For Quick Alerts
  ALLOW NOTIFICATIONS  
  For Daily Alerts

  ವೀರ್ ಮರಾಠಿಗರನ್ನು ಬಗ್ಗುಬಡಿದ ಬುಲ್ಡೋಜರ್ಸ್

  By Rajendra
  |

  ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಾಲ್ಕನೇ ಆವೃತ್ತಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಮತ್ತೊಂದು ಪಂದ್ಯವನ್ನು ಗೆದ್ದಿದೆ. ಕೊಚ್ಚಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ ವೀರ್ ಮರಾಠಿ ತಂಡವನ್ನು ಬಗ್ಗುಬಡಿಯುವ ಮೂಲಕ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಮತ್ತೊಂದು ಜಯ ಕೈವಶವಾಯಿತು.

  ಟಾಸ್ ಗೆದ್ದ ವೀರ್ ಮರಾಠಿ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ನಿಗದಿತ 20 ಓವರ್ ಗಳಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ 148 ರನ್ ಗಳ ಟಾರ್ಗೆಟ್ ಕೊಡ್ತು. ಇದರ ಬೆನ್ನು ಹತ್ತಿದ ಸುದೀಪ್ ನಾಯಕತ್ವದ ಬುಲ್ಡೋಜರ್ಸ್ ತಂಡ 18 ಓವರ್ ಗಳಲ್ಲೇ ಕೇವಲ 5 ವಿಕೆಟ್ ಗಳನ್ನು ಕಳೆದುಕೊಂಡು 151ರನ್ ಗಳ ಭರ್ಜರಿ ಜಯ ಪಡೆಯಿತು. [ರೈನೋಸ್ ವಿರುದ್ಧ ಬುಲ್ಡೋಜರ್ಸ್ ರೋಚಕ ಡ್ರಾ]

  ಈ ಪಂದ್ಯಾವಳಿಯಲ್ಲಿ ತಂಡದ ಕ್ಯಾಪ್ಟನ್ ಸುದೀಪ್ ಆಡುತ್ತಾರೋ ಇಲ್ಲವೋ ಎಂಬ ಅನುಮಾನ ಕ್ರಿಕೆಟ್ ಅಭಿಮಾನಿಗಳಿಗೆ ಕಾಡಿತ್ತು. ಆದರೆ ಸುದೀಪ್ ಆಡುವ ಮೂಲಕ ತಂಡದಲ್ಲಿ ಹೊಸ ಉತ್ಸಾಹ ತುಂಬಿದರು. ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಬುಲ್ಡೋಜರ್ಸ್ ತಂಡ ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡು ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿತು.

  ರಂಜಿಸಿದ ಪ್ರದೀಪ್, ಧ್ರುವ್ ಜೊತೆಯಾಟ

  ರಂಜಿಸಿದ ಪ್ರದೀಪ್, ಧ್ರುವ್ ಜೊತೆಯಾಟ

  ಬಳಿಕ ಬಂದ ಪ್ರದೀಪ್ ಹಾಗೂ ಧ್ರುವ ಶರ್ಮಾ ಜೊತೆಯಾಟ ತಂಡವನ್ನು ಅಪಾಯದ ಸ್ಥಿತಿಯಿಂದ ಪಾರು ಮಾಡಿತು. ಪ್ರದೀಪ್ ಹಾಗೂ ಧ್ರುವ ಜೊತೆಯಾಟದಲ್ಲಿ 94 ಬಾಲ್ ಗಳಿಗೆ ಭರ್ಜರಿ 138ರನ್ ಗಳ ಜೊತೆಯಾಟ ಅಭಿಮಾನಿಗಳನ್ನು ರಂಜಿಸಿತು.

  ಮ್ಯಾನ್ ಆಫ್ ದಿ ಮ್ಯಾಚ್ ಧ್ರುವ್ ಶರ್ಮಾ

  ಮ್ಯಾನ್ ಆಫ್ ದಿ ಮ್ಯಾಚ್ ಧ್ರುವ್ ಶರ್ಮಾ

  ಧ್ರುವ್ ಶರ್ಮಾ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಪಾತ್ರರಾದರೆ ಪ್ರದೀಪ್ ಅವರಿಗೆ ಪವರ್ ಪ್ಲೇಯರ್ ಪ್ರಶಸ್ತಿ ವರಿಸಿತು. ವೀರ್ ಮರಾಠಿ ತಂಡದ 147 ರನ್ ಗಳ ಟಾರ್ಗೆಟನ್ನು ಸುಲಭವಾಗಿ ಬೆನ್ನಟ್ಟಿದ ಕರ್ನಾಟಕ ಬುಲ್ಡೋಜರ್ಸ್ ತಂಡ 108 ಬಾಲ್ ಗಳಲ್ಲಿ 151ರನ್ ಹೊಡೆದು ಭರ್ಜರಿ ಗೆಲುವು ಸಾಧಿಸಿತು.

  ಗೆಲುವಿಗೆ ಸೋಪಾನ ಹಾಡಿದ ಪ್ರದೀಪ್, ಧ್ರುವ್

  ಗೆಲುವಿಗೆ ಸೋಪಾನ ಹಾಡಿದ ಪ್ರದೀಪ್, ಧ್ರುವ್

  ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಪ್ರದೀಪ್ ಹಾಗೂ ಧ್ರುವ್ ಅವರ ಜೊತೆಯಾಟದ 138 ರನ್ ಗಳು ವೀರ್ ಮರಾಠಿ ವಿರುದ್ಧದ ಗೆಲುವಿಗೆ ಸೋಪಾನ ಹಾಡಿದವು.

  ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ನಿರಾಸೆ

  ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ನಿರಾಸೆ

  ಈ ಬಾರಿಯೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಅಭಿಮಾನಿಗಳನ್ನು ನಿರಾಸೆಗೊಳಿಸಿದರು. ಮೊದಲ ಓವರ್ ನಲ್ಲೇ ಸೊನ್ನೆ ಸ್ಕೋರ್ ನೊಂದಿಗೆ ದರ್ಶನ್ ಪೆವಿಲಿಯನ್ ಗೆ ತೆರಳಿದ್ದು ತೀವ್ರ ನಿರಾಶಾದಾಯಕವಾಗಿತ್ತು.

  ಪ್ರದೀಪ್ ಈ ಬಾರಿಯೂ ಸೂಪರ್ ಆಟ

  ಪ್ರದೀಪ್ ಈ ಬಾರಿಯೂ ಸೂಪರ್ ಆಟ

  ಓಪನಿಂಗ್ ಬ್ಯಾಟ್ಸ್ ಮನ್ ಪ್ರದೀಪ್ ಅವರು ಈಗ ಎಲ್ಲರ ಮೆಚ್ಚಿನ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಈ ಬಾರಿಯೂ ಅವರು ಉತ್ತಮ ಸ್ಕೋರ್ ಮಾಡುವ ಮೂಲಕ ತಂಡದಲ್ಲಿ ಎಲ್ಲರಿಗಿಂತಲೂ ಮುಂದಿದ್ದಾರೆ. ಇದುವರೆಗೂ ಅವರು ಮೂರು ಅರ್ಧ ಶತಕಗಳನ್ನು ದಾಖಲಿಸಿದ್ದಾರೆ.

  ಬುಲ್ಡೋಜರ್ಸ್ ಬ್ಯಾಟಿಂಗ್ ಸ್ಕೋರ್ ಕಾರ್ಡ್

  ಬುಲ್ಡೋಜರ್ಸ್ ಬ್ಯಾಟಿಂಗ್ ಸ್ಕೋರ್ ಕಾರ್ಡ್

  ಕರ್ನಾಟಕ ಬುಲ್ಡೋಜರ್ಸ್ ತಂಡದ ಸ್ಕೋರ್ ಕಾರ್ಡ್ ಈ ರೀತಿ ಇದೆ. ಪ್ರದೀಪ್ 73 (47 ಬಾಲ್); ದರ್ಶನ್ 0 (5 ಬಾಲ್); ರಾಹುಲ್ 5 (3 ಬಾಲ್); ಧ್ರುವ್ ಶರ್ಮಾ 65 (47 ಬಾಲ್); ರಾಜೀವ್ 0 (1 ಬಾಲ್) ಹಾಗೂ ಉಪ ನಾಯಕ ಜೆಕೆ 4 (2 ಬಾಲ್).

  ವಿನ್ನಿಂಗ್ ಶಾಟ್ ಹೊಡೆದ ಉಪ ನಾಯಕ ಜೆಕೆ

  ವಿನ್ನಿಂಗ್ ಶಾಟ್ ಹೊಡೆದ ಉಪ ನಾಯಕ ಜೆಕೆ

  ಧ್ರುವ್ ಶರ್ಮಾ ಹಾಗೂ ತಂಡದ ಉಪ ನಾಯಕ ಜೆಕೆ ಅವರ ಜೊತೆಯಾಟದಲ್ಲಿ ವಿನ್ನಿಂಗ್ ಶಾಟ್ ಹೊಡೆದದ್ದು ಜೆಕೆ.

  ಅತಿಹೆಚ್ಚು ವಿಕೆಟ್ ಪಡೆದ ಬುಲ್ಡೋಜರ್ಸ್ ಮಹೇಶ್

  ಅತಿಹೆಚ್ಚು ವಿಕೆಟ್ ಪಡೆದ ಬುಲ್ಡೋಜರ್ಸ್ ಮಹೇಶ್

  ಕರ್ನಾಟಕ ಬುಲ್ಡೋಜರ್ಸ್ ತಂಡದ ಮಹೇಶ್ ಅವರು ನಾಲ್ಕು ಓವರ್ ಗಳಲ್ಲಿ ಅತಿಹೆಚ್ಚು ವಿಕೆಟ್ ಪಡೆದರು. ನಾಲ್ಕು ಓವರ್ ಗಳಲ್ಲಿ 36 ರನ್ ಗಳನ್ನು ಕೊಡುವ ಮೂಲಕ 3 ವಿಕೆಟ್ ಪಡೆದರು. ಉಳಿದ ಬೌಲರ್ ಗಳಾದ ರಾಹುಲ್, ಧ್ರುವ್ ಶರ್ಮ, ತರುಣ್ ಚಂದ್ರ, ದಿಗಂತ್, ಅಭಿಮನ್ಯು, ರಾಜೀವ್ ಸಹ ಒಳ್ಳೆಯ ಬೌಲಿಂಗ್ ಪ್ರದರ್ಶನ ನೀಡಿದರು.

  ವೀರ್ ಮರಾಠಿ ತಂಡದ ಸ್ಕೋರ್ ಹೀಗಿದೆ

  ವೀರ್ ಮರಾಠಿ ತಂಡದ ಸ್ಕೋರ್ ಹೀಗಿದೆ

  ಲಷ್ಕರಿ 8 (20 ಬಾಲ್); ಜಾಧವ್ 15 (17 ಬಾಲ್); ಕೇಲ್ಕರ್ 21 (24 ಬಾಲ್); ರಿತೇಶ್ ದೇಶ್ ಮುಖ್ 9 (12 ಬಾಲ್); ಧೂದ್ ವಾಡ್ ಕರ್ 33 (21 ಬಾಲ್); ಶ್ರೀಗನ್ ಪ್ಯೂ 8 (8 ರನ್); ಬಿದ್ದ್ ವಾಯ್ 17 (10 ಬಾಲ್) ಹಾಗೂ ಗೋರ್ 15 (5 ಬಾಲ್ ಗಳು).

  English summary
  In the eleventh match of Celebrity Cricket League (CCL 4), Karnataka Bulldozers representing Kannada film industry has won by 5 wickets against Veer Marathis. The team headed actor Kiccha Sudeep chased the target 148 given by Veer Marathis.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X