»   » 'ವಿಶ್ವ ತಾಯಂದಿರ ದಿನ' ಸಂಭ್ರಮದಲ್ಲಿ ಖ್ಯಾತ ತಾರೆಯರು

'ವಿಶ್ವ ತಾಯಂದಿರ ದಿನ' ಸಂಭ್ರಮದಲ್ಲಿ ಖ್ಯಾತ ತಾರೆಯರು

Posted By:
Subscribe to Filmibeat Kannada

'ಅಮ್ಮ ಎಂದರೆ ಏನೋ ಹರುಷವು....ನಮ್ಮ ಬಾಳಿಗೆ ಅವಳೇ ದೈವವು....' ಒಂಬತ್ತು ತಿಂಗಳು ಹೊತ್ತು-ಹೆತ್ತು, ಸಾಕಿ-ಸಲಹುವ ತಾಯಂದಿರಿಗೆ ನಮನ ಸಲ್ಲಿಸಲು 'ಮದರ್ಸ್ ಡೇ' ಬಂದೇ ಬಿಟ್ಟಿದೆ. ಇಂದು (ಮೇ 8) ವಿಶ್ವ ಅಮ್ಮಂದಿರ ದಿನ.

ಮದರ್ಸ್ ಡೇ ಪ್ರಯುಕ್ತ ಇಂದು ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಬಾಲಿವುಡ್, ಟಾಲಿವುಡ್, ಕಾಲಿವುಡ್ ಹಾಗೂ ಸ್ಯಾಂಡಲ್ ವುಡ್ ತಾರೆಯರು ತಮಗೆ ಜನ್ಮ ನೀಡಿದ ತಾಯಿಗೆ ಸಲಾಂ ಹೊಡೆಯುತ್ತಿದ್ದಾರೆ. [ಮದರ್ಸ್ ಡೇ ವಿಶೇಷ: ಅಮ್ಮನ ಪ್ರೀತಿ ಸಾರುವ ಚೆಂದದ 10 ಕನ್ನಡ ಚಿತ್ರಗಳು]

ಕನ್ನಡ ನಟಿ ರಾಧಿಕಾ ಪಂಡಿತ್, ಹರಿಪ್ರಿಯಾ, ಮೇಘನಾ ರಾಜ್ ಸೇರಿದಂತೆ ಅನೇಕ ನಟೀಮಣಿಯರು, ತಮ್ಮ ತಾಯಿ ಜೊತೆಗೆ ಕ್ಲಿಕ್ಕಿಸಿಕೊಂಡಿರುವ ಫೋಟೋ ಟ್ವೀಟ್ ಮಾಡುವ ಮೂಲಕ 'ವಿಶ್ವ ತಾಯಿಯರ ದಿನ'ವನ್ನು ಆಚರಿಸುತ್ತಿದ್ದಾರೆ. ಹಾಗೇ, ಎಲ್ಲರಿಗೂ ಶುಭ ಕೋರುತ್ತಿದ್ದಾರೆ.

ಬನ್ನಿ ಯಾರ್ಯಾರು, ಏನೆಲ್ಲಾ ಟ್ವೀಟ್ ಮಾಡಿದ್ದಾರೆ ಅಂತ ನೋಡೋಣ, ಕೆಳಗಿರುವ ಸ್ಲೈಡ್ ಗಳಲ್ಲಿ....

ಶುಭಾಶಯ ಕೋರಿದ ನಟಿ ರಾಧಿಕಾ ಪಂಡಿತ್

''ಅಮ್ಮ' ಎನ್ನುವುದೇ ವಿಸ್ಮಯ ಪದ. ಎಲ್ಲಾ ತಾಯಿಯರಿಗೂ ಅಮ್ಮಂದಿರ ದಿನಾಚರಣೆಯ ಶುಭಾಶಯಗಳು'' ಅಂತ ತಮ್ಮ ತಾಯಿ ಮಂಗಳ ಜೊತೆ ಕ್ಲಿಕ್ ಮಾಡಿಸಿಕೊಂಡಿರುವ ಫೋಟೋ ಟ್ವೀಟ್ ಮಾಡಿದ್ದಾರೆ ನಟಿ ರಾಧಿಕಾ ಪಂಡಿತ್.

ಮಧು

''ಪ್ರತಿ ದಿನ ಅಮ್ಮನಾಗಿ ಪಾತ್ರ ನಿರ್ವಹಿಸುವುದು ನನಗೆ ಅತ್ಯಂತ ಖುಷಿ ಕೊಟ್ಟಿರುವ ವಿಚಾರ. ನನ್ನ ಮಕ್ಕಳೇ ನನಗೆ ಉಡುಗೊರೆ'' ಅಂತ ನಟಿ ಮಧು ಟ್ವೀಟ್ ಮಾಡಿದ್ದಾರೆ.

ಮೇಘನಾ ರಾಜ್

ಇನ್ನೂ ತಮ್ಮ ತಾಯಿ ಪ್ರಮೀಳಾ ಜೋಷಾಯಿ ಜೊತೆ ಬಾಲ್ಯದಲ್ಲಿ ತೆಗೆಸಿಕೊಂಡಿರುವ ಫೋಟೋ ಟ್ವೀಟ್ ಮಾಡಿ ಅಮ್ಮಂದಿರ ದಿನಾಚರಣೆಯ ಶುಭಾಶಯ ಕೋರಿದ್ದಾರೆ ನಟಿ ಮೇಘನಾ ರಾಜ್.

ಹರಿಪ್ರಿಯಾ

ತಮ್ಮ ತಾಯಿಗೆ ನಟಿ ಹರಿಪ್ರಿಯಾ ಧನ್ಯವಾದ ಕೋರಿರುವ ಪರಿ ಇದು.

ಅಲ್ಲು ಅರ್ಜುನ್.!

ತಮ್ಮ ತಾಯಿ ಜೊತೆ ಪ್ರಪ್ರಥಮ ಬಾರಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಮೂಲಕ ಮದರ್ಸ್ ಡೇ ಆಚರಿಸಿದ್ದಾರೆ ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್.

ಸಲ್ಮಾನ್ ಖಾನ್

ಎಲ್ಲರಿಗೂ 'ಹ್ಯಾಪಿ ಮದರ್ಸ್ ಡೇ' ಅಂತ ನಟ ಸಲ್ಮಾನ್ ಖಾನ್ ಟ್ವೀಟ್ ಮಾಡಿದ್ದಾರೆ.

ಖುಷ್ಬು

ತಮ್ಮ ತಾಯಿಗೆ ನಟಿ ಖುಷ್ಬು ಸಲಾಂ ಹೊಡೆದು 'ವಿಶ್ವ ತಾಯಂದಿರ ದಿನ'ವನ್ನು ಆಚರಿಸುತ್ತಿದ್ದಾರೆ.

ವಿಮಲಾ ರಾಮನ್

ನಟಿ ವಿಮಲಾ ರಾಮನ್ ಮದರ್ಸ್ ಡೇ ಆಚರಿಸುತ್ತಿರುವುದು ಹೀಗೆ....

English summary
Celebrities like Salman Khan, Allu Arjun, Radhika Pandit, Meghana Raj and others have taken their twitter account to wish for Mother's Day.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada