For Quick Alerts
  ALLOW NOTIFICATIONS  
  For Daily Alerts

  CCL ಆಟಗಾರ ರಾಜೀವ್ ಮದುವೆಯಲ್ಲಿ ಸುದೀಪ್ ದಂಪತಿ ಭಾಗಿ

  |

  ನಟ ರಾಜೇವ್ ಸಿನಿಮಾಗಳಿಗಿಂತ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದು, ಸಿಸಿಎಲ್ ಪಂದ್ಯಗಳಿಂದ. ಸುದೀಪ್ ಸಾರಥ್ಯದ ಕರ್ನಾಟಕ ಬುಲ್ಡೋಸರ್ಸ್ ತಂಡದ ದೊಡ್ಡ ಶಕ್ತಿಯಾಗಿರುವುದು ರಾಜೀವ್.

  ನಟ ರಾಜೀವ್ ಈಗ ತಮ್ಮ ವಿವಾಹದ ಸಂಭ್ರಮದಲ್ಲಿ ಇದ್ದಾರೆ. ಇಂದು ಅವರ ಮದುವೆ ನಡೆದಿದ್ದು, ಸುದೀಪ್ ದಂಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸುದೀಪ್ ಅಭಿಮಾನಿಗಳು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

  ದಾಂಪತ್ಯ ಜೀವನಕ್ಕೆ ಸಜ್ಜಾದ ಸಿಸಿಎಲ್ ಆಟಗಾರ ರಾಜೀವ್, ನಿಶ್ಚಿತಾರ್ಥ ಆಯ್ತು.!

  ರೇಷ್ಮಾ ಎಂಬ ಹುಡುಗಿಯನ್ನು ರಾಜೀವ್ ಮದುವೆ ಆಗಿದ್ದಾರೆ. ನವೆಂಬರ್ 9 ರಂದು ಇವರ ನಿಶ್ಚಿತಾರ್ಥ ನಡೆದಿತ್ತು. ಇಂದಿನ ಕಾರ್ಯಕ್ರಮದಲ್ಲಿ ಸುದೀಪ್, ಪ್ರಿಯಾ ಸುದೀಪ್, ನಟ ಪ್ರದೀಪ್ ಹಾಗೂ ರಾಜೀವ್ ಕುಟುಂಬ ಮತ್ತು ಗೆಳೆಯರು ಭಾಗಿಯಾಗಿ ನೂತನ ದಂಪತಿಗೆ ಶುಭ ಹಾರೈಸಿದರು. ಮುಂದೆ ಓದಿ...

  ಸುದೀಪ್ ದಂಪತಿ ಆಶೀರ್ವಾದ

  ಸುದೀಪ್ ದಂಪತಿ ಆಶೀರ್ವಾದ

  ರಾಜೀವ್ ಹಾಗೂ ರೇಷ್ಮಾ ಮದುವೆಯ ಪ್ರಮುಖ ಆಕರ್ಷಣೆ ಸುದೀಪ್ ಜೋಡಿ. ಈ ರಾಜೀವ್ ಸಿನಿಮಾ ಜರ್ನಿಗೆ ಸಹಾಯ ಮಾಡುವ ಸುದೀಪ್ ಅದೇ ರೀತಿ ಅವರ ಜೀವನದ ಮಹತ್ವದ ಹಂತದಲ್ಲಿಯೂ ಜೊತೆಯಲ್ಲಿ ಇದ್ದರು. ಸಿನಿಮಾದ ಕೆಲಸಗಳ ನಡುವೆ ಕೂಡ ಸುದೀಪ್ ಇಂದು ಕಾರ್ಯಕ್ರಮಕ್ಕೆ ಬಂದಿದ್ದರು.

  ಸ್ನೇಹಿತ ಪ್ರದೀಪ್ ವಿಶ್

  ಸ್ನೇಹಿತ ಪ್ರದೀಪ್ ವಿಶ್

  ಸುದೀಪ್ ಬಳಗದ ಮತ್ತೊಬ್ಬ ಸದಸ್ಯ ನಟ ಪ್ರದೀಪ್ ಸಹ ಗೆಳೆಯನ ಮದುವೆಯಲ್ಲಿ ಭಾಗಿಯಾಗಿದ್ದರು. ಹೊಸ ಜೋಡಿಯ ಜೊತೆಗೆ ಸೆಲ್ಫಿ ತೆಗೆದುಕೊಂಡು ಶುಭಾಶಯ ತಿಳಿಸಿದರು. ಅಂದಹಾಗೆ, ರಾಜೀವ್ ನಿಶ್ಚಿತಾರ್ಥದ ಸಮಯದಲ್ಲಿ ಸುದೀಪ್ ಹೈದರಾಬಾದ್ ನಲ್ಲಿ ಇದ್ದ ಕಾರಣ ಬರಲು ಆಗಿರಲಿಲ್ಲ.

  ರಾಜೀವ್ ಬಗ್ಗೆ ..

  ರಾಜೀವ್ ಬಗ್ಗೆ ..

  ರಾಜೀವ್ ಕನ್ನಡ ಸಿನಿಮಾಗಳಲ್ಲಿ ಪೋಷಕ ನಟನಾಗಿ ಅಭಿನಯಿಸಿದ್ದಾರೆ. 'ಉಸಿರೇ ಉಸಿರೇ' ಎಂಬ ಚಿತ್ರದಲ್ಲಿ ನಾಯಕನಾಗಿಯೂ ಅಭಿನಯಿಸಿದ್ದರು. ಇನ್ನುಳಿದಂತೆ 'ಅಮವಾಸ್ಯೆ', 'ಆರ್ ಎಕ್ಸ್ ಸೂರಿ', 'ಬೆಂಗಳೂರು 560023', 'ಜಿಂದಗಿ' ಅಂತಹ ಚಿತ್ರಗಳಲ್ಲಿ ರಾಜೀವ್ ನಟಿಸಿದ್ದಾರೆ.

  ರೇಷ್ಮಾ ಬಗ್ಗೆ..

  ರೇಷ್ಮಾ ಬಗ್ಗೆ..

  ರಾಜೀವ್ ಮದುವೆಯಾಗಲಿರುವ ರೇಷ್ಮಾ ಅವರ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಬೆಂಗಳೂರಿನ ಮೂಲದವರಾಗಿದ್ದು, ದಯಾನಂದ ಸಾಗರ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ.

  English summary
  Ccl player and kannada actor Rajeev and Reshma riddhima got married.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X