸಹ ವಿಚಾರಣೆ ಎದುರಿಸಿದ್ದಾರೆ

  ಎನ್‌ಸಿ ಅಯ್ಯಪ್ಪ ಸಹ ವಿಚಾರಣೆ ಎದುರಿಸಿದ್ದಾರೆ

  ನಟ ಯೋಗಿ ಮಾತ್ರವೇ ಅಲ್ಲದೆ ಮಾಜಿ ಕ್ರಿಕೆಟಿಗ, ಬಿಗ್‌ಬಾಸ್ ಮಾಜಿ ಸ್ಪರ್ಧಿ ಎಂಸಿ ಅಯ್ಯಪ್ಪ ಗೂ ಸಹ ಸಿಸಿಬಿ ನೊಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿತ್ತು. ಬಿಜೆಪಿಯ ಮಾಜಿ ಸಂಸದರ ಪುತ್ರರೊಬ್ಬರಿಗೂ ನೊಟೀಸ್ ಹೋಗಿತ್ತು ಎನ್ನಲಾಗುತ್ತಿದೆ.

  ಡ್ರಗ್ ಪೆಡ್ಲರ್ ಮಾಹಿತಿ ಮೇರೆಗೆ ನೊಟೀಸ್

  ಡ್ರಗ್ ಪೆಡ್ಲರ್ ಮಾಹಿತಿ ಮೇರೆಗೆ ನೊಟೀಸ್

  ಡ್ರಗ್ ಪೆಡ್ಲರ್ ಒಬ್ಬನ ಮಾಹಿತಿ ಆಧಾರದ ಮೇಲೆ ನಟ ಯೋಗಿ, ಕ್ರಿಕೆಟಿಗ ಎನ್‌ಸಿ ಅಯ್ಯಪ್ಪ ಗೆ ನೊಟೀಸ್ ನೀಡಲಾಗಿತ್ತು. ರಾಜಕಾರಣಿ ಪುತ್ರ ಒಬ್ಬರು ವಿಚಾರಣೆ ಎದುರಿಸಿದ್ದಾರೆ ಎನ್ನಲಾಗುತ್ತಿದೆ, ಆ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

  ಶನಿವಾರವೇ ನೊಟೀಸ್ ಬಂದಿತ್ತು: ಸಿದ್ದರಾಜು

  ಶನಿವಾರವೇ ನೊಟೀಸ್ ಬಂದಿತ್ತು: ಸಿದ್ದರಾಜು

  ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ, ಯೋಗಿ ತಂದೆ ನಿರ್ಮಾಪಕ ಸಿದ್ದರಾಜು 'ಶನಿವಾರವೇ ನೊಟೀಸ್ ಬಂದಿತ್ತು. ಹಾಗಾಗಿ ಇಂದು ವಿಚಾರಣೆ ಮುಗಿಸಿ ವಾಪಸ್ ಬಂದಿದ್ದಾನೆ (ಯೋಗಿ), ಮತ್ತೆ ಬರಲು ಹೇಳಿಲ್ಲ' ಎಂದಿದ್ದಾರೆ.

  ಡೆಲ್ಲಿಯಿಂದ ಟೀಮ್ ಬಂದ್ರೇನೇ ಇವರ ಬಂಡವಾಳ ಗೊತ್ತಾಗೋದು | Oneindia Kannada
  20 ಮಂದಿಗೆ ನೊಟೀಸ್ ನೀಡಿರುವ ಸಾಧ್ಯತೆ

  20 ಮಂದಿಗೆ ನೊಟೀಸ್ ನೀಡಿರುವ ಸಾಧ್ಯತೆ

  ಇಬ್ಬರು ಮಾತ್ರವಲ್ಲದೆ ಚಿತ್ರರಂಗ ಹಾಗೂ ಇತರೆ ರಂಗಗಳ ಸುಮಾರು 20 ಮಂದಿಗೆ ನೊಟೀಸ್ ನೀಡಲಾಗಿದೆ ಎನ್ನಲಾಗುತ್ತಿದೆ. ನಟ ದಿಗಂತ್, ನಟಿ ಐಂದ್ರಿತಾ ರೇ, ಅಕುಲ್ ಬಾಲಾಜಿ, ನಟ ಸಂತೋಶ್ ಅವರುಗಳು ವಿಚಾರಣೆ ಈಗಾಗಲೇ ಮುಗಿದಿದೆ.

  English summary
  Actor Yogi and former cricketer NC Ayyappa issued notice related to Drug case by CCB police.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X