»   » ಟ್ರಕ್ ಡ್ರೈವರ್ ಆದ ಸೆಂಚುರಿ ಸ್ಟಾರ್ ಶಿವಣ್ಣ

ಟ್ರಕ್ ಡ್ರೈವರ್ ಆದ ಸೆಂಚುರಿ ಸ್ಟಾರ್ ಶಿವಣ್ಣ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಮೋಸ್ಟ್ ಬಿಜಿಯೆಸ್ಟ್ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ಟಗರು' ಚಿತ್ರದ ಎರಡನೇ ಹಂತದ ಚಿತ್ರೀಕರಣ ವೇಗವಾಗಿ ಸಾಗುತ್ತಿದ್ದು, ಕ್ಲೈಮ್ಯಾಕ್ಸ್ ಶೂಟಿಂಗ್ ನೆಡೆಯುತ್ತಿದೆ.[ಚಿತ್ರಗಳು: 'ಟಗರು' ಶೂಟಿಂಗ್ ನಲ್ಲಿ ಶಿವಣ್ಣ, ಮಾನ್ವಿತಾ ಸ್ಟೈಲಿಶ್ ಲುಕ್!]

ದುನಿಯಾ ಸೂರಿ ಆಕ್ಷನ್ ಕಟ್ ಹೇಳುತ್ತಿರುವ 'ಟಗರು' ಚಿತ್ರಕ್ಕಾಗಿ ಪೊಲೀಸ್ ಗೆಟಪ್ ತೊಟ್ಟಿದ್ದ ಶಿವಣ್ಣ, ಈಗ ಚಿತ್ರದ ಕ್ಲೈಮ್ಯಾಕ್ಸ್ ಗಾಗಿ ಟ್ರಕ್ ಡ್ರೈವರ್ ಆಗಿಯೂ ಕಾಣಿಸಿಕೊಂಡಿದ್ದಾರೆ.

ಟ್ರಕ್ ಓಡಿಸಿದ 'ಟಗರು' ಶಿವಣ್ಣ

ರಿಯಾಲಿಸ್ಟಿಕ್ ಸನ್ನಿವೇಶಗಳು, ಅದ್ಧೂರಿ ಆಕ್ಷನ್ ದೃಶ್ಯಗಳ ಚಿತ್ರೀಕರಣಕ್ಕೆ ಹೆಸರುವಾಸಿಯಾದ ನಿರ್ದೇಶಕ ದುನಿಯಾ ಸೂರಿ 'ಟಗರು' ಚಿತ್ರದ ಕ್ಲೈಮ್ಯಾಕ್ಸ್ ಗಾಗಿ, ಈಗ ಶಿವಣ್ಣದ ಕೈಯಲ್ಲಿ ಟ್ರಕ್ ಡ್ರೈವಿಂಗ್ ಮಾಡಿಸಿದ್ದಾರೆ.['ಸಿದ್ದಗಂಗಾ ಮಠ'ದಲ್ಲಿ ಶಿವಣ್ಣನ 'ಟಗರು' ಶೂಟಿಂಗ್!]

ಅದ್ಧೂರಿ ಸೆಟ್ ನಲ್ಲಿ 'ಟಗರು' ಕ್ಲೈಮ್ಯಾಕ್ಸ್

ಚಿತ್ರದ ಕ್ಲೈಮ್ಯಾಕ್ಸ್ ಗಾಗಿ 6 ಎಕರೆಗಿಂತ ಹೆಚ್ಚು ಪ್ರದೇಶದಲ್ಲಿ ಜಾತ್ರೆಯ ಸೆಟ್ ಹಾಕಿದ್ದು, ಈ ಸನ್ನಿವೇಶದಲ್ಲಿ ಖಳನಟನಾಗಿರುವ ಧನಂಜಯ್ ಮತ್ತು 50 ಕ್ಕೂ ಹೆಚ್ಚು ಜನರ ಜೊತೆ ಶಿವಣ್ಣ ಫೈಟ್ ಮಾಡಲಿದ್ದಾರೆ. ಆ ಸಂದರ್ಭದ ಚಿತ್ರೀಕರಣದಲ್ಲಿ ಶಿವಣ್ಣ ದೊಡ್ಡ ಟ್ರಕ್ ಓಡಿಸುತ್ತಾ ಕಾಣಿಸಿಕೊಂಡ ದೃಶ್ಯವಿದು.['ಡಬ್ಬಿಂಗ್ ಬರಲಿ ಬಿಡಿ': ದುನಿಯಾ ಸೂರಿ ಕೊಟ್ಟ ಚಾಲೆಂಜಿಂಗ್ ಉತ್ತರ!]

'ಕ್ಲೈಮ್ಯಾಕ್ಸ್' ಫೈಟ್ ಗೆ ಜಾಲಿ ಬ್ಯಾಸ್ಟಿನ್ ಸ್ಟಂಟ್

'ಟಗರು' ಚಿತ್ರದ ಅಂತಿಮ ಘಟ್ಟದಲ್ಲಿ ನಡೆಯುವ ಕಾಳಗದಲ್ಲಿ ಹೊಸ ಬಗೆಯ ಆಕ್ಷನ್ ದೃಶ್ಯಗಳಿದ್ದು, ಸ್ಟಂಟ್ ಮಾಸ್ಟರ್ ಜಾಲಿ ಬಾಸ್ಟಿನ್ ನಿರ್ದೇಶನ ಮಾಡಿದ್ದಾರೆ.

ದೊಡ್ಡ ತಾರಾಬಳಗದಲ್ಲಿ 'ಟಗರು'

ಶಿವಣ್ಣ ಅವರಿಗೆ ಮಾನ್ವಿತಾ ಹರೀಶ್ ಜೊತೆಯಾಗಿದ್ದು, ನಟ ಧನಂಜಯ್, ವಸಿಷ್ಠ ಸಿಂಹ, ಭಾವನಾ ಮತ್ತು ಇತರರು ಅಭಿನಯಿಸಿದ್ದಾರೆ.

English summary
Kannada Actor Shivarajkumar to do a wheelie with a truck for 'Duniya' Soori directorial 'Tagaru' Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada