»   » ಕರ್ನಾಟಕ V/s ಚೆನ್ನೈ ಸಿಸಿಎಲ್ ಮ್ಯಾಚ್ ಬೆಂಗಳೂರಿಗೆ ಶಿಫ್ಟ್

ಕರ್ನಾಟಕ V/s ಚೆನ್ನೈ ಸಿಸಿಎಲ್ ಮ್ಯಾಚ್ ಬೆಂಗಳೂರಿಗೆ ಶಿಫ್ಟ್

Posted By:
Subscribe to Filmibeat Kannada

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನ ನಾಲ್ಕನೇ ಸೀಸನ್ ಜ್ವರ ದಿನೇ ದಿನೇ ಕಾವೇರುತ್ತಿದೆ. ಈ ಬಾರಿ ಚೆನ್ನೈನ ಚೇಪಕ್ ಸ್ಟೇಡಿಯಂನಲ್ಲಿ ನಡೆಯಬೇಕಾಗಿದ್ದ ಪಂದ್ಯಾವಳಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂಗೆ ಶಿಫ್ಟ್ ಮಾಡಲಾಗಿದೆ. ಕರ್ನಾಟಕ ಬುಲ್ಡೋಜರ್ಸ್ ಮತ್ತು ಚೆನ್ನೈ ರೈನೋಸ್ ಮಧ್ಯೆ ಇದೇ ಫೆಬ್ರವರಿ 2ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮ್ಯಾಚ್ ನಡೆಯಲಿದೆ. ಸಂಜೆ 7 ರಿಂದ 11 ಗಂಟೆವರೆಗೆ ಮ್ಯಾಚ್ ನಡೆಯಲಿದೆ.

ಮ್ಯಾಚ್ ಶಿಫ್ಟ್ ಆಗಿರುವ ಬಗ್ಗೆ ಚ್ಯಾನ್ಸೆರಿ ಪೆವಿಲಿಯನ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು. ಕರ್ನಾಟಕ ಬುಲ್ಡೋಜರ್ ಟೀಂನ ಕ್ಯಾಪ್ಟನ್ ಕಿಚ್ಚ ಸುದೀಪ್ ಹಾಗೂ ಚೆನ್ನೈ ರೈನೋಸ್ ಟೀಂನ ಕ್ಯಾಪ್ಟನ್ ವಿಶಾಲ್ ಉಪಸ್ಥಿತರಿದ್ದರು. [ಟೈಗರ್ಸ್ ವಿರುದ್ಧ ಬುಲ್ಡೋಜರ್ಸ್ ವಿರೋಚಿತ ಗೆಲುವು]

ಸಿಸಿಎಲ್ ಡೈರೆಕ್ಟರ್ ಶ್ರೀನಿವಾಸ್ ಮೂರ್ತಿ, ಕರ್ನಾಟಕ ಬುಲ್ಡೋಜರ್ಸ್ ಡೈರೆಕ್ಟರ್ ಟಿ.ಮಹಾದೇವ್, ಡಿಎಸ್ ಮ್ಯಾಕ್ಸ್ ಡೈರೆಕ್ಟರ್ ದಯಾನಂದ್ ಹಾಗೂ ಚಾಲೆಂಜಿಗ್ ಸ್ಟಾರ್ ದರ್ಶನ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು.

ಚೆನ್ನೈ ರೈನೋಸ್ ಒಳ್ಳೆ ಟೀಂ: ಕಿಚ್ಚ ಸುದೀಪ್

ಈ ಸಂದರ್ಭದಲ್ಲಿ ಮಾತನಾಡಿದ ಕಿಚ್ಚ ಸುದೀಪ್, " ಚೆನ್ನೈ ರೈನೋಸ್ ಒಂದು ಒಳ್ಳೆ ಟೀಂ. ನಮಗೆ ಅವರ ಜೊತೆ ಆಡಲು ಇಷ್ಟ. ಮ್ಯಾಚ್ ನಲ್ಲಿ ಒಬ್ಬರಿಗೆ ಮಾತ್ರ ಗೆಲ್ಲುವ ಅವಕಾಶ ಇದೆ. ಆದರೆ ಈ ಮ್ಯಾಚ್ ನಿಂದ ಸಿಗುವ ಖುಷಿಗೆ ಮಾತ್ರ ಲೆಕ್ಕ ಇಲ್ಲ. ನಾವು ಎರಡೂ ಟೀಂನವರು ನಮ್ಮ ಅಭಿಮಾನಿಗಳನ್ನು ಖಂಡಿತ ಖುಷಿಪಡಿಸುತ್ತೇವೆ" ಎಂದು ಹೇಳಿದರು.

ಬೆಂಗಳೂರಿನಲ್ಲಿ ಇನ್ನೊಂದು ಪಂದ್ಯಾವಳಿ

ಇದೇ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಬುಲ್ಡೋಜರ್ಸ್ ಡೈರೆಕ್ಟರ್ ಟಿ ಮಹಾದೇವ್, ಬೆಂಗಳೂರಿನಲ್ಲಿ ಇನ್ನೊಂದು ಮ್ಯಾಚ್ ಇರೋದು ನಮಗೆ ಖುಷಿ ಕೊಟ್ಟಿದೆ ಅಂತ ತಿಳಿಸಿದರು. ಫೆಬ್ರವರಿ 2ರಂದು ಭೋಜ್ ಪುರಿ ದಬಾಂಗ್ ಮತ್ತು ಬೆಂಗಾಲ್ ಟೈಗರ್ಸ್ ಮಧ್ಯೆ ಮಧ್ಯಾಹ್ನ 3ರಿಂದ ಸಂಜೆ 7ರ ವರೆಗೆ ಮ್ಯಾಚ್ ನಡೆಯಲಿದೆ.

ಪಾಯಿಂಟ್ಸ್ ಪಟ್ಟಿಯಲ್ಲಿ ಮುಂದಿರುವ ಬುಲ್ಡೋಜರ್ಸ್

ಕರ್ನಾಟಕ ಬುಲ್ಡೋಜರ್ಸ್ ತಂಡ ಈಗಾಗಲೆ ಪಾಯಿಂಟ್ಸ್ ಪಟ್ಟಿಯಲ್ಲಿ ಮುಂದಿದೆ. ನೆಟ್ ರನ್ ರೇಟ್ ನಲ್ಲಿ (5.750) ಅತ್ಯಧಿಕ ಪಾಯಿಂಟ್ ಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಜನವರಿ 26ರಂದು ಬೆಂಗಳೂರಿನಲ್ಲಿ ನಡೆದ ಪಂದ್ಯಾವಳಿಯಲ್ಲಿ ಬೆಂಗಾಲ್ ಟೈಗರ್ಸ್ ತಂಡಕ್ಕೆ ಕರ್ನಾಟಕ ಬುಲ್ಡೋಜರ್ಸ್ ತಂಡ ನೀರು ಕುಡಿಸಿತ್ತು.

ತಾಯ್ನಾಡಿನಲ್ಲಿ ಮ್ಯಾಚ್ ; ಬುಲ್ಡೋಜರ್ಸ್ ಗೆ ಹೊಸ ಬಲ

ಈಗ ಮತ್ತೊಮ್ಮೆ ಪಂದ್ಯ ಬೆಂಗಳೂರಿನಲ್ಲಿ ನಡೆಯುತ್ತಿರುವುದು ವಿಶೇಷ. ತಾಯ್ನಾಡಿನಲ್ಲಿ ಮ್ಯಾಚ್ ಆಡುತ್ತಿರುವುದು ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಹೊಸ ಬಲತಂದಿದೆ. ಜೊತೆಗೆ ಕಿಚ್ಚನ ತಂಡವೂ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ.

ಚೆನ್ನೈ ರೈನೋಸನ್ನು ಸುಲಭವಾಗಿ ಕಡೆಗಣಿಸುವಂತಿಲ್ಲ

ಆದರೆ ಕರ್ನಾಟಕ ಬುಲ್ಡೋಜರ್ಸ್ ತಂಡ ಚೆನ್ನೈ ರೈನೋಸ್ ತಂಡವನ್ನೂ ಸುಲಭವಾಗಿ ಕಡೆಗಣಿಸುವಂತಿಲ್ಲ. ಈ ಹಿಂದೆ ಅವರು ಕರ್ನಾಟಕ ತಂಡಕ್ಕೆ ಸಾಕಷ್ಟು ಸ್ಪರ್ಧೆ ನೀಡಿದ್ದಾರೆ. ಒಟ್ಟಾರೆಯಾಗಿ ಭರ್ಜರಿ ಮನರಂಜನೆ ಅಭಿಮಾನಿಗಳಿಗೆ ಕಾದಿದೆ.

English summary
Season IV of the Celebrity Cricket League is currently underway and due to unforeseen circumstances there has been a change of venues for the Karnataka Bulldozers v/s Chennai Rhinos match, which was earlier set to be held at Chepauk Stadium, Chennai. Fans of the Karnataka Bulldozers team, owned by Mr. Ashok Kheny,AKK Entertainment will be ecstatic to know that the match will be held on Sunday, February 2nd at the M. Chinnaswamy International Cricket Stadium (KSCA) in Bangalore. This T20 match is scheduled from 7PM to 11PM.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada