»   » ಮಲಯಾಳಂ 'ಕಾ ಬಾಡಿಸ್ಕೇಪ್ಸ್' ಚಿತ್ರ ಪ್ರದರ್ಶನಕ್ಕೆ ಸಿಬಿಎಫ್ ಸಿ ತಿರಸ್ಕಾರ

ಮಲಯಾಳಂ 'ಕಾ ಬಾಡಿಸ್ಕೇಪ್ಸ್' ಚಿತ್ರ ಪ್ರದರ್ಶನಕ್ಕೆ ಸಿಬಿಎಫ್ ಸಿ ತಿರಸ್ಕಾರ

Posted By:
Subscribe to Filmibeat Kannada

ಜಯನ್ ಕೆ ಚೆರಿಯನ್ ನಿರ್ದೇಶನದ 'ಕಾ ಬಾಡಿಸ್ಕೇಪ್ಸ್' ಸಿನಿಮಾವನ್ನು ಪ್ರಮಾಣ ಪತ್ರಕ್ಕಾಗಿ ಕಳೆದ ವರ್ಷ (2016) ಏಪ್ರಿಲ್ ನಲ್ಲಿ ತಿರುವನಂತಪುರಂನ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ(ಸಿಬಿಎಫ್ ಸಿ)ಗೆ ಸಲ್ಲಿಸಲಾಗಿತ್ತು. ಆದರೆ ಈಗ ಚಿತ್ರಕ್ಕೆ ಪ್ರಮಾಣ ಪತ್ರ ನೀಡಲು ಸಿಬಿಎಫ್ ಸಿ ನಿರಾಕರಿಸಿದೆ.

'ಕಾ ಬಾಡಿಸ್ಕೇಪ್ಸ್' ಚಿತ್ರ ಕ್ಯಾಲಿಕಟ್ ನ ಮೂವರು ಯುವ ಜನರ ಜೀವನ ಕುರಿತ ಚಿತ್ರಕಥೆ ತಯಾಗಿದೆ. "ಹ್ಯಾರಿಸ್ - ಸಲಿಂಗ ಪೇಂಟರ್, ವಿಷ್ಣು - ಸ್ಥಳೀಯ ಕಬ್ಬಡಿ ಆಟಗಾರ ಮತ್ತು ಇವರ ಸ್ನೇಹಿತೆ ಸಿಯಾ, ಪ್ರಬಲ ಸ್ತ್ರೀವಾದಗಳನ್ನು ಪಾಲಿಸಲು ನಿರಾಕರಿಸಿ ಭಾರತೀಯ ಸಂಪ್ರದಾಯ ಕುಟುಂಬದಲ್ಲಿ ಸಂತೋಷ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ಈ ಸಿನಿಮಾದ ಚಿತ್ರಕಥೆ.

Censor Board Says It Will Not Allow Screening of ‘Ka Bodyscapes’

ಅಂದಹಾಗೆ ಮಲಯಾಳಂ ಸಿನಿಮಾ 'ಕಾ ಬಾಡಿಸ್ಕೇಪ್ಸ್' ಗೆ ಪ್ರಮಾಣ ಪತ್ರ ನೀಡಲು ನಿರಾಕರಿಸಿರುವ ಸಿಬಿಎಫ್ ಸಿ "ಚಿತ್ರದ ವಿಷಯ ಸಲಿಂಗಿಗಳು ಮತ್ತು ಸಲಿಂಗ ಕಾಮಿಗಳ ಸಂಬಂಧಗಳ ಕುರಿತು ವೈಭವೀಕರಿಸಲಾಗಿದೆ, ಅಶ್ಲೀಲತೆಗಳಿಂದ ಕೂಡಿದೆ", ಮತ್ತು "ಹನುಮಂತನನ್ನು ತೋರಿಸಿ ಹಿಂದೂ ಧರ್ಮವನ್ನು ನಿಂದಿಸುವಂತೆ ಚಿತ್ರಿಸಲಾಗಿದೆ" ಎಂದು ಹೇಳಿದೆ.

ತಿರುವನಂತಪುರಂ'ನ ಸಿಬಿಎಫ್ ಸಿ ಎರಡನೇ ಪರಿಷ್ಕರಣಾ ಸಮಿತಿ 'ಕಾ ಬಾಡಿಸ್ಕೇಪ್ಸ್' ಚಿತ್ರಕ್ಕೆ ಪ್ರಮಾಣ ಪತ್ರ ನೀಡಲು ನಿರಾಕರಿಸಿದ್ದು, ಪ್ರಾದೇಶಿಕ ಅಧಿಕಾರಿಯಾದ ಪ್ರತಿಭಾ ಎ ಅವರು ಸಹಿ ಹಾಕಿರುವ ತಿರಸ್ಕೃತ ಪ್ರಮಾಣ ಪತ್ರ, ಚಿತ್ರ ನಿರ್ಮಾಪಕ ಜಯನ್ ಕೆ ಚೆರಿಯನ್ ಅವರ ಕೈಗೆ ತಲುಪಿದೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಜಯನ್ ಕೆಲವು ಬದಲಾವಣೆಗಳೊಂದಿಗೆ ಚಿತ್ರಕ್ಕೆ ಪ್ರಮಾಣ ಪತ್ರ ಪಡೆಯಲು ಕೇರಳ ಹೈಕೋರ್ಟ್ ವಿರುದ್ಧ ಹೋಗುವುದಾಗಿ ಹೇಳಿದ್ದಾರೆ.

"'ಕಾ ಬಾಡಿಸ್ಕೇಪ್ಸ್' ಸಿನಿಮಾವನ್ನು ಮೊದಲು ತಿರುವನಂತಪುರಂನ ಸಿಬಿಎಫ್ ಸಿ ಗೆ 2016 ರ ಏಪ್ರಿಲ್ ನಲ್ಲಿ ಸಲ್ಲಿಸಲಾಗಿತ್ತು. ಆದರೆ ಅವರು ಸರ್ಟಿಫಿಕೇಟ್ ನೀಡಲು ನಿರಾಕರಿಸಿದ್ದರು. ಮತ್ತು ಚೆನ್ನೈ ಪುನರ್ ಪರಿಶೀಲನೆ ಸಮಿತಿಗೆ ನೀಡಲಾಗಿತ್ತು' ಎಂದು ಚೆರಿಯನ್ ಹೇಳಿದ್ದಾರೆ. ಅಂದಹಾಗೆ 'ಕಾ ಬಾಡಿಸ್ಕೇಪ್ಸ್' ಚಿತ್ರಕ್ಕೆ ಜಯನ್ ಕೆ ಚೆರಿಯನ್ ಅವರೇ ಚಿತ್ರಕಥೆ ರೆದು ನಿರ್ದೇಶನದ ಜೊತೆಗೆ ನಿರ್ಮಾಣ ಅವರೇ ಮಾಡಿದ್ದಾರೆ. ಸುನಿಲ್ ಕುಮಾರ್ ಪಿಕೆ ಅವರು ಸಂಗೀತ ಸಂಯೋಜನೆ ನೀಡಿದ್ದಾರೆ.

English summary
Jayan K. Cheriyan directorial Malayalam Movie ‘Ka Bodyscapes’ has Refused to screening by CBFC.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada