For Quick Alerts
  ALLOW NOTIFICATIONS  
  For Daily Alerts

  ಮಾತು ಕೊಟ್ಟ ಸುದೀಪ್, ಭಾವುಕರಾದ ಜಗ್ಗೇಶ್, ಉಪ್ಪಿ ಏನಂದ್ರು.?

  By Bharath Kumar
  |

  ರಾಜಕೀಯ ಬೇಡ, ಪ್ರಜಾಕೀಯ ಬೇಕು ಎನ್ನುವ ರಿಯಲ್ ಸ್ಟಾರ್ ಉಪ್ಪಿ ''ಚುನಾವಣೆ ವ್ಯಾಪಾರ ಆದಾಗ.... ಏನಾಗುತ್ತೆ.? ಎಂದು ಟ್ವೀಟ್ ಮಾಡಿದ್ದಾರೆ.

  'ಸುದೀಪ್ ಸರ್ ನಿಮ್ಮನ್ನ ಭೇಟಿಯಾಗಲು ನಾನು ತುಂಬಾ ದಿನದಿಂದ ಕಾಯುತ್ತಿದ್ದೇನೆ. ನೀವು ಜಸ್ಟ್ ಹಾಯ್ ಎಂದು ಹೇಳಿ ಹೋಗಿಬಿಡ್ತೀರಾ, ನಿಮ್ಮ ಜೊತೆ ನಾವು ಹೆಚ್ಚು ಮಾತನಾಡಬೇಕು ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ''. ಇವರಿಗೆ ಸುದೀಪ್ ಕೊಟ್ಟ ಮಾತೇನು.?

  'ರಣಧೀರ' ಚಿತ್ರದ ಚಿತ್ರೀಕರಣ ನಡೆಯುವಾಗ ಸಂಗೀತ ನಿರ್ದೇಶಕ ಹಂಸಲೇಖ ಅವರು, ನಟ ಜಗ್ಗೇಶ್ ಗೆ ಮರೆಯಲಾಗದ ಸಹಾಯ ಮಾಡಿದ್ದರಂತೆ. ಏನದು.? ಇವರ ಜೊತೆ ಶ್ರದ್ಧಾ ಶ್ರೀನಾಥ್, ಶಾನ್ವಿ ಶ್ರೀವಾಸ್ತವ್, ಗಣೇಶ್ ಕೂಡ ಟ್ವೀಟ್ ಮಾಡಿದ್ದಾರೆ. ಹಾಗಿದ್ರೆ, ಈ ದಿನ ಯಾವ ಸ್ಟಾರ್, ಏನು ಟ್ವೀಟ್ ಮಾಡಿದ್ದಾರೆ ಎಂದು ನೋಡಿ...ಮುಂದೆ ಓದಿ....

  ಚುನಾವಣೆ ವ್ಯಾಪಾರ ಆದಾಗ.?

  ರಿಯಲ್ ಸ್ಟಾರ್ ಉಪೇಂದ್ರ ಅವರು ನಿರೀಕ್ಷೆಯಂತೆ ರಾಜಕೀಯದ ವಿರುದ್ಧ ಹೇಳಿಕೆಯನ್ನ ಪೋಸ್ಟ್ ಮಾಡಿದ್ದಾರೆ. ''ಚುನಾವಣೆ ವ್ಯಾಪಾರ ಆದಾಗ, ಶಿಕ್ಷಣ ವ್ಯಾಪಾರ ಆಗುತ್ತೆ....ಆರೋಗ್ಯ ವ್ಯವಸ್ಥೆ ವ್ಯಾಪಾರ ಆಗುತ್ತೆ.....ಆಡಳಿತ ವ್ಯವಸ್ಥೆ ವ್ಯಾಪಾರ ಆಗುತ್ತೆ...ವ್ಯಾಪಾರದ ರಾಜಕಾರಣ ಬೇಡ.....ವಿಚಾರಗಳ ಪ್ರಜಾಕಾರಣ ಬೇಕು...ನಿಮ್ಮ ಉಪ್ಪಿ'' ಎಂದು ಟ್ವೀಟ್ ಮಾಡಿದ್ದಾರೆ.

  'ಗುಡ್ ಮಾರ್ನಿಂಗ್' ಗಣೇಶ್

  ಗೋಲ್ಡನ್ ಸ್ಟಾರ್ ಗಣೇಶ್ ತಮ್ಮದೊಂದು ಬ್ಯೂಟಿಫುಲ್ ಫೋಟೋ ಹಾಕಿ, 'ಗುಡ್ ಮಾರ್ನಿಂಗ್' ಹೇಳುವ ಮೂಲಕ ಟ್ವೀಟರ್ ಫಾಲೋವರ್ಸ್ ಗೆ ಶುಭಾಶಯ ತಿಳಿಸಿದ್ದಾರೆ. ಅದನ್ನ ಬಿಟ್ಟರೇ ಬೇರೆ ಏನೂ ವಿಶೇಷವಿಲ್ಲ.

  'ಕಥೆಯೊಂದು ಶುರುವಾಗಿದೆ' ಎಂದ ಶಾನ್ವಿ

  ದಿಗಂತ್ ಅಭಿನಯದ 'ಕಥೆಯೊಂದು ಶುರುವಾಗಿದೆ' ಚಿತ್ರದ ಟ್ರೈಲರ್ ಪೋಸ್ಟ್ ಮಾಡುವ ಮೂಲಕ, ನಟ ದಿಗಂತ್ ಮತ್ತು ತಂಡಕ್ಕೆ ನಟಿ ಶಾನ್ವಿ ಶ್ರೀವಾಸ್ತವ್ ವಿಶ್ ಮಾಡಿದ್ದಾರೆ.

  ಹಂಸಲೇಖ ಬಗ್ಗೆ ಜಗ್ಗೇಶ್ ಮಾತು

  ಶೂಟಿಂಗ್ ವೇಳೆ ಸಂಗೀತ ನಿರ್ದೇಶಕ ಹಂಸಲೇಖ ಅವರು ಜಗ್ಗೇಶ್ ಅವರಿಗೆ ಸಹಾಯ ಮಾಡಿದ್ದರಂತೆ. ಈ ಬಗ್ಗೆ ಜಗ್ಗೇಶ್ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡು ಭಾವುಕರಾಗಿದ್ದಾರೆ. ಈ ವಿಡಿಯೋವನ್ನ ಹಂಚಿಕೊಂಡಿರುವ ಜಗ್ಗೇಶ್ ''ಹಂಸಲೇಖ ನನ್ನ ಹೃದಯದಲ್ಲಿ ನಿರಂತರ ಉಳಿದಿರುವ ಸ್ನೇಹಜೀವಿ'' ಎಂದು ಟ್ವೀಟ್ ಮಾಡಿದ್ದರು.

  ದಿಗಂತ್ ಸಿನಿಮಾ ಮೆಚ್ಚಿದ ಶ್ರದ್ಧಾ

  ದಿಗಂತ್ ಮತ್ತು ಪೂಜಾ ದೇವರಿಯಾ ಅಭಿನಯದ 'ಕಥೆಯೊಂದು ಶುರುವಾಗಿದೆ' ಚಿತ್ರದಲ್ಲಿ ಇಬ್ಬರು ನೋಡಲು ತುಂಬಾ ಮುದ್ದಾಗಿ ಕಾಣುತ್ತಿದ್ದೀರಾ. ಈ ಚಿತ್ರವನ್ನ ನೋಡಲಯ ಕಾಯುತ್ತಿದ್ದೇನೆ ಎಂದು ನಟಿ ಶ್ರದ್ಧಾ ಶ್ರೀನಾಥ್ ಟ್ವೀಟ್ ಮಾಡಿದ್ದಾರೆ.

  ಅಭಿಮಾನಿಗೆ ಪ್ರತಿಕ್ರಿಯಿಸಿದ ಸುದೀಪ್

  ''ಸುದೀಪ್ ಸರ್ ನಿಮ್ಮನ್ನ ಭೇಟಿಯಾಗಲು ನಾನು ತುಂಬಾ ದಿನದಿಂದ ಕಾಯುತ್ತಿದ್ದೇನೆ. ನೀವು ಜಸ್ಟ್ ಹಾಯ್ ಎಂದು ಹೇಳಿ ಹೋಗಿಬಿಡ್ತೀರಾ, ನಿಮ್ಮ ಜೊತೆ ನಾವು ಹೆಚ್ಚು ಮಾತನಾಡಬೇಕು ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸುದೀಪ್ ''ಖಂಡಿತವಾಗಿಯೋ ಒಮ್ಮೆ ಭೇಟಿ ಮಾಡೋಣ'' ಎಂದು ಉತ್ತರ ಕೊಟ್ಟಿದ್ದಾರೆ.

  English summary
  Tweet of the day - kiccha sudeep, shraddha srinath, shanvi srivastava, jaggesh, upendra, ganesh What did they tweet today (june 15th)?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X