For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ಆಗಲಿದೆ 'ಸಿಡಿ ಯುವತಿ'ಯ ಕತೆ, ಹೆಸರು ನೊಂದಾಯಿಸಿದ ನಿರ್ಮಾಪಕ

  |

  ಪ್ರಸ್ತುತ ರಾಜಕೀಯದಲ್ಲಿ ಸಖತ್ ಸದ್ದು ಮಾಡುತ್ತಿರುವ 'ಸಿಡಿ ಕಾಮಕಾಂಡ' ಸಿನಿಮಾ ಆಗಿ ತೆರೆಗೆ ಬರುವ ಸಂಭವ ಇದೆ. ಅದೂ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಯೊಂದು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಸರು ನೊಂದಾವಣೆ ಮಾಡಿಸಿದೆ.

  Recommended Video

  CD Lady ಹೆಸರಲ್ಲಿ ಫಿಲಂ ಚೇಂಬರ್ ನಲ್ಲಿ ರಿಜಿಸ್ಟರ್ ಆಯ್ತು ಸಿನಿಮಾ ಟೈಟಲ್ | Filmibeat Kannada

  ಯಾವುದೇ ವಿಷಯ ಅಥವಾ ವ್ಯಕ್ತಿ ವೈರಲ್ ಆದರೆ ಅದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹೆಸರು ನೊಂದಾವಣಿ ಆಗುವುದು ಸಾಮಾನ್ಯ ಹಾಗೆಯೇ ಈಗಲೂ ಸಹ ಸಿಡಿ ವಿಷಯಕ್ಕೆ ಸಂಬಂಧಿಸಿದಂತೆ ಹೆಸರು ನೊಂದಾವಣೆ ಆಗಿದೆ.

  'ಸಿಡಿ ಲೇಡಿ' ಎಂಬ ಹೆಸರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೊಂದಾವಣೆ ಆಗಿದೆ. ಈ ಹೆಸರು ನೊಂದಾವಣೆ ಮಾಡಿಸಿರುವುದು ಸಂದೇಶ್ ನಾಗರಾಜ್ ನಿರ್ಮಾಣ ಸಂಸ್ಥೆಯವರು.

  ಹೆಸರಾಂತ ನಿರ್ಮಾಣ ಸಂಸ್ಥೆಯಾದ ಸಂದೇಶ್ ನಾಗರಾಜ್ ಸಂಸ್ಥೆಯು ಸಿಡಿ ಪ್ರಕರಣಕ್ಕೆ ಸಂಬಂಧಿಸಿದ ಹೆಸರು ನೊಂದಾವಣಿ ಮಾಡಿದ್ದಾರೆಂದರೆ ಸಿನಿಮಾ ನಿರ್ಮಾಣವಾಗುವುದು ಪಕ್ಕಾ ಎನ್ನಲಾಗುತ್ತಿದೆ.

  ಸಿಡಿ ಕಾಮಕಾಂಡವು ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ಭಾರಿ ಕೋಲಾಹಲ ಎಬ್ಬಿಸಿದೆ. ಪ್ರಕರಣ ಕೇಂದ್ರ ಬಿಂದು ಎನಿಸಿಕೊಂಡಿರುವ ರಮೇಶ್ ಜಾರಕಿಹೊಳಿ ಅವರು ತಮ್ಮ್‌ ಸಚಿವ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ನೀಡಿದ್ದಾರೆ.

  'ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ಈ 'ಸಿಡಿ ಗೇಟ್‌'ನ ಹಿಂದೆ 'ಮಹಾನ್ ನಾಯಕ' ಒಬ್ಬರಿದ್ದಾರೆ ಅವರನ್ನು ಜೈಲಿಗೆ ಕಳಿಸದೇ ಬಿಡುವುದಿಲ್ಲ' ಎಂದು ಗುಟುರು ಹಾಕಿದ್ದಾರೆ.

  ಸಿಡಿ ಪ್ರಕರಣವು 'ಹನಿಟ್ರ್ಯಾಪ್' ಎಂದು ಸಹ ಆರೋಪಿಸಲಾಗಿದ್ದು. ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿತರನ್ನು ಕೆಲವರನ್ನು ವಿಚಾರಣೆಗೆ ಒಳಪಡಿಸಿ ನಂತರ ಬಿಡುಗಡೆಯನ್ನೂ ಮಾಡಿದೆ ಎಸ್‌ಐಟಿ.

  ಸಿಡಿಯಲ್ಲಿರುವ ಯುವತಿ ಎಂದು ಹೇಳಲಾದ ಯುವತಿಯು ಹೊಸದೊಂದು ವಿಡಿಯೋವನ್ನು ಬಿಡುಗಡೆ ಮಾಡಿದ್ದು, 'ರಮೇಶ್ ಜಾರಕಿಹೊಳಿ ಅವರೇ ನನಗೆ ಉದ್ಯೋಗ ಕೊಡಿಸುತ್ತೀನಿ ಎಂದು ಹೇಳಿ ಮೋಸ ಮಾಡಿದ್ದಾರೆ' ಎಂದು ಆರೋಪಿಸಿದ್ದಾಳೆ.

  ಪ್ರಕರಣದ ತನಿಖೆಯನ್ನು ಎಸ್‌ಐಟಿಯು ನಡೆಸುತ್ತಿದ್ದು ಯುವತಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಯುವತಿ ಅಜ್ಞಾತ ಸ್ಥಳದಲ್ಲಿದ್ದಾಳೆ.

  English summary
  CD Lady name registered by Sandesh Nagaraj production house in Film chamber of commerce.
  Sunday, March 21, 2021, 20:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X