»   » ಸಿಸಿಎಲ್ ನಾಲ್ಕನೇ ಆವೃತ್ತಿ ಭರ್ಜರಿ ಆರಂಭ

ಸಿಸಿಎಲ್ ನಾಲ್ಕನೇ ಆವೃತ್ತಿ ಭರ್ಜರಿ ಆರಂಭ

Posted By:
Subscribe to Filmibeat Kannada

ಅಂತೂ ಇಂತೂ ಮತ್ತೆ ಸೆಲೆಬ್ರೆಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಜ್ವರ ಶುರುವಾಗಿದೆ. ಹೊಸ ವರ್ಷದ ಆರಂಭದಲ್ಲೇ ಭರ್ಜರಿ ಮನರಂಜನೆ ನೀಡಲು ಸಿಸಿಎಲ್ ರೆಡಿಯಾಗಿದೆ. ಸಿಸಿಎಲ್ ಬರಮಾಡಿಕೊಳ್ಳಲು ಸಿನಿಪ್ರೇಮಿಗಳು ಸೇರಿದಂತೆ ಕ್ರೀಡಾಃಭಿಮಾನಿಗಳೂ ತುದಿಗಾಲ ಮೇಲೆ ನಿಂತಿದ್ದಾರೆ.

ಚಾನ್ಸೆರಿ ಪೆವಿಲಿಯನ್‍ನಲ್ಲಿ ಟೀಂ ಮಾಲಿಕ ಅಶೋಕ್ ಖೇಣಿ ಟೀಂ ಸದಸ್ಯರ ಜೊತೆ ಪತ್ರಿಕಾಗೋಷ್ಠಿ ನಡೆಸಿದರು. ಟೀಂ ಕ್ಯಾಪ್ಟನ್ ಕಿಚ್ಚ ಸುದೀಪ್, ದರ್ಶನ್, ತರುಣ್ ಚಂದ್ರ, ಸುನಿಲ್ ರಾವ್, ದಿಗಂತ್, ಜೆ.ಕಾರ್ತಿಕ್, ಭಾಸ್ಕರ್, ರಾಜೀವ್, ಪ್ರದೀಪ್, ಚೇತನ್ ಹಾಗೂ ಇನ್ನಿತರ ಟೀಂ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು. [ಕರ್ನಾಟಕ ಬುಲ್ಡೋಜರ್ಸ್ ಗೆ ದರ್ಶನ್ ಓಪನರ್]

ಕಿಚ್ಚ ಸುದೀಪ್ ಒಳ್ಳೆ ಬ್ಯಾಟ್ಸ್‍ಮನ್ ಮತ್ತು ವಿಕೆಟ್‍ಕೀಪರ್. ನಮ್ಮ ಕರ್ನಾಟಕ ಬುಲ್ಡೋಜರ್ ತಂಡ ಸುದೀಪ್ ಕೈಯಲ್ಲಿ ಇದೆ. ನಮ್ಮ ತಂಡದಲ್ಲಿ ಒಳ್ಳೆಯ ಬ್ಯಾಟ್ಸ್‍ಮನ್, ಬೌಲರ್‍ಗಳು ಇದ್ದಾರೆ. ನಮ್ಮ ತಂಡ ಈ ಬಾರಿಯೂ ವಿನ್ ಆಗುತ್ತೆ ಅಂತ ತಂಡದ ಮಾಲಿಕ ಅಶೋಕ್ ಖೇಣಿ ತಿಳಿಸಿದರು.

ಕಳೆದ ಮೂರನೇ ಆವೃತ್ತಿಯಲ್ಲಿ ನಡೆದ ಸಿಸಿಎಲ್‍ನಲ್ಲಿ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ಸಿಸಿಎಲ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಇದೀಗ ಶುರುವಾಗಲಿರುವ ನಾಲ್ಕನೇ ಆವೃತ್ತಿಯಲ್ಲಿ ಯಾರು ಚಾಂಪಿಯನ್ ಆಗುತ್ತಾರೆ ಎಂಬ ಕುತೂಹಲ ಎಲ್ಲೆಡೆ ಮೂಡಿದೆ.

Taru in ccl

ಜ. 26 ರ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಲ್ಲಿ ಕೇರಳ ಸ್ಟ್ರೆಕರ್ಸ್ ಹಾಗೂ ತೆಲುಗು ವಾರಿಯರ್ಸ್ ನಡುವೆ ಪಂದ್ಯ ನಡೆಯಲಿದ್ದು. ಆ ಬಳಿಕ ಸಂಜೆ 7 ಗಂಟೆಗೆ ಕರ್ನಾಟಕ ಬುಲ್ಡೋಜರ್ಸ್ ತಂಡ ಬೆಂಗಾಲ್ ಟೈಗರ್ಸ್ ತಂಡವನ್ನು ಎದುರಿಸಲಿದೆ. ಜನವರಿ 25 ರಿಂದ ಫೆಬ್ರವರಿ 23 ರವರೆಗೂ ನಡೆಯಲಿರುವ ಸಿಸಿಎಲ್ ಪಂದ್ಯಾವಳಿ ಮುಂಬೈ, ಚೆನ್ನೈ, ಕೊಚ್ಚಿ, ಬೆಂಗಳೂರು, ರಾಂಚಿ ಮತ್ತು ದುಬೈನಲ್ಲಿ ಜರುಗಲಿದೆ. (ಒನ್ ಇಂಡಿಯಾ ಕನ್ನಡ)

English summary
Season IV of the Celebrity Cricket League is all set to take off. Sunday (Jan 26). Mr. Ashok Kheny, the proud owner of the Karnataka Team and Chairman AKK Entertainment announced the members of the team representing Karnataka at a press conference at Chancery Pavilion, Residency Road. This announcement was made along with Team Captain Kichcha Sudeep and rest of the Team members.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada