»   » ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಭೂತ ಲಗ್ಗೆ ಇಡುತ್ತಾ?

ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಭೂತ ಲಗ್ಗೆ ಇಡುತ್ತಾ?

Posted By:
Subscribe to Filmibeat Kannada
<ul id="pagination-digg"><li class="next"><a href="/news/what-happened-if-dubbing-films-allowed-kannada-069901.html">Next »</a></li></ul>

ಕನ್ನಡ ಚಿತ್ರರಂಗಕ್ಕೂ ಡಬ್ಬಿಂಗ್ ಭೂತ ಲಗ್ಗೆ ಇಡುತ್ತಾ? ಇಂಥದೊಂದು ಪ್ರಶ್ನೆ ಮತ್ತೊಮ್ಮೆ ಕನ್ನಡ ಚಿತ್ರರಂಗವನ್ನು ಕಾಡುತ್ತಿದೆ. ಡಬ್ಬಿಂಗ್ ನಿಷೇಧಕ್ಕೆ ಸಂಬಂಧಿಸಿದಂತೆ, ಕಾಂಪಿಟೇಶನ್ ಕಮೀಷನ್ ಆಫ್ ಇಂಡಿಯಾ, ಕರ್ನಾಟಕ ಫಿಲ್ಮ್ ಚೇಂಬರ್ ಗೆ ನೋಟಿಸ್ ನೀಡಿರೋದ್ರಿಂದ ವಿವಾದಕ್ಕೆ ಮತ್ತೆ ಜೀವ ಬಂದಿದೆ.

ಕನ್ನಡದಲ್ಲಿ ಡಬ್ಬಿಂಗ್ ಗೆ ನಿಷೇಧ ಹೇರಿರೋದನ್ನ ಪ್ರಶ್ನಿಸಿ, ಕರ್ನಾಟಕ ಗ್ರಾಹಕ ಸಂಘ ಹಾಗೂ ಗಣೇಶ್ ಚೇತನ್ ಎಂಬುವವರು ಸಿಸಿಐಗೆ ದೂರು ನೀಡಿದ್ರು. ದೂರು ಸ್ವೀಕರಿಸಿರೋ ಕಾಂಪಿಟೇಶನ್ ಕಮೀಷನ್ ಆಫ್ ಇಂಡಿಯಾ, ಈಗ ಕರ್ನಾಟಕ ಫಿಲ್ಮ್ ಚೇಂಬರ್ ಸೇರಿದಂತೆ ಆರು ಸಂಸ್ಥೆಗಳಿಗೆ ನೋಟಿಸ್ ನೀಡಿದೆ.

KFI strike photo

ಗಣೇಶ್ ಚೇತನ್ ನೀಡಿದ್ದ ದೂರಿನಲ್ಲಿ ಏನಿತ್ತು?
ಪರಭಾಷಾ ಚಿತ್ರಗಳನ್ನ ಕನ್ನಡದಲ್ಲಿ ನೋಡುವ ಅವಕಾಶ ನಮಗೆ ಬೇಕು. ಬೇರೆ ಭಾಷೆಗಳ ಉತ್ತಮ ಸಿನಿಮಾ ಹಾಗೂ ಧಾರವಾಹಿಗಳನ್ನ ಕನ್ನಡದಲ್ಲಿ ಸಿಗುವಂತೆ ಆಗಬೇಕು. ಬೇರೆ ಭಾಷೆ ಸಿನಿಮಾಗಳು ಕನ್ನಡದಲ್ಲೇ ಇದ್ದರೆ ಸುಲಭವಾಗಿ ಅರ್ಥವಾಗುತ್ತೆ. ಗ್ರಾಹಕರಾಗಿ ನಮಗೆ ಅಂತಹ ಸೌಲಭ್ಯ ಬೇಕು

ಸಿಸಿಐ ನೋಟಿಸಲ್ಲಿ ಏನು ಹೇಳಿದೆ?
ಕನ್ನಡದಲ್ಲಿ ಸಿನಿಮಾ ಹಾಗೂ ಧಾರವಾಹಿಗಳ ಡಬ್ಬಿಂಗ್ ನಿಷೇಧ ಯಾಕೆ? ದೇಶದ ಇತರೆ ಯಾವುದೇ ರಾಜ್ಯಗಳಲ್ಲಿ ಇಲ್ಲದ ನಿಯಮ ಕರ್ನಾಟಕದಲ್ಲೇ ಯಾಕೆ?
ಪರಭಾಷಾ ಚಿತ್ರಗಳು ಹಾಗೂ ಧಾರವಾಹಿಗಳನ್ನು ಕನ್ನಡದಲ್ಲಿ ಡಬ್ಬಿಂಗ್ ಯಾಕೆ ಮಾಡಬಾರದು? ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸಿಸಿಐ ನೋಟಿಸ್. ಡಿಸೆಂಬರ್ 4ರೊಳಗೆ ನೋಟಿಸ್ ಗೆ ಉತ್ತರ ನೀಡಲು ಸೂಚನೆ.

ಸಿಸಿಐ ಯಾರ್ಯಾರಿಗೆ ನೋಟಿಸ್ ನೀಡಿದೆ?
ಕನ್ನಡ ಸಿನಿಮಾ ನಿರ್ಮಾಪಕರ ಸಂಘ. ಕನ್ನಡ ಚಿತ್ರ ನಿರ್ದೇಶಕರ ಸಂಘ. ಸಿನಿಮಾ ಕಲಾವಿದರ ಹಾಗೂ ತಂತ್ರಜ್ಞರ ಸಂಘ. ಟೆಲಿವಿಷನ್ ಒಕ್ಕೂಟ. ಕನ್ನಡ ಚಲನಚಿತ್ರ ಅಕಾಡೆಮಿ. ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್.

<ul id="pagination-digg"><li class="next"><a href="/news/what-happened-if-dubbing-films-allowed-kannada-069901.html">Next »</a></li></ul>
English summary
KFCC is opposing dubbing in kannada film industry will snatch daily bread and butter from daily cine workers. whether Dubbing can be boon or bane to industry or workers here is report. Many other language film industries accepted this, why Kannada industry is against for this?
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada