»   » ಸಿಸಿಎಲ್ ಉಳಿದ ಪಂದ್ಯಗಳಿಗೆ ಸುದೀಪ್ ಅನುಮಾನ

ಸಿಸಿಎಲ್ ಉಳಿದ ಪಂದ್ಯಗಳಿಗೆ ಸುದೀಪ್ ಅನುಮಾನ

Posted By:
Subscribe to Filmibeat Kannada

ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ ಕಿಚ್ಚ ಸುದೀಪ್ ಅವರು ಮುಂದಿನ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಂದ್ಯ ಆಡುವುದು ಅನುಮಾನವಾಗಿದೆ. ಈ ಹಿಂದಿನ ಚೆನ್ನೈ ರೈನೋಸ್ ವಿರುದ್ಧದ ಪಂದ್ಯದಲ್ಲಿ ಸುದೀಪ್ ಗಾಯಗೊಂಡಿದ್ದರು.

ಅದಾದ ಮರುದಿನವೇ 'ಮಾಣಿಕ್ಯ' ಚಿತ್ರೀಕರಣದ ವೇಳೆ ಮತ್ತೊಂದು ಸಲ ಗಾಯಗೊಂಡಿದ್ದಾರೆ. ಅಬ್ಬಾಯಿ ನಾಯ್ಡು ಚಿತ್ರೀಕರಣ ವೇಳೆ ಅವರು ಬೈಕ್ ಸ್ಟಂಟ್ ಮಾಡುತ್ತಿರಬೇಕಾದರೆ ಆಯತಪ್ಪಿ ಬಿದ್ದು ಗಾಯಗೊಂಡಿದ್ದರು. ಅವರ ಮುಂಗಾಲುಗಳಿಗೆ ಗಾಯಗಳಾಗಿವೆ.

CCL 4 Sudeep to not play Mumbai match after getting injury

ವೈದ್ಯರು ಅವರಿಗೆ ಸ್ವಲ್ಪ ದಿನಗಳ ಕಾಲ ವಿಶ್ರಾಂತಿ ಪಡೆಯಬೇಕೆಂದು ಸೂಚಿಸಿದ್ದಾರೆ ಹಾಗಾಗಿ ಅವರು ಫೆಬ್ರವರಿ 8ರಂದು ಮುಂಬೈನಲ್ಲಿ ತೆಲುಗು ವಾರಿಯರ್ಸ್ ವಿರುದ್ಧದ ಪಂದ್ಯ ಆಡುವುದು ಅನುಮಾನ ಎನ್ನುತ್ತವೆ ಮೂಲಗಳು.

ಸುದೀಪ್ ಅವರು ತಂಡದಲ್ಲಿದ್ದರೆ ಇಡೀ ತಂಡಕ್ಕೆ ಒಂಥರಾ ಮಿಂಚಿನ ಸಂಚಾರವಾಗುತ್ತದೆ. ಈಗ ಅವರೇ ತೆಲುಗು ವಾರಿಯರ್ಸ್ ವಿರುದ್ಧದ ಆಟದಲ್ಲಿ ಇಲ್ಲ ಎಂದರೆ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ.

ಇನ್ನು ಪಾಯಿಂಟ್ಸ್ ಪಟ್ಟಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ 3 ಪಾಯಿಂಟ್ ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಇದುವರೆಗೂ ಆಡಿರುವ ಎರಡು ಪಂದ್ಯಗಳಲ್ಲಿ ಒಂದು ಗೆದ್ದಿದ್ದು ಇನ್ನೊಂದು ಟೈ ಆಗಿದೆ. ನೆಟ್ ರನ್ ರೇಟ್ ನಲ್ಲಿ (2.875) ಮಾತ್ರ ಎಲ್ಲರಿಗಿಂತಲೂ ಮುಂದಿದೆ. (ಏಜೆನ್ಸೀಸ್)

English summary
In an unexpected twist of turns Karnataka Bulldozers captain Sudeep may not play Mumbai match, will take on Telugu Warriors in the February 8 match scheduled in Mumbai. The injury also puts a question mark on the participation ofSudeepinthenextCelebrity Cricket League match on Sunday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada