twitter
    For Quick Alerts
    ALLOW NOTIFICATIONS  
    For Daily Alerts

    ಸೆಮಿ ಫೈನಲ್ ಪ್ರವೇಶಿಸಿದ ಕರ್ನಾಟಕ ಬುಲ್ಡೋಜರ್ಸ್

    By Rajendra
    |

    ಈ ಗೆಲುವು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹುಟ್ಟುಹಬ್ಬದ ಉಡುಗೊರೆ. ಹಾಗೆಂದು ಸುದೀಪ್ ಪಂದ್ಯದ ಕೊನೆಯಲ್ಲಿ ಹೇಳಿ ಗೆಲುವಿನ ಸಂಭ್ರಮದಲ್ಲಿ ಜಿಗಿದಾಡಿದರು.

    ಈ ಪಂದ್ಯವನು ಕರ್ನಾಟಕ ಬುಲ್ಡೋಜರ್ಸ್ ತಂಡ ಗೆಲ್ಲುತ್ತದೆ ಎಂದು ಕನಸು ಮನಸ್ಸಿನಲ್ಲೂ ಊಹಿಸಿರಲಿಲ್ಲ. ಯಾರೂ ಊಹಿಸಲು ಸಾಧ್ಯವಿರಲಿಲ್ಲ. ಏಕೆಂದರೆ ತೆಲುಗು ವಾರಿಯರ್ಸ್ ತಂಡದ 191 ರನ್ ಗಳ ಕಠಿಣ ಸವಾಲನ್ನು ಬೆನ್ನು ಹತ್ತಿದ ಬುಲ್ಡೋಜರ್ಸ್ ತಂಡ ಆರಂಭದಲ್ಲೇ ಉತ್ಸಾಹ ಕಳೆದುಕೊಂಡಿತ್ತು.

    ಟಾಸ್ ಗೆದ್ದ ತೆಲುಗು ವಾರಿಯರ್ಸ್ ಮೊದಲು ಆಯ್ಕೆ ಮಾಡಿಕೊಂಡಿದ್ದು ಬ್ಯಾಟಿಂಗ್. ಕಿಕ್ಕಿರಿದ ಹೈದರಾಬಾದ್ ಲಾಲ್ ಬಹದ್ದೂರ್ ಸ್ಟೇಡಿಯಂನಲ್ಲಿ ವಿಕ್ಟರಿ ವೆಂಕಟೇಶ್ ನಾಯಕತ್ವದ ತೆಲುಗು ತಂಡಕ್ಕೆ ಸ್ಥಳೀಯರ ಬೆಂಬಲ ಜೋರಾಗಿತ್ತು. [ಸುದೀಪ್ ಬುಲ್ಡೋಜರ್ಸ್ ತಂಡಕ್ಕೆ ಕಠಿಣ ಸವಾಲು]

    ಬುಲ್ಡೋಜರ್ಸ್ ಗೆ ಭಾರಿ ಸವಾಲಿನ ಮೊತ್ತ

    ಬುಲ್ಡೋಜರ್ಸ್ ಗೆ ಭಾರಿ ಸವಾಲಿನ ಮೊತ್ತ

    ಅದಕ್ಕೆ ತಕ್ಕಂತೆ ತೆಲುಗು ವಾರಿಯರ್ಸ್ ಸಹ ಆಡಿದರು. ಕಿಚ್ಚ ನಾಯಕತ್ವದ ಬುಲ್ಡೋಜರ್ಸ್ ತಂಡಕ್ಕೆ ಭಾರಿ ಸವಾಲನೇ ಹಾಕಿತು ತೆಲುಗು ವಾರಿಯರ್ಸ್. ಈ 191 ರನ್ ಗಳ ಮೊತ್ತದ ಬೆನ್ನುಹತ್ತಿದ ಸುದೀಪ್ ತಂಡ ಆರಂಭದಲ್ಲಿ ಬಹಳಷ್ಟು ತಿಣುಕಾಡಿತು.

    ತೆಲುಗು ವಾರಿಯರ್ಸ್ ಗೆ ಮುಳುವಾದ ಕಳಪೆ ಕ್ಷೇತ್ರ ರಕ್ಷಣೆ

    ತೆಲುಗು ವಾರಿಯರ್ಸ್ ಗೆ ಮುಳುವಾದ ಕಳಪೆ ಕ್ಷೇತ್ರ ರಕ್ಷಣೆ

    ತೆಲುಗು ವಾರಿಯರ್ಸ್ ತಂಡದ ಕಳಪೆ ಕ್ಷೇತ್ರರಕ್ಷಣೆ ಆ ತಂಡದ ಗೆಲುವಿಗೆ ಮುಳುವಾಯಿತು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಹಲವಾರು ಕ್ಯಾಚ್ ಗಳನ್ನು ಬಿಡುವ ಮೂಲಕ ಪಂದ್ಯದ ಗತಿಯೂ ತಾಳತಪ್ಪಿತು. ಧ್ರುವ ಶರ್ಮ ಅವರ ಹಲವು ಕ್ಯಾಚ್ ಗಳು ಮಿಸ್ ಆಗಿ ಹಲವಾರು ಭಾರಿ ಜೀವದಾನ ಸಿಕ್ಕಿತು.

    ಧ್ರುವ ಶರ್ಮ ಮ್ಯಾನ್ ಆಫ್ ದಿ ಮ್ಯಾಚ್

    ಧ್ರುವ ಶರ್ಮ ಮ್ಯಾನ್ ಆಫ್ ದಿ ಮ್ಯಾಚ್

    ಕಡೆಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಧ್ರುವ ಪಾತ್ರರಾದರು. ಒಟ್ಟು 50 ಬಾಲ್ ಗಳಲ್ಲಿ 70 ರನ್ ಗಳನ್ನು ಹೊಡೆದರು ಅದರಲ್ಲಿ ಆಕರ್ಷಕ ಹತ್ತು ಬೌಂಡರಿಗಳು ಇವೆ. ಒಟ್ಟಾರೆಯಾಗಿ ಧ್ರುವ ಅವರ ಅಮೋಘ ಆಟ ತಂಡವನ್ನು ಗೆಲುವಿನತ್ತ ಕೊಂಡೊಯ್ಯಿತು.

    ನಾಯಕ ಸುದೀಪ್ ಉತ್ತಮ ಆಟ

    ನಾಯಕ ಸುದೀಪ್ ಉತ್ತಮ ಆಟ

    ಆರಂಭಿಕ ಬ್ಯಾಟ್ಸ್ ಮನ್ ಪ್ರದೀಪ್ ಕೇವಲ ಒಂದು ರನ್ ಹೊಡೆದು ನಿರ್ಗಮಿಸಿದರು. ಬಳಿಕ ಬಂದ ರಾಹುಲ್ 16 ಬಾಲ್ ಗಳಲ್ಲಿ 18 ರನ್ ಹೊಡೆದು ಪೆವಿಲಿಯನ್ ಹಾದಿ ಹಿಡಿದರು. ತಂಡದ ಕ್ಯಾಪ್ಟನ್ ಸುದೀಪ್ ಗಾಯಗೊಂಡಿದ್ದರೂ ಲೆಕ್ಕಿಸದೆ 26 ಬಾಲ್ ಗಳಲ್ಲಿ 30 ರನ್ ಮಾಡಿದರು.

    ಗೆಲ್ಲುವ ಆಸೆಯನ್ನು ಕೈ ಬಿಟ್ಟಿದ್ದ ಬುಲ್ಡೋಜರ್ಸ್

    ಗೆಲ್ಲುವ ಆಸೆಯನ್ನು ಕೈ ಬಿಟ್ಟಿದ್ದ ಬುಲ್ಡೋಜರ್ಸ್

    ಆದರೆ ರನ್ ರೇಟ್ ಪಾತಾಳಕ್ಕೆ ಇಳಿದಿತ್ತು. ಬುಲ್ಡೋಜರ್ಸ್ ತಂಡ ಗೆಲ್ಲುವ ಆಸೆಯನ್ನು ಬಿಟ್ಟು ಬಿಟ್ಟಿತು. ಇನ್ನೇನು ತಂಡ ಗೆಲ್ಲುವ ಎಲಾ ಆಸೆಗಳನ್ನು ಕೈ ಚೆಲ್ಲಿತು.

    ಪಂದ್ಯದ ಗತಿಯನ್ನೇ ಬದಲಾಯಿಸಿದ ರಾಜೀವ್

    ಪಂದ್ಯದ ಗತಿಯನ್ನೇ ಬದಲಾಯಿಸಿದ ರಾಜೀವ್

    ಆಗ ಬಂದ ರಾಜೀವ್ ಪಂದ್ಯದ ಗತಿಯನ್ನೇ ಬದಲಾಯಿಸಿದರು. ರಾಜೀವ್ ಅವರ ಅಮೋಘ 7 ಸಿಕ್ಸ್ ಗಳು ಹಾಗೂ ಒಂದು ಬೌಂಡರಿ ಪಂದ್ಯವನ್ನು ತಮ್ಮತ್ತ ಸೆಳೆಸುಕೊಳ್ಳುವಲ್ಲಿ ಯಶಸ್ವಿಯಾದರು. ಕೇವಲ 21 ಬಾಲ್ ಗಳಲ್ಲಿ 53 ರನ್ ಹೊಡೆದು ಪಂದ್ಯದ ಗೆಲುವಿಗೆ ನಾಂದಿ ಹಾಡಿದರು.

    ಕ್ರಿಸ್ ಗೇಲ್, ಕೊಹ್ಲಿ ನೆನಪಿಸಿದ ರಾಜೀವ್

    ಕ್ರಿಸ್ ಗೇಲ್, ಕೊಹ್ಲಿ ನೆನಪಿಸಿದ ರಾಜೀವ್

    ರಾಜೀವ್ ಅವರ ಆಟ ಕ್ರಿಸ್ ಗೇಲ್ ಹಾಹೂ ಕೊಹ್ಲಿ ಅವರ ಬ್ಯಾಟಿಂಗ್ ಶೈಲಿಯನ್ನು ನೆನಪಿಸುವಂತಿತ್ತು. ರಾಜೀವ್ ಅವರ ವಿರಾಟ್ ಪ್ರದರ್ಶನ ಕ್ರೀಡಾಭಿಮಾನಿಗಳಿಗೆ ಅತ್ಯುತ್ತಮ ಮನರಂಜನೆ ನೀಡಿತು.

    ವಿರೋಚಿತ ಗೆಲುವು ತಂದುಕೊಟ್ಟ ಭಾಸ್ಕರ್

    ವಿರೋಚಿತ ಗೆಲುವು ತಂದುಕೊಟ್ಟ ಭಾಸ್ಕರ್

    ಅಕಿಲ್ ಅಕ್ಕಿನೇನಿ ಅವರ ಬೌಲಿಂಗ್ ವೇಗದ ಆಟಕ್ಕೆ ಕೊಂಚ ತಡೆಯೊಡ್ಡಿತು. ವೀರಪರಂಪರೆ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟ ಭಾಸ್ಕರ್ ಅವರು ಇನ್ನೂ ಒಂದು ಬಾಲ್ ಇರುವಂತೆ ಬೌಂಡರಿ ಬಾರಿಸುವ ಮೂಲಕ ಪಂದ್ಯಕ್ಕೆ ವಿರೋಚಿತ ಗೆಲುವನ್ನು ತಂದುಕೊಟ್ಟರು.

    English summary
    Celebrity Cricket League 4 score card, Karnataka Bulldozers won by 6 wickets with 1 ball remaining. Man of the match: Dhruv Sharma. CCL 4 score card.
    Monday, February 17, 2014, 11:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X