»   » ಜನವರಿಯಲ್ಲಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಹೊಸ ಸೀಸನ್

ಜನವರಿಯಲ್ಲಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಹೊಸ ಸೀಸನ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್, ಬಾಲಿವುಡ್, ಟಾಲಿವುಡ್, ಕೋಲಿವುಡ್, ಮೋಲಿವುಡ್ ತಾರೆಗಳು ಮತ್ತೊಮ್ಮೆ ಮೈದಾನಕ್ಕಿಳಿಯುವ ಸಮಯ ಬಂದಿದೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಹೊಸ ಆವೃತ್ತಿ ಸೀಸನ್ 5ಗೆ ಸಿದ್ಧತೆಗಳು ಭರದಿಂದ ಸಾಗಿವೆ.

ಬಹುಶಃ ಜನವರಿ 10ದಿಂದ ಹೊಸ ಸೀಸನ್ ಆರಂಭವಾಗುವ ಸಾಧ್ಯತೆಗಳಿವೆ. ಕಳೆದ ಬಾರಿಯಂತೆ ಈ ಸಲವು ಎಂಟು ತಂಡಗಳ ನಡುವೆ ಸ್ಪರ್ಧೆ ನಡೆಸಲು ಸಿಸಿಎಲ್ ಆಯೋಜಕರು ಮುಂದಾಗಿದ್ದಾರೆ. ಆದರೆ ತಾರೆಗಳ ದಿನಾಂಕವನ್ನು ಹೊಂದಿಸುವುದು ಆಯೋಜಕರ ಪಾಲಿಗೆ ಕಗ್ಗಂಟಾಗಿ ಪರಿಣಮಿಸಿದೆ ಎನ್ನುತ್ತವೆ ಮೂಲಗಳು.

Celebrity Cricket League 5th Edition from 10th January

ಆರಂಭದಲ್ಲಿ ನಾಲ್ಕೇ ನಾಲ್ಕು ತಂಡಗಳಿಂದ ಆರಂಭವಾದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಇದೀಗ ಎಂಟು ತಂಡಗಳನ್ನು ಒಳಗೊಂಡಿದೆ. ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಎರಡು ಬಾರಿ ಚಾಂಪಿಯನ್ ಎನ್ನಿಸಿಕೊಂಡಿದೆ.

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನ ಬಹುತೇಕ ಪಂದ್ಯಾವಳಿಗಳು ಬೆಂಗಳೂರು, ಹೈದರಾಬಾದ್ ಹಾಗೂ ಚೆನ್ನೈನಲ್ಲಿ ನಡೆದಿವೆ. ಇದೀಗ ಐದನೇ ಆವೃತ್ತಿಗೆ ಭರದ ಸಿದ್ಧತೆಗಳು ನಡೆಯುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಹೊಸ ಆವೃತ್ತಿಯ ವಿವರಗಳು ಹೊರಬೀಳಲಿವೆ. (ಏಜೆನ್ಸೀಸ್)

English summary
Sources says that, the fifth edition of the Celebrity Cricket League is likely to be held from January 10. The official announcement of the fifth edition will be announced in the next few days.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada