»   » ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಗೆ ಕಿಚ್ಚ ಸುದೀಪ್ ಅಂಡ್ ಟೀಂ ರೆಡಿ

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಗೆ ಕಿಚ್ಚ ಸುದೀಪ್ ಅಂಡ್ ಟೀಂ ರೆಡಿ

Posted By:
Subscribe to Filmibeat Kannada

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಗೆ ಕ್ಷಣಗಣನೆ ಶುರುವಾಗಿದೆ. ತಾರೆಗಳು ಮೈದಾನಕ್ಕಿಳಿಯುವ ಸಮಯ ಬಂದೇ ಬಿಟ್ಟಿದೆ. ಕಿಚ್ಚ ಸುದೀಪ್ ಅಂಡ್ ಟೀಂ ಆಟಕ್ಕೂ ಸಿದ್ಧ ಸ್ನೇಹಕ್ಕೂ ಬದ್ಧರಾಗಿ ನಿಂತಿದ್ದಾರೆ. ಸಿಸಿಎಲ್ 5ನೇ ಸೀಸನ್ ಇದೇ ಜನವರಿ 10ರಿಂದ ಆರಂಭವಾಗುತ್ತಿದೆ.

ತಾರೆಗಳ ರಂಗಿನಾಟ ನೋಡಲು, ಈ ಅಪೂರ್ವ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ನಿರೀಕ್ಷಿಸುವಂತಾಗಿದೆ. ಕಳೆದ ನಾಲ್ಕು ಸೀಸನ್ ಗಳಲ್ಲಿ ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಖಡಕ್ ಆಗಿ ಆಡುತ್ತಾ ಬಂದಿದೆ. [ಅಂಬರೀಷ್ ಗಾಗಿ ಸಿಸಿಎಲ್ 4 ಕಪ್ ಗೆದ್ದ ಕರ್ನಾಟಕ ಬುಲ್ಡೋಜರ್ಸ್]

Celebrity Cricket League 5 action & Drama starts 10th January

ಸತತ ಎರಡು ಬಾರಿ ಕರ್ನಾಟಕ ಬುಲ್ಡೋಜರ್ಸ್ ತಂಡ ಚಾಂಪಿಯನ್ ಎನ್ನಿಸಿಕೊಂಡಿದೆ. ಈ ಬಾರಿಯೂ ಗೆದ್ದರೆ ಹ್ಯಾಟ್ರಿಕ್ ವಿಕ್ರಮ ಸಾಧಿಸಲಿದೆ. ಕರ್ನಾಟಕ ಬುಲ್ಡೋಜರ್ಸ್ ತಂಡದ ಥೀಮ್ ಸಾಂಗ್ ಸಹ ಬಿಡುಗಡೆಯಾಗಿದ್ದು, "ನನ್ನ ಹೊಡೆತಾನೇ ನನ್ನ ಬಿಸಿನೆಸ್ ಕಾರ್ಡು" ಎಂಬ ಡೈಲಾಗನ್ನೂ ಸುದೀಪ್ ಹೊಡೆದಿದ್ದಾರೆ.

ಆರಂಭದಲ್ಲಿ ನಾಲ್ಕೇ ನಾಲ್ಕು ತಂಡಗಳಿಂದ ಆರಂಭವಾದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಇದೀಗ ಎಂಟು ತಂಡಗಳನ್ನು ಒಳಗೊಂಡಿದೆ. ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಎರಡು ಬಾರಿ ಚಾಂಪಿಯನ್ ಎನ್ನಿಸಿಕೊಂಡಿದೆ.

Celebrity Cricket League 5 action & Drama starts 10th January2

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನ ಬಹುತೇಕ ಪಂದ್ಯಾವಳಿಗಳು ಬೆಂಗಳೂರು, ಹೈದರಾಬಾದ್ ಹಾಗೂ ಚೆನ್ನೈನಲ್ಲಿ ನಡೆದಿವೆ. ಇದೇ ಜನವರಿ 10ರಂದು ಸಂಜೆ 7 ಗಂಟೆಗೆ ಉದಯ ವಾಹಿನಿಯಲ್ಲಿ ನೇರಪ್ರಸಾರವಾಗಲಿದೆ.

ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಎಂದಿನಂತೆ ಧ್ರುವ್, ಅಭಿಮನ್ಯು, ತರುಣ್ ಚಂದ್ರ, ಚಿರಂಜೀವಿ ಸರ್ಜಾ, ದಿಗಂತ್, ಪ್ರದೀಪ್, ರಾಹುಲ್, ರಾಜೀವ್, ತರುಣ್ ಸುಧೀರ್ ಸೇರಿದಂತೆ ಮುಂತಾವರಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಮುಖ ಆಕರ್ಷಣೆಯಾಗಿ ನಿಲ್ಲಲಿದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
The much awaited fifth edition of the Celebrity Cricket League is all set to start from January 10, 2015. The action and drama liv on Udaya and Rishtey channels. Under Sudeep captaincy Karnataka Bulldozers team ready for the match.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada