For Quick Alerts
  ALLOW NOTIFICATIONS  
  For Daily Alerts

  ಸಂಜನಾ ಗಲ್ರಾನಿ ಬಂಧನ: ಸಿಸಿಬಿ ಜಂಟಿ ಆಯುಕ್ತರು ಹೇಳಿದ್ದೇನು?

  |

  ಡ್ರಗ್ ಪೆಡ್ಲರ್‌ಗಳ ಜೊತೆ ನಂಟು ಆರೋಪದಲ್ಲಿ ನಟಿ ಸಂಜನಾ ಗಲ್ರಾನಿ ಅವರನ್ನು ಇಂದು ಬೆಳಿಗ್ಗೆ ವಶಕ್ಕೆ ಪಡೆದಿದ್ದ ಸಿಸಿಬಿ ಪೊಲೀಸರು ಮಧ್ಯಾಹ್ನದ ನಂತರ ಬಂಧಿಸಿದ್ದಾರೆ.

  ಲವ್ ಇಲ್ಲ ಅಂದ್ರೆ ನಮ್ ಹುಡುಗ್ರು ಬಿಡಬೇಕಲ್ಲ ಅಂದ್ರು ಧನ್ವೀರ್ | Filmibeat Kannada

  ಸಂಜನಾ ಬಂಧನಕ್ಕೆ ಕೆಲವೇ ನಿಮಿಷಗಳ ಮುನ್ನಾ ಮಾಧ್ಯಮಗಳಿಗೆ ಚುಟುಕಾಟಿ ಪ್ರತಿಕ್ರಿಯೆ ನೀಡಿದ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್, ಪ್ರಕರಣದ ಬಗ್ಗೆ ಚುಟುಕಾಗಿ ಮಾಹಿತಿ ನೀಡಿದರು.

  Breaking: ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಅರೆಸ್ಟ್Breaking: ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಅರೆಸ್ಟ್

  'ಮಾದಕ ವಸ್ತು ವಿನ ಬಗ್ಗೆ ಕಾಟನ್ ಪೇಟೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಕೆಲವರನ್ನು ಬಂಧಿಸಿದ್ದಾರೆ' ಎಂದರು ಸಂದೀಪ್ ಪಾಟೀಲ್.

  ಇಬ್ಬರ ಮನೆ ಮೇಲೆ ದಾಳಿ

  ಇಬ್ಬರ ಮನೆ ಮೇಲೆ ದಾಳಿ

  'ಇಂದು (ಸೆಪ್ಟೆಂಬರ್ 8) ರಂದು ನಟಿ ಸಂಜನಾ ಗಲ್ರಾನಿ ಹಾಗೂ ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೆ ಒಳಪಟ್ಟಿರುವ ವೀರೇನ್ ಖನ್ನಾ ಮನೆಯ ಮೇಲೆ ನ್ಯಾಯಾಲಯದ ಅನುಮತಿಯ ಮೇರೆಗೆ ದಾಳಿ ಮಾಡಿದ್ದೇವೆ. ಸಂಜನಾ ನಿವಾಸದಲ್ಲಿ ಕೆಲವು ವಸ್ತುಗಳು ದೊರಕಿವೆ' ಎಂದರು.

  ವೀರೇನ್ ಖನ್ನಾ ಮನಯೆಲ್ಲಿ ಪೊಲೀಸ್ ಸಮವಸ್ತ್ರ

  ವೀರೇನ್ ಖನ್ನಾ ಮನಯೆಲ್ಲಿ ಪೊಲೀಸ್ ಸಮವಸ್ತ್ರ

  'ವೀರೇನ್ ಖನ್ನಾ ಮನೆಯಲ್ಲಿ ಕರ್ನಾಟಕ ಪೊಲೀಸ್‌ನ ಸಮವಸ್ತ್ರ ದೊರಕಿದೆ. ಈ ಸಮವಸ್ತ್ರ ಯಾಕಾಗಿ ವೀರೇನ್ ಇಟ್ಟುಕೊಂಡಿದ್ದ ಎಂಬುದರ ತನಿಖೆ ಆಗಬೇಕಿದೆ' ಎಂದರು ಸಂದೀಪ್ ಪಾಟೀಲ್. ವೀರೇನ್ ಖನ್ನಾಗೆ ಐಪಿಎಸ್ ಅಧಿಕಾರಿಯೊಬ್ಬರ ಜೊತೆ ಆಪ್ತನಂಟಿದೆ ಎನ್ನಲಾಗುತ್ತಿದೆ.

  ಸಂಜನಾ ವಿರುದ್ಧ ಮೊಕದ್ದಮೆ ಹೂಡುತ್ತೇನೆಂದ ಪ್ರಶಾಂತ್ ಸಂಬರ್ಗಿಸಂಜನಾ ವಿರುದ್ಧ ಮೊಕದ್ದಮೆ ಹೂಡುತ್ತೇನೆಂದ ಪ್ರಶಾಂತ್ ಸಂಬರ್ಗಿ

  ಐದು ದಿನ ಸಿಸಿಬಿ ವಶಕ್ಕೆ

  ಐದು ದಿನ ಸಿಸಿಬಿ ವಶಕ್ಕೆ

  ಬೆಳಿಗ್ಗೆ ವಶಕ್ಕೆ ಪಡೆದಿದ್ದ ಸಂಜನಾ ಗಲ್ರಾನಿಯನ್ನು ಬಂಧಿಸಿ, ಮಧ್ಯಾಹ್ನದ ನಂತರ ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಐದು ದಿನ ಸಂಜನಾರನ್ನು ಸಿಸಿಬಿ ವಶಕ್ಕೆ ನೀಡಲಾಯಿತು.

  ಹಲವರನ್ನು ಬಂಧಿಸಲಾಗಿದೆ

  ಹಲವರನ್ನು ಬಂಧಿಸಲಾಗಿದೆ

  ನಟಿ ರಾಗಿಣಿ, ರವಿಶಂಕರ್, ವೀರೇನ್ ಖನ್ನಾ, ಸಂಜನಾ ಗಲ್ರಾನಿ, ರಾಹುಲ್, ಲೂಮ್ ಪೆಪ್ಪರ್ ಸೈಮನ್, ನಿಯಾಜ್ ಹಾಗೂ ಇನ್ನೂ ಕೆಲವರನ್ನು ಡ್ರಗ್ಸ್ ಬಳಕೆ ಹಾಗೂ ಮಾರಾಟ ಆರೋಪದಲ್ಲಿ ಬಂಧಿಸಲಾಗಿದೆ. ಇನ್ನಷ್ಟು ಮಂದಿಯ ಬಂಧನ ಆಗಲಿದೆ.

  ಡ್ರಗ್ಸ್ ಪ್ರಕರಣ: ಸಿಸಿಬಿ ವಶಕ್ಕೆ ನಟಿ ಸಂಜನಾ ಗಲ್ರಾನಿಡ್ರಗ್ಸ್ ಪ್ರಕರಣ: ಸಿಸಿಬಿ ವಶಕ್ಕೆ ನಟಿ ಸಂಜನಾ ಗಲ್ರಾನಿ

  English summary
  CCB joint commissioner Sandeep Patil said, Two houses raid on September 08.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X