»   » ರೈನೋಸ್ ವಿರುದ್ಧ ಬುಲ್ಡೋಜರ್ಸ್ ರೋಚಕ ಡ್ರಾ

ರೈನೋಸ್ ವಿರುದ್ಧ ಬುಲ್ಡೋಜರ್ಸ್ ರೋಚಕ ಡ್ರಾ

Posted By:
Subscribe to Filmibeat Kannada

ಈ ವಾರಾಂತ್ಯ ಕ್ರಿಕೆಟ್ ಪ್ರೇಮಿಗಳಿಗೆ ಹಾಗೂ ಚಲನಚಿತ್ರ ತಾರೆಗಳ ಅಭಿಮಾನಿಗಳ ಪಾಲಿಗೆ ಸಖತ್ ಮನರಂಜನೆ ದಿನ. ಇದಕ್ಕೆ ಕಾರಣವಾಗಿದ್ದು ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಾಲ್ಕನೇ ಆವೃತ್ತಿಯ ಪಂದ್ಯಾವಳಿ. ಚೆನ್ನೈನಲ್ಲಿ ನಡೆಯಬೇಕಿದ್ದ ಕರ್ನಾಟಕ ಬುಲ್ಡೋಜರ್ಸ್ V/s ಚೆನ್ನೈ ರೈನೋಸ್ ಪಂದ್ಯ ಕೊನೆಯ ಕ್ಷಣದಲ್ಲಿ ಬೆಂಗಳೂರಿಗೆ ಶಿಫ್ಟ್ ಆಗಿತ್ತು.

ಬೆಂಗಳೂರಿನಲ್ಲಿ ತಮಿಳು ಸಿನಿಮಾಗಳನ್ನು ಆರಾಧಿಸುವ ಅತಿದೊಡ್ಡ ಅಭಿಮಾನಿ ಬಳಗವೇ ಇದೆ. ಅದಕ್ಕೆ ತಕ್ಕಂತೆ ಚಿನ್ನಸ್ವಾಮಿ ಸ್ಟೇಡಿಯಂ ಸಹ ಭರ್ತಿಯಾಗಿತ್ತು. ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಎಂದಿನಂತೆ ಅಭಿಮಾನಿಗಳ ಅಪೂರ್ವ ಬೆಂಬಲ ಇತ್ತು. [ಟೈಗರ್ಸ್ ವಿರುದ್ಧ ಬುಲ್ಡೋಜರ್ಸ್ ವಿರೋಚಿತ ಗೆಲುವು]

ಟಾಸ್ ಗೆದ್ದ ಚೆನ್ನೈ ರೈನೋಸ್ ತಂಡ ನಿಗದಿತ ಇಪ್ಪತ್ತು ಓವರ್ ಗಳಲ್ಲಿ ಭಾರಿ ಮೊತ್ತವಲ್ಲದಿದ್ದರೂ ಗೆಲ್ಲಬಹುದಾದ 193 ರನ್ ಗಳ ಟಾರ್ಗೆಟ್ ಕೊಡ್ತು. ಈ ಗುರಿಯ ಬೆನ್ನು ಹತ್ತಿದ ಕರ್ನಾಟಕ ಬುಲ್ಡೋಜರ್ಸ್ ತಂಡ ಕಡೆಗೆ ಪಂದ್ಯವನ್ನು ರೋಚಕ ಡ್ರಾದಲ್ಲಿ ಅಂತ್ಯಗೊಳಿಸಿತು. [ಹದಿನಾಲ್ಕು ವರ್ಷಗಳ ಕರ್ನಾಟಕ ರಣಜಿ ಕನಸು ನನಸು]

ರೋಚಕ ಡ್ರಾದಲ್ಲಿ ಅಂತ್ಯವಾದ ಸಿಸಿಎಲ್ 4

ಕರ್ನಾಟಕ ಬುಲ್ಡೋಜರ್ಸ್ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಗಳ ನಷ್ಟಕ್ಕೆ 193 ರನ್ ಗಳನ್ನು ಗಳಿಸುವ ಮೂಲಕ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು. ಆರಂಭಿಕ ಬ್ಯಾಟ್ಸ್ ಮನ್ ಗಳಾದ ಧ್ರುವ ಹಾಗೂ ಪ್ರದೀಪ್ ಅವರ ಜೊತೆಯಾಟ 83 ರನ್ ಗಳ ಉತ್ತಮ ಮೊತ್ತದ ಬುನಾದಿ ಹಾಕಿಕೊಟ್ಟಿತು.

ಪ್ರದೀಪ್ ಈ ಬಾರಿಯೂ ಉತ್ತಮ ಆಟ

ಈ ಬಾರಿಯೂ ಪ್ರದೀಪ್ ಉತ್ತಮ ಮೊತ್ತವನ್ನು ಕಲೆಹಾಕಿ ತಂಡವನ್ನು ಮುನ್ನೆಡೆಸುವಲ್ಲಿ ಯಶಸ್ವಿಯಾದರು. ಒಟ್ಟು 50 ಚೆಂಡುಗಳಲ್ಲಿ 65 ರನ್ ಗಳನ್ನು ಕಲೆಹಾಕಿದರು. ಅದರಲ್ಲಿ 4 ಬೌಂಡರಿಗಳು ಹಾಗೂ 2 ಸಿಕ್ಸರ್ ಗಳು ಅಭಿಮಾನಿಗಳನ್ನು ರಂಜಿಸಿತು.

ಎಲ್ಲರ ಗಮನಸೆಳೆದ ಧ್ರುವ ಶರ್ಮ

ಇನ್ನು ಧ್ರುವ ಶರ್ಮಾ ಅವರು 24 ಬಾಲ್ ಗಳಲ್ಲಿ 38 ರನ್ ಹೊಡೆಯುವ ಮೂಲಕ ಸುದೀಪ್ ತಂಡಕ್ಕೆ ಇನ್ನೊಂದಿಷ್ಟು ಬಲ ತಂದರು. ಇನ್ನು ತಂಡದ ಕ್ಯಾಪ್ಟನ್ ಸುದೀಪ್ ಅವರು ಕೇವಲ 6 ಬಾಲ್ ಗಳಲ್ಲಿ 6 ರನ್ ಗಳನ್ನು ಗಳಿಸಿ ಅಭಿಮಾನಿಗಳನ್ನು ನಿರಾಸೆಪಡಿಸಿದರು.

ಎರಡೂ ತಂಡಗಳ ನಾಯಕರ ನೀರಸ ಆಟ

ಇನ್ನು ಚೆನ್ನೈ ರೈನೋಸ್ ತಂಡದ ನಾಯಕ ವಿಶಾಲ್ ಕೂಡ ಅಷ್ಟೇ 9 ಬಾಲ್ ಗಳಲ್ಲಿ 5 ರನ್ ಗಳಿಗಷ್ಟೇ ತೃಪ್ತರಾದರು. ಎರಡೂ ತಂಡಗಳ ನಾಯಕರು ಅಭಿಮಾನಿಗಳನ್ನು ನಿರಾಸೆಪಡಿಸಿದರು. ಪ್ರದೀಪ್ ಅವರು ಗಾಯಗೊಂಡರೂ ಉತ್ತಮ ಮೊತ್ತವನ್ನು ಕಲೆಹಾಕಿ ಬುಲ್ಡೋಜರ್ಸ್ ತಂಡ ಸಾವಿನ ದವಡೆಯಿಂದ ಪಾರಾಗುವಂತೆ ಮಾಡುವಲ್ಲಿ ಯಶಸ್ವಿಯಾದರು.

ಕರ್ನಾಟಕ ಬುಲ್ಡೋಜರ್ಸ್ ತಂಡದ ಸ್ಕೋರ್

ಇನ್ನು ಬುಲ್ಡೋಜರ್ಸ್ ತಂಡದ ರಾಹುಲ್ 22 ರನ್, ರಾಜೀವ್ 1ರನ್, ಜೆಕೆ 16ರನ್, ಭಾಸ್ಕರ್ ಅಜೇಯ 20 ಹಾಗೂ ಮಹೇಶ್ ಅಜೇಯ 1 ರನ್.

ಎಕ್ಸ್ ಟ್ರಾ ಕೊಡುವುದರಲ್ಲಿ ಇಬ್ಬರೂ ಬಹಳ ಉದಾರಿಗಳು

ಚೆನ್ನೈ ರೈನೋಸ್ ತಂಡ ಬಹಳ ಉದಾರವಾಗಿ 24 ಎಕ್ಸ್ ಟ್ರಾಸ್ ಕೊಟ್ಟರೆ, ಕರ್ನಾಟಕ ಬುಲ್ಡೋಜರ್ಸ್ ತಂಡವೂ ಅಷ್ಟೇ ಮೊತ್ತವನ್ನು ಚೆನ್ನೈ ರೈನೋಸ್ ತಂಡಕ್ಕೆ ಉದಾರವಾಗಿ ವಾಪಸ್ ಕೊಟ್ಟಿದೆ. 193ರನ್ ಗಳನ್ನು ಸುಲಭವಾಗಿ ಬೆನ್ನುಹತ್ತಬಹುದಾಗಿದ್ದ ಬುಲ್ಡೋಜರ್ಸ್ ತಂಡ ಕೊನೆಯಲ್ಲಿ ರೋಚಕವಾಗಿ ಪಂದ್ಯವನ್ನು ಸಮಗೊಳಿಸಿತು.

ವಿಕ್ರಾಂತ್ ಕೊರಳಿಗೆ ಮ್ಯಾನ್ ಆಫ್ ದಿ ಮ್ಯಾಚ್

ಈ ಪಂದ್ಯಾವಳಿಗೆ ಟಿವಿ ಅಂಪೈರ್ ಎನ್ ಆರ್ಎಸ್ ಪ್ರಭು ಹಾಗೂ ಅಂಪೈರ್ ಗಳಾಗಿ ಎಂ ರಮೇಶ್ ಕುಮಾರ್, ಸಿ ರವಿಕಾಂತ್ ರೆಡ್ಡಿ ವ್ಯವಹರಿಸಿದರು. ಚೆನ್ನೈ ರೈನೋಸ್ ನ ವಿಕ್ರಾಂತ್ 37 ಬಾಲ್ ಗಳಿಗೆ 52 ರನ್ ಗಳಿಸುವ ಮೂಲಕ 'ಮ್ಯಾನ್ ಆಫ್ ದ ಮ್ಯಾಚ್' ಪ್ರಶಸ್ತಿ ಗೆದ್ದರು.

English summary
The much expected match between Karnataka Bulldozers and Chennai Rhinos held at the Chinnaswamy Stadium in Bangalore on Sunday (2nd Jan) night ended in a draw. Earlier, the Chennai Rhinos won the toss and elected to bat first. The team scored 193 for six wickets in 20 overs. The Karnataka Bulldozers got a target of 194 runs in 20 overs.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada