»   » ಭೋಜ್ ಪುರಿ ತಂಡಕ್ಕೆ ಭಜ್ಜಿ ತಿನ್ನಿಸಿದ ಕರ್ನಾಟಕ ಬುಲ್ಡೋಜರ್ಸ್

ಭೋಜ್ ಪುರಿ ತಂಡಕ್ಕೆ ಭಜ್ಜಿ ತಿನ್ನಿಸಿದ ಕರ್ನಾಟಕ ಬುಲ್ಡೋಜರ್ಸ್

Posted By:
Subscribe to Filmibeat Kannada

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಹೊಸ ಸೀಸನ್ ಶುರುವಾಗಿದೆ. ಈ ಬಾರಿ ಧಾಂಧೂಂ ಎಂದು ಸದ್ದು ಮಾಡದೆ ಸೈಲೆಂಟ್ ಆಗಿಯೇ ಪಂದ್ಯಾವಳಿಗಳು ಆರಂಭವಾಗಿದ್ದು ವಿಶೇಷ. ಸತತ ಎರಡು ಸಲ ಚಾಂಪಿಯನ್ ಎನ್ನಿಸಿಕೊಂಡಿರುವ ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಆರಂಭಿಕ ಪಂದ್ಯದಲ್ಲೇ ಗೆಲುವಿನ ಗುಟುರು ಹಾಕಿದೆ.

ಶನಿವಾರ (ಜನವರಿ 10) ಸಂಜೆ 7 ಗಂಟೆ ನಂತರ ಆರಂಭವಾದ ಚೊಚ್ಚಲ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಭೋಜ್ ಪುರಿ ತಂಡಗಳು ಮುಖಾಮುಖಿಯಾದವು. ಮುಂಬೈನ ಬ್ರಾಬೌರ್ನ್ ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ಸುದೀಪ್ ತಂಡ 38 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ. [ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಗೆ ಕಿಚ್ಚ ಸುದೀಪ್ ಅಂಡ್ ಟೀಂ ರೆಡಿ]

ಟಾಸ್ ಗೆದ್ದು ಬ್ಯಾಂಟಿಂಗ್ ಆಯ್ಕೆ ಮಾಡಿಕೊಂಡ ಕರ್ನಾಟಕ ಬುಲ್ಡೋಜರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 240 ರನ್ ಗಳ ಸವಾಲನ್ನು ಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಭೋಜ್ ಪುರಿ ತಂಡ 202 ರನ್ ಗಳಿಗೆ ಉಸ್ಸಪ್ಪಾ ಎಂದು ಆಟವನ್ನು ಕೈಚೆಲ್ಲಿತು.

ಚೊಚ್ಚಲ ಗೆಲುವಿನ ಮೂಲಕ ಕರ್ನಾಟಕ ಬುಲ್ಡೋಜರ್ಸ್ ತಂಡ 2 ಪಾಯಿಂಟ್ ಗಳನ್ನು ಪಡೆದಿದೆ. ಪ್ರದೀಪ್ ಅವರ ಅಮೋಘ ಆಟ, 67 ಬಾಲ್ ಗಳಲ್ಲಿ 116 ರನ್ ಗಳು ಹಾಗೂ ರಾಹುಲ್ ಅವರ ಆಕರ್ಷಕ 64 ರನ್ ಗಳು (28 ಬಾಲ್ ಗಳು) ಕರ್ನಾಟಕ ಬುಲ್ಡೋಜರ್ಸ್ ತಂಡದ ಗೆಲುವಿಗೆ ಭದ್ರ ಬುನಾದಿ ಹಾಕಿದವು.

CCl52

ಭೋಜ್ ಪುರಿ ತಂಡದ ಎ ಓಜಾ (63), ಎಆರ್ ಖಾನ್ (36) ಅವರ ಆಟ ಪಂದ್ಯವನ್ನು ಗೆಲುವಿನ ಕಡೆಗೆ ಕೊಂಡೊಯ್ಯುವ ಹರಸಾಹಸ ಮಾಡಿದರೂ ಪ್ರಯೋಜನವಾಗಲಿಲ್ಲ. ಕರ್ನಾಟಕ ಬುಲ್ಡೋಜರ್ಸ್ ಪವರ್ ಪ್ಲೇಯಲ್ಲಿ ಒಂದು ವಿಕೆಟ್ ನಷ್ಟವಿಲ್ಲದೆ 67 ರನ್ ಮಾಡಿದರೆ, ಭೋಜ್ ಪುರಿ ದಬಾಂಗ್ಸ್ ವಿಕೆಟ್ ನಷ್ಟವಿಲ್ಲದೆ 57 ರನ್ ಮಾಡಿತು.

ಪ್ರದೀಪ್ ಅವರ 6 ಫೋರ್ಸ್ ಹಾಗೂ 2 ಆಕರ್ಷಕ ಸಿಕ್ಸರ್ ಗಳು ಕಣ್ಣಿಗೆ ಹಬ್ಬದಂತಿತ್ತು. ಪ್ರದೀಪ್ ಅವರು 28 ಬಾಲ್ ನಲ್ಲಿ ಅರ್ಧ ಶತಕ ಭಾರಿಸಿದರೆ, ರಾಹುಲ್ ಅವರು 22 ಬಾಲ್ ಗಳಲ್ಲಿ ಆಫ್ ಸೆಂಚುರಿ ದಾಖಲಿಸಿದರು. (ಫಿಲ್ಮಿಬೀಟ್ ಕನ್ನಡ)

English summary
The new season of celebrity cricket league (CCL5) started on 10th January. The first match between Karnataka Bulldozers Vs Bhojpuri Dabanggs event held at Mumbai. Karnataka Bulldozers won by 38 runs.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada