»   » ಶ್ರೀದೇವಿಯಂತೆ 'ಬಾತ್ ಟಬ್'ನಲ್ಲಿ ಸಾವುಗೀಡಾಗಿದ್ದ 6 ತಾರೆಯರು

ಶ್ರೀದೇವಿಯಂತೆ 'ಬಾತ್ ಟಬ್'ನಲ್ಲಿ ಸಾವುಗೀಡಾಗಿದ್ದ 6 ತಾರೆಯರು

Posted By:
Subscribe to Filmibeat Kannada

ಭಾರತದ ಮೊದಲ ಮಹಿಳಾ ಸೂಪರ್ ಸ್ಟಾರ್ ನಟಿ ಶ್ರೀದೇವಿಯ ಸಾವು ಪ್ರತಿಯೊಬ್ಬರನ್ನ ಕಾಡುತ್ತಿದೆ. ಬಾತ್ ಟಬ್ ನಲ್ಲಿ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾರೆ ಎಂಬುದನ್ನ ಯಾರೊಬ್ಬರು ಕೂಡ ಅರಗಿಸಿಕೊಳ್ಳಲಾಗುತ್ತಿಲ್ಲ. ಇದು ನಿಜವಾಗಿದ್ದರೂ ಅದನ್ನ ನಂಬಲು ಅಭಿಮಾನಿಗಳು ಸಿದ್ದವಿಲ್ಲ.

ಹೀಗೆ ಸಾಯಲು ಸಾಧ್ಯನಾ ಎಂದು ಪರೀಕ್ಷಿಸಲು ಸ್ವತಃ ಮಾಧ್ಯಮ ವರದಿಗಾರರು ಬಾತ್ ಟಬ್ ನಲ್ಲಿ ಪ್ರತ್ಯಕ್ಷವಾಗಿ ಇಳಿದು ಲೆಕ್ಕಾಚಾರ ಮಾಡಿ ಅನುಮಾನವನ್ನ ಬಗೆಹರಿಸಿಕೊಂಡಿದ್ದಾರೆ.

ಶ್ರೀದೇವಿ ಪಾರ್ಥಿವ ಶರೀರ ಭಾರತಕ್ಕೆ ತರಲು ಈ ವ್ಯಕ್ತಿಯೇ ಕಾರಣ

ಇಂತಹ ಸಾವುಗಳು ಇದೇ ಮೊದಲಲ್ಲ. ಇದಕ್ಕೆ ಮುಂಚೆ ಶ್ರೀದೇವಿಯಂತೆ ಬಾತ್ ಟಬ್ ನಲ್ಲಿ ಹಲವು ಸಿನಿತಾರೆಯರು ಕೊನೆಯುಸಿರೆಳೆದಿದ್ದಾರೆ. ಸಾಯಬಾರದ ವಯಸ್ಸಿನಲ್ಲಿ ಅನುಮಾನಸ್ಪದವಾಗಿ ಸಾವುಗೀಡಾಗಿದ್ದಾರೆ. ಹಾಗಿದ್ರೆ, ಶ್ರಿದೇವಿಗಿಂತ ಮೊದಲು ಬಾತ್ ಟಬ್ ನಲ್ಲಿ ನಿಧನರಾದ ಆ ಸೆಲೆಬ್ರಿಟಿಗಳು ಯಾರು.? ಮುಂದೆ ಓದಿ.....

ಜಿಮ್ ಮಾರಿಸನ್

ಅಮೆರಿಕದ 'ದಿ ಡೋರ್ಸ್' ರಾಕ್ ಬ್ಯಾಂಡ್‌ ನ ಪ್ರಮುಖ ಗಾಯಕ, ಸಂಯೋಜಕನಾಗಿದ್ದ ಜಿಮ್ ಮಾರಿಸನ್ ತನ್ನ 27ನೇ ವಯಸ್ಸಿನಲ್ಲಿ ಸಾವುಗೀಡಾಗಿದ್ದರು. 1971ರಲ್ಲಿ ಹೋಟೆಲ್ ರೂಂನ ಬಾತ್ ಟಬ್ ನಲ್ಲಿ ಅನುಮಾನಸ್ಪದವಾಗಿ ಮೃತಪಟ್ಟಿದ್ದರು. ವಿಚಾರಣೆ ನಡೆಸಿದ್ದ ಪೊಲೀಸರು ಅತಿಯಾದ ಮಾದಕ ಸೇವನೆಯಿಂದ ನಿಧನರಾಗಿದ್ದಾರೆ ಎಂದು ಪ್ರಕರಣ ದಾಖಲಿಸಿತ್ತು.

ಜೂಡಿ ಗಾರ್ಲೆಂಡ್

ನಟಿ, ಗಾಯಕಿಯಾಗಿದ್ದ ಜೂಡಿ ಗಾರ್ಲೆಂಡ್ ಅವರು 1969ರಲ್ಲಿ ಸ್ನಾನದ ಕೋಣೆಯಲ್ಲಿ ತೀರಿಕೊಂಡಿದ್ದರು. ಇವರ ಸಾವಿಗೂ ಡ್ರಗ್ಸ್ ಸೇವನೆ ಕಾರಣವೆನ್ನಲಾಗಿತ್ತು.

ವೈರಲ್ ವಿಡಿಯೋ: ಕೊನೆಯ ಜಾಹೀರಾತಿನಲ್ಲಿ ಮಿರ ಮಿರ ಮಿಂಚಿದ್ದ 'ಚಾಂದಿನಿ'

ವೈಟ್ನಿ ಹೌಸ್ಟನ್

2012ರಲ್ಲಿ ಅಮೆರಿಕದ ಪಾಪ್‌ ತಾರೆ ವೈಟ್ನಿ ಹೌಸ್ಟನ್ ಅವರ ಮೃತದೇಹ ಕ್ಯಾಲಿಫೊರ್ನಿಯದ ಹೋಟೆಲ್‌ ರೂಂನ ಬಾತ್‌ ಟಬ್ ನಲ್ಲಿ ಪತ್ತೆಯಾಗಿತ್ತು. ಈಕೆಯ ಸಾವು ಕೂಡ ಅತಿಯಾದ ಡ್ರಗ್ಸ್ ಸೇವನೆಯಿಂದ ಆಗಿದ್ದು ಎನ್ನುವುದು ಗಮನಿಸಬೇಕಾದ ಸಂಗತಿ.

ಬಾಬಿ ಕ್ರಿಸ್ಟಿನ ಬ್ರೌನ್‌ ಗಾಯಕಿ

ಬಾಬಿ ಕ್ರಿಸ್ಟಿನ ಬ್ರೌನ್‌ ಕೂಡ ಜನವರಿ 31, 2015 ರಂದು ಬಾತ್ ಟಬ್ ನಲ್ಲಿ ಮುಖಕೆಳಗಾಗಿ ಬಿದ್ದಿದ್ದರು. ಸುಮಾರು ಆರು ತಿಂಗಳ ನಂತರ ಕೋಮಾದಲ್ಲಿದ್ದ ಈಕೆ ಜುಲೈ 26, 2015 ರಂದು ಕೊನೆಯುಸಿರೆಳೆದರು. ಇವರ ದೇಹದಲ್ಲೂ ಮದ್ಯ ಮತ್ತು ವೈದ್ಯರಿಂದ ಸೂಚಿಸಲ್ಪಟ್ಟ ಕೆಲವು ಔಷಧಗಳು ಪತ್ತೆಯಾಗಿದ್ದವು.

'ಅತಿಲೋಕ ಸುಂದರಿ'ಗೆ ಅಂತಿಮ ನಮನ ಸಲ್ಲಿಸಿದ 'ಜಗದೇಕ ವೀರ'

ಫ್ರೆಂಚ್ ಸಿಂಗರ್ ಕ್ಲೌಡ್ ಫ್ರಾಂಕೋಯಿಸ್

ಫ್ರೆಂಚ್ ಸಿಂಗರ್ ಕ್ಲೌಡ್ ಫ್ರಾಂಕೋಯಿಸ್ ತಮ್ಮ ಬಾತ್ ಟಬ್ ನಲ್ಲಿ ಬಲ್ಬ್ ಹಾಕಲು ಮುಂದಾಗಿ ಕರೆಂಟ್ ಪಾಸ್ ಆಗಿ ಸಾವನ್ನಪ್ಪಿದ್ದರು.

ಗಾಯಕನ ಎಲ್ವಿಸ್ ಪ್ರೀಸ್ಲಿ

ಖ್ಯಾತ ಗಾಯಕ ಎಲ್ವಿಸ್ ಪ್ರೀಸ್ಲಿ ಅವರು ಸಾವು ಕೂಡ ಬಾತ್ ರೂಂನಲ್ಲಿ ಸಂಭವಿಸಿತ್ತು. 42ನೇ ವರ್ಷದ ಪ್ರೀಸ್ಲಿ ಬಾತ್ ರೂಂನಲ್ಲಿ ಮಲಗಿದ್ದ ರೀತಿಯಲ್ಲಿ ಸಾವುಗೀಡಾಗಿದ್ದರು.

ಶ್ರೀದೇವಿ ಸಾವು

ಫೆಬ್ರವರಿ 24 ಮಧ್ಯರಾತ್ರಿ ದುಬೈನ ಹೋಟೆಲ್ ರೂಂನಲ್ಲಿರುವ ಬಾತ್ ಟಬ್ ನಲ್ಲಿ ಶ್ರೀದೇವಿ ಮೃತಪಟ್ಟಿದ್ದಾರೆ ಎಂಬ ಸುದ್ದಿ ಹೊರಬಿತ್ತು. ಒಂದು ಮೂಲಗಳ ಪ್ರಕಾರ ಅತಿಯಾದ ಮದ್ಯಸೇವನೆಯಿಂದ ಶ್ರೀದೇವಿ ಬಾತ್ ಟಬ್ ನಲ್ಲಿ ಮುಳುಗಿ ಸಾವನ್ನಪಿದ್ದಾರೆ ಎನ್ನಲಾಗಿದೆ.

'ಬಾತ್ ಟಬ್'ನಲ್ಲಿ ಮಲಗಿ ಶ್ರೀದೇವಿ ಸಾವಿನ ಬಗ್ಗೆ ವರದಿ ನೀಡಿದ ಪತ್ರಕರ್ತ!

ಶ್ರೀದೇವಿಯ ಅಂತಿಮ ದರ್ಶನ ಪಡೆದ ಸಿನಿತಾರೆಯರು: ಯಾರೆಲ್ಲಾ ಹೋಗಿದ್ದರು.?

ಬೋನಿ ಕಪೂರ್ ಮೊದಲ ಪತ್ನಿ ಮತ್ತು ಶ್ರೀದೇವಿ ಇಬ್ಬರೂ ದುರಾದೃಷ್ಟವಂತರೇ.! ಯಾಕೆ.?

English summary
Sridevi, 54, passed away on Saturday night after she accidentally drowned in a bathtub after losing her consciousness. Bathtub deaths are not uncommon: List of celebrities who died in a bathtub.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada