»   » ಚಿತ್ರಗಳು : ಶಿವಣ್ಣನ ಮಗಳಿಗೆ ಆಶೀರ್ವದಿಸಿದ ಸಿನಿಮಾ ತಾರೆಯರು

ಚಿತ್ರಗಳು : ಶಿವಣ್ಣನ ಮಗಳಿಗೆ ಆಶೀರ್ವದಿಸಿದ ಸಿನಿಮಾ ತಾರೆಯರು

Posted By:
Subscribe to Filmibeat Kannada

ಅರಮನೆ ಮೈದಾನದಲ್ಲಿ ದೊಡ್ಮನೆ ಮೊಮ್ಮಗಳು ನಿರುಪಮಾ ಅವರ ಮದುವೆಯ ಸಂಭ್ರಮ ತುಳುಕಾಡುತ್ತಿದೆ. ಈಗಾಗಲೇ ಮದುವೆಗೆ ಇಡೀ ಚಿತ್ರರಂಗದ ಗಣ್ಯರು ಆಗಮಿಸುತ್ತಿದ್ದಾರೆ.

ಡಾ.ರಾಜ್ ಕುಮಾರ್ ಫ್ಯಾಮಿಲಿಯಲ್ಲಿ ಮದುವೆಯ ಸಂಭ್ರಮ ಹರಿದಾಡುತ್ತಿದೆ. ಗಣ್ಯಾತೀ ಗಣ್ಯರು ತಮ್ಮ ಮದುವೆ ಮನೆಯಲ್ಲಿ ಓಡಾಡಿದಂತೆ ಸಡಗರದಿಂದ ನಿರುಪಮಾ-ದಿಲೀಪ್ ಮದುವೆ ಸಮಾರಂಭದಲ್ಲಿ ಓಡಾಡುತ್ತಿದ್ದಾರೆ.

ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಗೀತಾ ದಂಪತಿಗಳ ಜೈಷ್ಠ ಪುತ್ರಿ ನಿರುಪಮಾ ಅವರ ಮದುವೆಗೆ ಸ್ಯಾಂಡಲ್ ವುಡ್, ಕಾಲಿವುಡ್, ಟಾಲಿವುಡ್ ಸೇರಿದಂತೆ ರಾಜಕೀಯ ನಾಯಕರುಗಳು ಮದುವೆಯ ಸಂಭ್ರಮದಲ್ಲಿ ಪಾಲ್ಗೊಂಡು ನೂತನ ವಧುವರರನ್ನು ಹಾರೈಸುತ್ತಿದ್ದಾರೆ. [ದೊಡ್ಮನೆ ಮೊಮ್ಮಗಳ ಮದುವೆ ಸಂಭ್ರಮದ ಚಿತ್ರಗಳು]

ದೊಡ್ಮನೆ ಮೊಮ್ಮಗಳ ಮದುವೆ ಸಂಭ್ರಮದಲ್ಲಿ ಇಂದು ಹಲವು ಗಣ್ಯಾತೀತರ ಸಮಾಗಮವಾಗಲಿದೆ. ಈಗಾಗಲೇ ಮದುಮಗಳು ನಿರುಪಮಾ ಕುತ್ತಿಗೆಗೆ ತಾಳಿ ಕಟ್ಟಿರುವ ವರ ದಿಲೀಪ್ ಏಳೇಳು ಜನ್ಮದಲ್ಲೂ ನಿನ್ನೊಂದಿಗೆ ಜೊತೆಯಾಗಿ ಹೆಜ್ಜೆ ಹಾಕುವೆ ಎಂದು ಮೂರು ಗಂಟು ಹಾಕುವ ಮೂಲಕ ಮದುವೆಯ ಬಂಧನ ಬೆಸೆಯುತ್ತಿದ್ದಾರೆ.[ಶಿವರಾಜ್ ಕುಮಾರ್ ಮಗಳ ಮದುವೆ ನೋಡಿ LIVE]

ಹೊಸ ಬಾಳಿನ ಹೊಸ್ತಿಲಿನಲ್ಲಿ ನಿಂತಿರುವ ನವ ದಂಪತಿಗಳಿಗೆ ಎಲ್ಲಾ ಗಣ್ಯರು ಶುಭ ಹಾರೈಸುತ್ತಿದ್ದಾರೆ. ಮದುವೆಗೆ ಯಾರು ಯಾರು ಆಗಮಿಸಿದ್ದಾರೆ ಅನ್ನೋದನ್ನ ನೋಡಲು ಕೆಳಗಿನ ಸ್ಲೈಡ್ ಕ್ಲಿಕ್ ಮಾಡಿ.

ಅನಿಲ್ ಕುಂಬ್ಳೆ ಹಾಗೂ ಸ್ಟಾಲೀನ್

ಸ್ಪಿನ್ನ್ ಮಾಂತ್ರಿಕ ಅನಿಲ್ ಕುಂಬ್ಳೆ ಹಾಗೂ ಡಿ.ಎಂ.ಕೆ ಲೀಡರ್ ಸ್ಟಾಲೀನ್ ಅವರು ಹ್ಯಾಟ್ರೀಕ್ ಹೀರೋ ಶಿವರಾಜ್ ಕುಮಾರ್ ಅವರ ಮಗಳ ಮದುವೆಯಲ್ಲಿ ಪಾಲ್ಗೊಂಡು ನವ ದಂಪತಿಗಳಿಗೆ ಶುಭ ಹಾರೈಸಿದರು.

ನಿರ್ದೇಶಕ 'ಜೋಗಿ' ಪ್ರೇಮ್-ರಕ್ಷಿತಾ ದಂಪತಿಗಳು

ಸ್ಯಾಂಡಲ್ ವುಡ್ ಹ್ಯಾಟ್ರಿಕ್ ನಿರ್ದೇಶಕ 'ಜೋಗಿ' ಪ್ರೇಮ್ ನಟಿ, ನಿರ್ಮಾಪಕಿ ರಕ್ಷಿತಾ ದಂಪತಿಗಳು ದೊಡ್ಮನೆ ಮೊಮ್ಮಗಳ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡು ದಂಪತಿಗಳಿಗೆ ಶುಭ ಹಾರೈಸಿದರು.

ತೆಲುಗು ನಟ ಅಕ್ಕಿನೇನಿ ನಾಗಾರ್ಜುನ್

ತೆಲುಗಿನ ಖ್ಯಾತ ನಟ, ನಿರ್ಮಾಪಕ ಅಕ್ಕಿನೇನಿ ನಾಗಾರ್ಜುನ್ ಅವರು ಶಿವಣ್ಣ ಮಗಳ ಮದುವೆಯ ಸಡಗರದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಕ್ರೇಜಿಸ್ಟಾರ್ ರವಿಚಂದ್ರನ್

ಸ್ಯಾಂಡಲ್ ವುಡ್ ನ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಿರುಪಮಾ-ದಿಲೀಪ್ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡು ನೂತನ ವಧುವರರಿಗೆ ಶುಭ ಹಾರೈಸಿದರು.

ತೆಲುಗು ನಟ ಶ್ರೀಕಾಂತ್

ತೆಲುಗಿನ ಖ್ಯಾತ ನಟ ಶ್ರೀಕಾಂತ್ ಅವರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡು ನೂತನ ದಂಪತಿಗಳಿಗೆ ಶುಭ ಹಾರೈಸಿದರು.

ಚಂದನವನದ ತಾರೆ ತಾರಾ ಅನುರಾಧ

ಸ್ಯಾಂಡಲ್ ವುಡ್ ತಾರೆ ತಾರಾ ಅನುರಾಧ ಅವರು ತಮ್ಮ ಪತಿ ವೇಣು ಅವರ ಜೊತೆ ಶಿವಣ್ಣ ಮಗಳ ಮದುವೆಗೆ ಆಗಮಿಸಿ ನೂತನ ವಧು ವರರಿಗೆ ಶುಭ ಹಾರೈಸಿದರು.

ಕೇಂದ್ರ ಕಾನೂನು ಸಚಿವ ಸದಾನಂದ ಗೌಡ

ಕೇಂದ್ರದ ಕಾನೂನು ಸಚಿವ ಸದಾನಂದ ಗೌಡ ಅವರು ತಮ್ಮ ಪತ್ನಿ ಢಾಟಿ ಅವರೊಂದಿಗೆ ಆಗಮಿಸಿ ಹೊಸ ಜೀವನಕ್ಕೆ ಕಾಲಿರಿಸಿದ ನವ ದಂಪತಿಗಳಿಗೆ ಶುಭ ಹಾರೈಸಿದರು.

ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರೀಯಾಂಕ ದಂಪತಿ

ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಪತ್ನಿ ಪ್ರೀಯಾಂಕ ಅವರೊಂದಿಗೆ ಮದುವೆಗೆ ಆಗಮಿಸಿ ಹೊಸ ಜೋಡಿಗಳಿಗೆ ಶುಭ ಹಾರೈಸಿದರು.

ಹಿರಿಯ ನಟಿ ಜಯಂತಿ

ಚಂದನವನದ ಹಿರಿಯ ನಟಿ ಜಯಂತಿ ಅವರು ಶಿವಣ್ಣ ಮಗಳ ಮದುವೆಗೆ ಆಗಮಿಸಿ ಮದುವೆ ಸಂಭ್ರಮವನ್ನು ಕಣ್ತುಂಬಿಕೊಂಡು ನೂತನ ದಂಪತಿಗಳಿಗೆ ಶುಭ ಹಾರೈಸಿದರು.

ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್

ಸ್ಯಾಂಡಲ್ ವುಡ್ ಸ್ಟಾರ್ ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ದಂಪತಿಗಳಿಗೆ ಶುಭ ಹಾರೈಸಿದರು.

ಬಹುಭಾಷಾ ನಟಿ ವೇದಿಕಾ

ಬಹುಭಾಷಾ ನಟಿ ವೇದಿಕಾ ಅವರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಗಳ ಮದುವೆಯ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಸದ್ಯಕ್ಕೆ ಶಿವಣ್ಣ ಅಭಿನಯದ ಹೊಸ ಚಿತ್ರ 'ಶಿವಲಿಂಗ' ದಲ್ಲಿ ವೇದಿಕಾ ಶಿವರಾಜ್ ಕುಮಾರ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

ತಮಿಳು ನಟ ಪ್ರಭು

ತಮಿಳು ನಟ ಪ್ರಭು ಅವರು ದೊಡ್ಮನೆ ಮೊಮ್ಮಗಳ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡು ದಂಪತಿಗಳಿಗೆ ಶುಭ ಹಾರೈಸಿದರು.

ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್

ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ಕುಳ್ಳ ದ್ವಾರಕೀಶ್ ಅವರು ಮದುವೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ನವರಸ ನಾಯಕ ಜಗ್ಗೇಶ್

ಸ್ಯಾಂಡಲ್ ವುಡ್ ಹಾಸ್ಯ ನಟ ನವರಸ ನಾಯಕ ಜಗ್ಗೇಶ್ ಅವರು ಮದುವೆ ಸಮಾರಂಭದಲ್ಲಿ ಭಾಗವಹಿಸಿ ನೂತನ ವಧು ವರರನ್ನು ಹಾರೈಸಿದರು.

ಗೋಲ್ಡನ್ ಸ್ಟಾರ್ ಗಣೇಶ್

ಸ್ಯಾಂಡಲ್ ವುಡ್ ಸ್ಟಾರ್ ಗೋಲ್ಡನ್ ಸ್ಟಾರ್ ಗಣೇಶ್ ಅವರು ಹ್ಯಾಟ್ರಿಕ್ ಹೀರೋ ಶಿವಣ್ಣ ಮಗಳ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡು ಮದುವೆಯ ಸಡಗರ ಹಂಚಿಕೊಂಡರು.

ನಟಿ ಭಾರತಿ ವಿ‍ಷ್ಣುವರ್ಧನ್

ಕನ್ನಡದ ಮೇರು ನಟ ಡಾ.ವಿಷ್ಣುವರ್ಧನ್ ಪತ್ನಿ ಭಾರತಿ ವಿಷ್ಣುವರ್ಧನ್ ಅವರು ಡಾ.ರಾಜ್ ಮೊಮ್ಮಗಳ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡು ವಧು-ವರರಿಗೆ ಶುಭ ಹಾರೈಸಿದರು.

ಸಂಗೀತ ನಿರ್ದೇಶಕ ಗುರುಕಿರಣ್

ಸ್ಯಾಂಡಲ್ ವುಡ್ ನ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರು ಶಿವಣ್ಣ ಮಗಳ ಮದುವೆಯ ಸಮಾರಂಭದಲ್ಲಿ ಭಾಗವಹಿಸಿ ನವ ದಂಪತಿಗಳಿಗೆ ಶುಭ ಹಾರೈಸಿದರು.

ತೆಲುಗು ನಟ ಹರಿಕೃಷ್ಣ

ತೆಲುಗು ಚಿತ್ರರಂಗದ ನಟ, ನಿರ್ಮಾಪಕ ಫೇಮಸ್ ಸ್ಟಾರ್ ಜ್ಯೂನಿಯರ್ ಎನ್.ಟಿ ಆರ್ ತಂದೆ ಹರಿಕೃಷ್ಣ ಅವರು ಶಿವಣ್ಣ ಮಗಳ ಮದುವೆಯಲ್ಲಿ ಪಾಲ್ಗೊಂಡು ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾದರು.

    English summary
    Sandalwood, Tollywood, Kollywood, Stars Celebrities, politicien's witness for Dr Rajkumar's grand daughter Nirupama's Wedding on Monday August 31st at Bangalore Palace. The bride and the bride-groom is wearing white silk saree and silk pancha which depicts the South Indian tradition.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada