For Quick Alerts
  ALLOW NOTIFICATIONS  
  For Daily Alerts

  ಕವನ ಬರೆದು ಹಂಸಲೇಖ ಹುಟ್ಟುಹಬ್ಬಕ್ಕೆ ಶುಭಕೋರಿದ ಜಗ್ಗೇಶ್

  |

  ಕನ್ನಡ ಚಿತ್ರರಂಗದ ಸಂಗೀತ ಸಾಮ್ರಾಟ, ದೇಸಿ ದೊರೆ, ನಾದಬ್ರಹ್ಮ ಹಂಸಲೇಖ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಚಿತ್ರರಂಗದ ಆಪ್ತರು ಹಾಗೂ ರಾಜಕಾರಣಿಗಳು ಶುಭಕೋರಿದ್ದಾರೆ.

  70ನೇ ವರ್ಷದ ಜನುಮದಿನ ಆಚರಿಸಿಕೊಳ್ಳುತ್ತಿರುವ ದಿಗ್ಗಜ ತಂತ್ರಜ್ಞನ ಬಗ್ಗೆ ಹಿರಿಯ ನಟ ಜಗ್ಗೇಶ್ ಸಂತಸ ಹಂಚಿಕೊಂಡಿದ್ದಾರೆ. ತಮ್ಮದೇ ಶೈಲಿಯಲ್ಲಿ ಕವನ ಬರೆಯುವುದರ ಮೂಲಕ ಹಂಸಲೇಖ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ.

  ನಾದಬ್ರಹ್ಮನಿಗೆ 70ರ ಸಂಭ್ರಮ: 'ಹಂಸಲೇಖ' ಹೆಸರು ಬಂದದ್ದು ಹೇಗೆ?ನಾದಬ್ರಹ್ಮನಿಗೆ 70ರ ಸಂಭ್ರಮ: 'ಹಂಸಲೇಖ' ಹೆಸರು ಬಂದದ್ದು ಹೇಗೆ?

  ''ಬರದ್ಬುಟ್ರೆ ಹಾಡು ಹಂಸ

  ಅದುರೋಯ್ತದೆ ಮೈಕು!

  ಅದರಲ್ಲಿ ನಂಗಿಷ್ಟದ್ದು ಹಾಡು ರಂಗು ಕಲ್ಸೂ ನಂಗು ಬೈಕು!

  ಹೊಂಬಾಳೆ ಹಾಡಂತು ಒಂಥರ ಮೈಸೂರ್ ಪಾಕು!

  ಹುಟ್ಟುದ್ರೆ ಕನ್ನಡ್ನಾಡಲ್ಲಿ ಮಾತ್ರ

  ಕನ್ನಡ ಅಂತ ಮೂಗ್ ಮುರ್ದೌವ್ಗೆ

  ಬಾಕು!

  ಲೇಖ್ನೀ ಹಿಡ್ದು ಎದ್ದ್ ಬಂದ್ ಬರ್ದು ಕನ್ನಡ್ದ್ ಎದೆಗೆ ಹಾಕ್ ದೇವ್ರು ಲಾಕು!

  ಹುಟ್ಟಿದ್ ದಿನಕ್ಕೆ ನಮ್ದು ಒಂದ್ ನಮಸ್ಕಾರ'' ಎಂದು ಜಗ್ಗೇಶ್ ಶುಭಕೋರಿದರು. ಮುಂದೆ ಓದಿ...

  ಸರಸ್ವತಿ ಪುತ್ರ, ಅಕ್ಷರಗಳ ಮಿತ್ರ

  ಸರಸ್ವತಿ ಪುತ್ರ, ಅಕ್ಷರಗಳ ಮಿತ್ರ

  ''ಸರಸ್ವತಿ ಪುತ್ರ, ಅಕ್ಷರಗಳ ಮಿತ್ರ.. ಕಲೆಗೆ ಸಂಗೀತಕ್ಕೆ ತುಂಬ ಹತ್ರ.. ಇವರು ಎಂದಿಗೂ ಭಾಷೆ ಭಾವನೆಗಳಿಗೆ ದೇಸಿ ಸೂತ್ರ ಅವರೇ ಶ್ರೀ ಹಂಸಲೇಖ ಅನ್ನೋ ಜ್ಞಾನದ, ತಂತ್ರಜ್ಞಾನದ, ನಾದದ, ವೇದದ, ಪದ್ಯದ, ಗದ್ಯದ, ಜಾನಪದದ, ಜನಪದದ ಸೊಗಡಿನ ಪ್ರತಿಭಾ ಸಾಗರ ಹುಟ್ಟು ಹಬ್ಬದ ಶುಭಾಶಯಗಳು ಗುರುಗಳೇ'' ಎಂದು ನಿರ್ದೇಶಕ ರಘುರಾಮ್ ಶುಭಾಶಯ ತಿಳಿಸಿದರು.

  ಚಂದನವನಕ್ಕೆ ಹೊಸ ಮೆರುಗು

  ಚಂದನವನಕ್ಕೆ ಹೊಸ ಮೆರುಗು

  ''ಅತ್ಯದ್ಭುತ ಸಂಗೀತ ಸಂಯೋಜನೆ ಹಾಗೂ ಅರ್ಥಗರ್ಭಿತ ಸಾಹಿತ್ಯ ರಚನೆಯ ಮೂಲಕ ಕನ್ನಡದ ಚಂದನವನಕ್ಕೆ ಹೊಸ ಮೆರುಗು ನೀಡಿದ ಖ್ಯಾತ ಸಂಗೀತ ನಿರ್ದೇಶಕ, ಚಿತ್ರ ಸಾಹಿತಿ, ನಾದಬ್ರಹ್ಮ ಡಾ. ಹಂಸಲೇಖ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.'' ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಹಂಸಲೇಖರಿಗೆ ಶುಭಕೋರಿದ್ದಾರೆ.

  ಹಂಸಲೇಖಗೆ ರಾಷ್ಟ್ರ-ರಾಜ್ಯ ಪ್ರಶಸ್ತಿ ತಂದುಕೊಟ್ಟ ಸಿನಿಮಾ, ಗೀತೆಗಳುಹಂಸಲೇಖಗೆ ರಾಷ್ಟ್ರ-ರಾಜ್ಯ ಪ್ರಶಸ್ತಿ ತಂದುಕೊಟ್ಟ ಸಿನಿಮಾ, ಗೀತೆಗಳು

  ಸಂಗೀತ ಲೋಕದ ದಿಗ್ಗಜ

  ಸಂಗೀತ ಲೋಕದ ದಿಗ್ಗಜ

  ''ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕರು, ಸ್ವರ ಮಾಂತ್ರಿಕ, ಸಂಗೀತ ಲೋಕದ ದಿಗ್ಗಜ, ನಾದ ಬ್ರಹ್ಮ ಡಾ ಹಂಸಲೇಖ ಅವರಿಗೆ‌ ಹುಟ್ಟುಹಬ್ಬದ ಶುಭಾಶಯಗಳು'' ಎಂದು ಸಚಿವ ಆರ್ ಅಶೋಕ ಶುಭಕೋರಿದರು.

  Hamsalekha - ರವಿಚಂದ್ರನ್ ದಾಖಲೆ ಯಾರಿಂದಲೂ ಅಳಿಸೋಕೆ ಸಾಧ್ಯವಿಲ್ಲ | Oneindia Kannada
  ಗಾಯಕ ರಾಜೇಶ್ ಕೃಷ್ಣನ್

  ಗಾಯಕ ರಾಜೇಶ್ ಕೃಷ್ಣನ್

  ''ನಾದಬ್ರಹ್ಮ ಡಾ ಹಂಸಲೇಖ ಅವರಿಗೆ 70ನೇ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.'' ಎಂದು ಗಾಯಕ ರಾಜೇಶ್ ಕೃಷ್ಣನ್ ವಿಶ್ ಮಾಡಿದ್ದಾರೆ.

  English summary
  Hamsalekha Birthday: Actor Jaggesh, Singer Rajesh krishnan, politician R Ashok and Bc patil wishes Music Director Hamsalekha on His Birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X