ಕೆಲಸ ಮಾಡುವ ಹುಡುಗರು ಸ್ಟಾರ್ ಗಳನ್ನೇ ಹೆದರಿಸುತ್ತಾರಂತೆ.!

By Harshitha

Recommended Video

ಕೆಲಸ ಮಾಡೋರು ಯಶ್ ಗೆ ಹೆದರಿಸಿದ್ದೇಕೆ ? | Yash says being a celeb is not easy | Filmibeat Kannada

ಸ್ಟಾರ್ ಗಳಿಗೆ ಅಭಿಮಾನಿಗಳು ಹೆಚ್ಚು. ಸೆಲೆಬ್ರಿಟಿಗಳಿಗೆ ಎಲ್ಲರೂ ಬೆಲೆ ಕೊಡುತ್ತಾರೆ. ಕಲಾವಿದರದ್ದು ಸುಖವಾದ ಜೀವನ ಎಂದು ಹಲವರು ಭಾವಿಸುತ್ತಾರೆ. ಆದ್ರೆ, ಪಾಪ ಅವರವರ ಕಷ್ಟ ಅವರವರಿಗೇ ಗೊತ್ತು.!

ಕಲಾವಿದರದ್ದು ಒಂಥರಾ ಗಾಜಿನ ಮನೆಯೊಳಗಿನ ಬದುಕು. ಯಾರಾದರೂ ಕಲ್ಲು ಹೊಡೆದರೆ, ಇಡೀ ಮನೆಗೆ ಹಾನಿ. ಹಾಗೇ, ಕಲಾವಿದರ ಬಗ್ಗೆ ಯಾರಾದರೂ ಆರೋಪ ಮಾಡಿದರೆ, ಜನಪ್ರಿಯತೆಗೆ ಕಪ್ಪು ಚುಕ್ಕೆ.

ಅದರಲ್ಲೂ ಈಗ ಮಾಧ್ಯಮಗಳು ಹಾಗೂ ಸೋಷಿಯಲ್ ಮೀಡಿಯಾ ತುಂಬಾ ಪ್ರಭಾವಿ ಆಗಿರುವ ಕಾರಣ ಯಾರು ಬೇಕಾದರೂ ಕಲಾವಿದರ ಮೇಲೆ ಸುಲಭವಾಗಿ ಆರೋಪ ಮಾಡಬಹುದು. ಕೆಲಸ ಮಾಡುವ ಹುಡುಗರೂ ಕೂಡ ಸ್ಟಾರ್ ಗಳನ್ನು ಹೆದರಿಸಬಹುದು. ಹೀಗಂತ ನಾವು ಹೇಳ್ತಿಲ್ಲ. ಬದಲಾಗಿ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.

Celebrities life is not easy as you think says Yash

ತಮ್ಮ ಬಾಡಿಗೆ ಮನೆ ರಂಪಾಟದ ಬಗ್ಗೆ ಸ್ಪಷ್ಟನೆ ನೀಡಲು ಫೇಸ್ ಬುಕ್ ಲೈವ್ ಗೆ ಬಂದಿದ್ದ ಯಶ್, ''ಕಲಾವಿದರನ್ನ ರೋಡ್ ನಲ್ಲಿ ಹೋಗುವವರೂ ಹೆದರಿಸಬಹುದು. ಯಾಕೆ ಅಂದ್ರೆ, ಸೋಷಿಯಲ್ ಮೀಡಿಯಾ ಹಾಗೂ ಮೀಡಿಯಾದಲ್ಲಿ ಕಲಾವಿದರ ಬಗ್ಗೆ ಏನು ಬೇಕಾದರೂ ಹಾಕಬಹುದು. ಒಂದು ಉದಾಹರಣೆ ಕೊಡ್ತೀನಿ... ಕೆಲಸ ಸರಿಯಾಗಿ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಒಬ್ಬ ಹುಡುಗನನ್ನ ಕೆಲಸದಿಂದ ತೆಗೆದರೆ, ಮಾಧ್ಯಮದ ಮುಂದೆ ಹೋಗ್ತೀನಿ, ಸಮಾಜದಲ್ಲಿ ಮರ್ಯಾದೆ ಕಳೆಯುತ್ತೇನೆ ಅಂತ ಆ ಹುಡುಗ ಕಲಾವಿದರನ್ನೇ ಹೆದರಿಸುತ್ತಾನೆ'' ಎಂದಿದ್ದಾರೆ.

ಸೋಷಿಯಲ್ ಮೀಡಿಯಾದಿಂದ ಸ್ಟಾರ್ ಗಳು ಅಭಿಮಾನಿಗಳ ಜೊತೆ ಕನೆಕ್ಟ್ ಆಗುತ್ತಿದ್ದಾರೆ. ಆದ್ರೆ, ಅದೇ ಸೋಷಿಯಲ್ ಮೀಡಿಯಾ ಈಗ ಎಡವಟ್ಟುಗಳಿಗೂ ಕಾರಣ ಆಗುತ್ತಿರುವುದು ದುರಂತ.

More from Filmibeat

English summary
''Celebrities life is not easy as you think'' says Yash in his Facebook Live.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X