»   » ಶಿವಣ್ಣನ ಮಗಳ ಮದುವೆ, ಮಧ್ಯಾಹ್ನ ತಾರೆಯರು ಊಟ ಸವಿದ ಪರಿ

ಶಿವಣ್ಣನ ಮಗಳ ಮದುವೆ, ಮಧ್ಯಾಹ್ನ ತಾರೆಯರು ಊಟ ಸವಿದ ಪರಿ

Posted By:
Subscribe to Filmibeat Kannada

ಅಂತೂ ಇಂತೂ ಡಾ.ರಾಜ್ ಅವರ ಮುದ್ದಿನ ಮೊಮ್ಮಗಳ ಮದುವೆ ಮುಗಿದು ಹೋಯಿತು. ಇನ್ನೇನು ಆರತಕ್ಷತೆ ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ.

ಅಂದಹಾಗೆ ಮದುವೆ ಸಮಾರಂಭಕ್ಕೆ ಆಗಮಿಸಿದ ಗಣ್ಯಾತೀ ಗಣ್ಯರಿಗೆ ಮಧ್ಯಾಹ್ನ ಭರ್ಜರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ವೈಭವೋಪೇತವಾಗಿ ನಡೆಯುತ್ತಿರುವ ನಿರುಪಮಾ-ದಿಲೀಪ್ ಮದುವೆಗೆ ಭಕ್ಷ್ಯ ಭೋಜನಗಳ ಅಡುಗೆಯನ್ನು ಶಿವರಾಜ್ ಕುಮಾರ್ ಮದುವೆಗೆ ಅಡುಗೆ ಮಾಡಿದ್ದ ಬಳೇಪೇಟೆ ಫ್ಲವರ್ ವೆಂಕಟೇಶ್ ಅವರು ಅಡುಗೆ ಉಸ್ತುವಾರಿ ವಹಿಸಿಕೊಂಡಿದ್ದರು.[ದೊಡ್ಮನೆ ಮೊಮ್ಮಗಳ ಮದುವೆ ಸಂಭ್ರಮದ ಚಿತ್ರಗಳು]

LUNCH : ಸಬ್ಬಕ್ಕಿ ಶಾವಿಗೆ ಪಾಯಸಂ, ಮೋತಿಚೂರ್ ಲಡ್ಡು ಮತ್ತು ಹಾಲು ಸಹಿತ ಚಿರೋಟಿ, ಮಿಲ್ಡ್ ಮೈಸೂರು ಪಾಕ್, ರಸ್ ಕಡಂ, ಪೀಸ್ ಮತ್ತು ಕಾಜೂ ಸಹಿತ ಆಲೂ ಫ್ರೈ, ಯಮ್ ಚಾಪ್ಸ್, ದಾಳಿಂಬೆ ಹಣ್ಣಿನ ಸಹಿತ ಸ್ಪ್ರೌಟ್ಸ್, ಸೌತೇಕಾಯಿ ಕೋಸಂಬರಿ, ರವಾ ಪಕೋಡ, ಅಕ್ಕಿ ರೋಟಿ, ಯಂಗೈ, ಹಿತುಕಿದ ಬೇಳೆ, ಪೂರಿ, ಕೆಂಪು ಚಟ್ನಿ, ಪೈನಾಪಲ್ ಗೊಚ್ಚು, ಪುಳಿಯೋಗರೆ, ಕೋಕೋನಟ್ ರೈಸ್, ಮುಗ್ಲೈ ದಮ್ ಬಿರಿಯಾನಿ, ರಾಯ್ತ, ವೈಟ್ ರೈಸ್, ಆಂಧ್ರ ಪಪ್ಪು, ಮಂಗಳೂರು ತಿಳಿ ಸಾರು, ಮೊಸರು, ಉಪ್ಪು, ಉಪ್ಪಿನಕಾಯಿ, ಹಪ್ಪಳ, ಮೊಸರು ಮೆಣಸಿನಕಾಯಿ['ದೊಡ್ಮನೆ' ಮದುವೆಯ ಭಕ್ಷ್ಯ ಭೋಜನದ ಕಂಪ್ಲೀಟ್ ಮೆನ್ಯೂ]

DESSRETS : ಅಸೋರ್ಟೆಡ್ ಐಸ್ ಕ್ರೀಮ್, ಕೇಕ್, ಕಟ್ ಫ್ರೂಟ್ಸ್

MOUTH FRESHNERS : ಸ್ವೀಟ್ ಪಾನ್, ಸಾದಾ ಪಾನ್, ಮಗೈ ಪಾನ್

ಸದ್ಯಕ್ಕೆ ಇಂದು(ಆಗಸ್ಟ್ 31) ಮದುವೆ ಮನೆಯಲ್ಲಿ ಮಧ್ಯಾಹ್ನ ಊಟದ ಮೆನು ಹೀಗಿದ್ದು, ಒಟ್ನಲ್ಲಿ ನಿರುಪಮಾ-ದಿಲೀಪ್ ಮದುವೆಗೆ ಆಗಮಿಸಿದ ಗಣ್ಯರು ಭೂರಿ ಭೋಜನ ಉಂಡರು.[ದೊಡ್ಮನೆ ಮೊಮ್ಮಗಳಿಗೆ ಬಳೆ ತೊಡಿಸುವ ಶಾಸ್ತ್ರದ ಚಿತ್ರಗಳು]

ಇನ್ನು ಈ ಅದ್ಧೂರಿ ಮದುವೆಯ ಊಟದ ಕಾರ್ಯಕ್ರಮದಲ್ಲಿ ನಮ್ಮ ಪುನೀತ್ ರಾಜ್ ಕುಮಾರ್ ದಂಪತಿ, ವಿಜಯರಾಘವೇಂದ್ರ ದಂಪತಿ, ಶ್ರೀಮುರಳಿ ದಂಪತಿ ಹಾಗು ಸಂಗೀತ ನಿರ್ದೇಶಕ ಗುರುಕಿರಣ್ ದಂಪತಿಗಳು ಸಖತ್ ಬ್ಯಾಟಿಂಗ್ ಮಾಡುತ್ತಿದ್ದಾಗ ಕ್ಯಾಮರ ಕಣ್ಣಿಗೆ ಸಿಕ್ಕ ಬಗೆ ನೋಡಿ..

ನಿರುಪಮಾ-ದಿಲೀಪ್ ಮದುವೆ ಝಲಕ್

ಶಿವರಾಜ್ ಕುಮಾರ್ ಗೀತಾ ದಂಪತಿಗಳ ಮಗಳು ನಿರುಪಮಾ ಹಾಗೂ ಅಳಿಯ ದಿಲೀಪ್ ಅವರ ಅದ್ಧೂರಿ ಮದುವೆಯ ಸಣ್ಣ ಝಲಕ್

ನಟ ಪುನೀತ್ ರಾಜ್ ಕುಮಾರ್ ದಂಪತಿ

ಪುನೀತ್ ರಾಜ್ ಕುಮಾರ್(ಮದುಮಗಳ ಚಿಕ್ಕಪ್ಪ) ಅವರು ತಮ್ಮ ಪತ್ನಿ ಅಶ್ವಿನಿ ರೇವಂತ್ ಅವರ ಜೊತೆ ಅಣ್ಣನ ಮಗಳ ಮದುವೆಯಲ್ಲಿ ಮಧ್ಯಾಹ್ನದ ಭೋಜನವನ್ನು ಭರ್ಜರಿಯಾಗಿ ಸವಿದರು

ನಟ ವಿಜಯರಾಘವೇಂದ್ರ

ಸ್ಯಾಂಡಲ್ ವುಡ್ ನಟ ವಿಜಯರಾಘವೇಂದ್ರ ಅವರು ತಮ್ಮ ಪತ್ನಿ ಸ್ಪಂದನ ರಾಘವೇಂದ್ರ ಅವರ ಜೊತೆ ಮದುವೆ ಊಟ ಸವಿದರು.

ನಟ ಶ್ರೀಮುರಳಿ

ಚಂದನವನದ ನಟ 'ಉಗ್ರಂ' ಖ್ಯಾತಿಯ ಶ್ರೀಮುರಳಿ ಅವರು ಪತ್ನಿ ವಿದ್ಯಾ ಅವರ ಜೊತೆ ಮದುವೆ ಮನೆಯಲ್ಲಿ ಮಧ್ಯಾಹ್ನದ ಭೋಜನ ಸವಿಯುವುದರಲ್ಲಿ ಬ್ಯುಸಿಯಾಗಿದ್ದು ನೋಡಿ

ಸಂಗೀತ ನಿರ್ದೇಶಕ ಗುರುಕಿರಣ್

ಸ್ಯಾಂಡಲ್ ವುಡ್ ನ ಸಂಗೀತ ಮಾಂತ್ರಿಕ ಗುರುಕಿರಣ್ ಅವರು ಶಿವಣ್ಣ ಅವರ ಮಗಳ ಮದುವೆಯ ಸಮಾರಂಭದಲ್ಲಿ ಭಾಗಿಯಾಗಿ ಮಧ್ಯಾಹ್ನದ ಭೂರಿ ಭೋಜನ ಸವಿದರು.

English summary
Celebraties in Shivarajkumar Daughter's marriage lunch in pics. Kannada Actor Shivarajkumar's daughter Nirupama's Wedding on Monday August 31st at Bangalore Palace.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada